ಚೆನ್ನೈ: ಸುಭೀಕ್ಷಾ ಸುಬ್ರಮಣಿ ತಮಿಳುನಾಡಿನ ಬ್ರಾಹ್ಮಣ ಕುಟುಂಬಕ್ಕೆ ಸೇರಿರುವ ಹುಡುಗಿ. ಟೀನಾ ದಾಸ್ ಬಾಂಗ್ಲಾದ ಹಿಂದೂ ಸಮುದಾಯದ ಹುಡುಗಿ. ಅವರಿಬ್ಬರು ಇತ್ತೀಚೆಗೆ ಚೆನ್ನೈನಲ್ಲಿ ತಮಿಳು ಬ್ರಾಹ್ಮಣ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ಮೂಲಕ ಹೆಣ್ಣು-ಹೆಣ್ಣಿನ ನಡುವೆಯೂ ದಾಂಪತ್ಯ ಸಾಧ್ಯ ಎಂದು ಕೂಗಿ ಹೇಳಿದ್ದಾರೆ.
ಸುಭೀಕ್ಷಾ(29) ಮತ್ತು ಅವಳ ತಂದೆ ತಾಯಿ ಕೆನಡಾದಲ್ಲಿ ವಾಸವಿದ್ದಾರೆ. ಹಾಗೆಯೇ ಟೀನಾ ಕೂಡ ಕೆನಡಾದಲ್ಲಿಯೇ ಇದ್ದು, ಆರು ವರ್ಷದ ಹಿಂದೆ ಭೇಟಿಯಾದ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ. ಮನೆಯವರನ್ನು ಒಪ್ಪಿಸಿದ ಸುಭೀಕ್ಷಾ ಕೆನಡಾದಿಂದ ಚೆನ್ನೈಗೆ ಬಂದು, ತಾಯ್ನೆಲದಲ್ಲಿಯೇ ವಿವಾಹವಾಗಿದ್ದಾರೆ.
ಸುಭೀಕ್ಷಾಗೆ 19 ವರ್ಷದವರಿದ್ದಾಗಲೇ ತಾವು ದ್ವಿಲಿಂಗಿ ಎನ್ನುವುದು ತಿಳಿದುಬಂದಿದ್ದು, ಅದನ್ನು ಕುಟುಂಬದವರಿಗೆ ಹೇಳಿದ್ದಾಳೆ.
ಹಾಗೆಯೇ ಟೀನಾ ಸಲಿಂಗಕಾಮಿ ಆಗಿದ್ದು, ಅದನ್ನರಿಯದ ಕುಟುಂಬ ಅವಳಿಗೆ 19 ವರ್ಷವಿದ್ದಾಗಲೇ ಮದುವೆ ಮಾಡಿದೆ. ನಾಲ್ಕು ವರ್ಷಗಳ ಕಾಲ ಕಷ್ಟದಿಂದ ಸಂಸಾರ ನಡೆಸಿದ ಅವಳು ನಂತರ ದಾಂಪತ್ಯದಿಂದ ಹೊರಬಂದಿದ್ದಾಳೆ. ಸುಭೀಕ್ಷಾ ಜತೆ ಟೀನಾ ಪ್ರೀತಿಯಲ್ಲಿರುವುದು ತಿಳಿದ ತಕ್ಷಣ ಆಕೆಯ ಕುಟುಂಬವೂ ಅವಳನ್ನು ದೂರ ತಳ್ಳಿದೆ.
ಪೋಷಕರ ಅನುಪಸ್ಥಿತಿಯಲ್ಲಿಯೇ ಟೀನಾ, ಸುಭೀಕ್ಷಾಳನ್ನು ಮದುವೆಯಾಗಿದ್ದಾಳೆ.