Advertisement

ತಮಿಳು ನಾಡಿನಲ್ಲಿ ಡಿ ಎಮ್ ಕೆ, ಕಾಂಗ್ರೆಸ್ ನ ವಿಳಾಸ ಇಲ್ಲದಂತೆ ಮಾಡಿ : ಅಮಿತ್ ಶಾ

03:52 PM Apr 03, 2021 | Team Udayavani |

ಚೆನ್ನೈ : ಅಭಿವೃದ್ಧಿ ನಮ್ಮಿಂದ ಮಾತ್ರ ಆಗಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Advertisement

ತೇನಾಂಪೇಟ್ ನಲ್ಲಿ ರೋಡ್ ಶೋ  ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾ, ತಮಿಳು ನಾಡಿನಲ್ಲಿ ಡಿ ಎಮ್ ಕೆ ಹಾಗೂ ಕಾಂಗ್ರೆಸ್ ನ ವಿಳಾಸ ಇಲ್ಲದ ಹಾಗೆ ಮಾಡಿ ಎಂದು ಮತದಾದರನ್ನು ಕೇಳಿಕೊಂಡಿದ್ದಾರೆ.

ಎಐಎಡಿಎಂಕೆ ಹಾಗೂ  ಬಿಜೆಪಿ ಮೈತ್ರಿ ತಮಿಳು ನಾಡಿನ ಅಧಿಕಾರ ಹಿಡಿದರೆ ಮಾತ್ರ ತಮಿಳುನಾಡು ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯ, ರಾಜ್ಯದ ಮಹಿಳೆಯರು, ಯುವಕರಿಗೆ, ನಿರುದ್ಯೋಗಿಗಳಿಗೆ, ಮೀನುಗಾರರಿಗೆ ನಾವು ಮಾತ್ರ ರಕ್ಷಣೆ ನೀಡಬಲ್ಲೆವು. ತಮಿಳು ನಾಡಿನ ಸಮೃದ್ಧ ಸಂಸ್ಕೃತಿಯ ರಕ್ಷಣೆ ನಮ್ಮಿಂದ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಓದಿ : 50% ಅದೇಶಕ್ಕೆ ಕನ್ನಡ ಚಿತ್ರರಂಗಕ್ಕೆ ಆಘಾತ : ಸರ್ಕಾರಕ್ಕೆ ತಾರೆಯರ ಒಕ್ಕೂರಲಿನ ಮನವಿ  

ತಮಿಳು ನಾಡಿನಲ್ಲಿ ಡಿ ಎಮ್ ಕೆ ಹಾಗೂ ಕಾಂಗ್ರೆಸ್ ನ ವಂಶಪಾರಂಪರ್ಯ ರಾಜಕಾರಣಕ್ಕೆ ಪೂರ್ಣ ಬಿಂದು ಇಟ್ಟಾಗ ಮಾತ್ರ ತಮಿಳು ನಾಡು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ದೇಶದಲ್ಲಿ ಪ್ರಧಾನಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯನ್ನು ಕಾಣುತ್ತಿದೆ. ತಮಿಳು ನಾಡು ಕೂಡ ಅಭಿವೃದ್ದಿಯಾಗಬೇಕೆಂದರೇ, ನೀವು ನಮಗೆ ಮತ ಚಲಾಯಿಸಬೇಕು ಎಂದರು.

Advertisement

ಇನ್ನು ಥೌಸಂಡ್ ಲೈಟ್ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಖುಷ್ಬೂ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಅವರನ್ನು ಗೆಲ್ಲಿಸಿ. ಅವರು ನಿಮ್ಮ ವಿಧಾನ ಸಭಾ ಕ್ಷೇತ್ರವನ್ನು ಖಂಡಿತವಾಗಿ ಪ್ರಗತಿಯತ್ತ ಕೊಂಡೊಯ್ಯುತ್ತಾರೆ ಎಂದು ಭರವಸೆ ನೀಡಿದರು.

ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಥೌಸಂಡ್ ಲೈಟ್ ವಿಧಾನ ಸಭಾ ಕ್ಷೇತ್ರದ  ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಖುಷ್ಬೂ, ಅಮ್ಮನ ಆಡಳಿತ ತಮಿಳುನಾಡಿನಲ್ಲಿ ಮತ್ತೆ ಕಾಣಬೇಕೆಂದರೇ ನಮ್ಮ ಮೈತ್ರಿ -ಪಕ್ಷವನ್ನು ನೀವು ಗೆಲ್ಲಿಸಿ ಅಧಿಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ.

ಓದಿ : ಐಪಿಎಲ್ ಗೆ ಕೋವಿಡ್ ಕಾಟ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಆಟಗಾರನಿಗೆ ಕೋವಿಡ್ ಪಾಸಿಟಿವ್

Advertisement

Udayavani is now on Telegram. Click here to join our channel and stay updated with the latest news.

Next