Advertisement

ತಮಿಳುನಾಡು: ರಾಜ್ಯಪಾಲರ ಅಧಿಕಾರ ಮೊಟಕಿಗೆ ವಿಧೇಯಕ

02:20 AM Apr 26, 2022 | Team Udayavani |

ಚೆನ್ನೈ: ತಮಿಳುನಾಡಿನ ವಿಶ್ವವಿದ್ಯಾಲಯಗಳಿಗೆ ಕುಲ ಪತಿಗಳನ್ನು ನೇಮಿಸುವ ವಿಚಾರದಲ್ಲಿ ರಾಜ್ಯಪಾಲರಿಗೆ ಇರುವ ಪರಮಾಧಿಕಾರವನ್ನು ಮೊಟಕುಗೊಳಿಸುವ ಕುರಿ ತಾದ ವಿಧೇಯಕವನ್ನು ತಮಿಳುನಾಡು ಸರಕಾರ ಸಿದ್ಧಪಡಿಸಿದೆ.

Advertisement

ಸೋಮವಾರ ನಡೆದ ತಮಿಳುನಾಡು ವಿಧಾನಸಭಾ ಕಲಾಪದಲ್ಲಿ “ವಿಶ್ವವಿದ್ಯಾನಿಲಯಗಳ ಕಾನೂನು ತಿದ್ದುಪಡಿ ಮಸೂದೆ’ಯನ್ನು ಸಿಎಂ ಸ್ಟಾಲಿನ್‌ ಮಂಡಿಸಿದ್ದಾರೆ.

“ಕುಲಪತಿಗಳನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಕ್ಕೆ ಇಲ್ಲದಿರುವುದರಿಂದ ಅನುಭವಿಗಳನ್ನು ತಂದು ಆ ಸ್ಥಾನಗಳಲ್ಲಿ ತಂದು ಕೂರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಇದರಲ್ಲಿ ರಾಜ್ಯ ಸರಕಾರಗಳಿಗೇ ಪರಮಾಧಿ ಕಾರ ಕೊಡಬೇಕು. ಪ್ರಧಾನಿ ಮೋದಿ ಅವರ ಗುಜರಾತ್‌ನಲ್ಲಿ ಈ ಮಾದರಿ ಜಾರಿಯಲ್ಲಿದೆ ಎಂದಿದ್ದಾರೆ ಸ್ಟಾಲಿನ್‌.

ಆದಾಯಕ್ಕೆ ಮತ್ತೆರಡು ರಾಜ್ಯಗಳ ಕೋರಿಕೆ
ರಾಜ್ಯದಲ್ಲಿ ಯಾವುದೇ ವಿಮಾನನಿಲ್ದಾಣವನ್ನು ಕೇಂದ್ರ ಸರಕಾರವು ಖಾಸಗೀಕರಣಗೊಳಿಸಿದರೆ, ಅದರಿಂದ ಬಂದ ಆದಾಯವನ್ನು ರಾಜ್ಯ ಸರಕಾರಗಳೊಂದಿಗೆ ಹಂಚಿಕೊಳ್ಳಬೇಕು ಎಂಬ ತಮಿಳುನಾಡು ಸರಕಾರದ ಆಗ್ರಹಕ್ಕೆ ಈಗ ಜಾರ್ಖಂಡ್‌ ಹಾಗೂ ಛತ್ತೀಸ್‌ಗಢ ರಾಜ್ಯಗಳೂ ಧ್ವನಿಗೂಡಿಸಿವೆ. ಏರ್‌ಪೋರ್ಟ್‌ ನಿರ್ಮಾಣಕ್ಕಾಗಿ ರಾಜ್ಯ ಸರಕಾರವೇ ಭೂಸ್ವಾಧೀನ ಮಾಡಿಕೊಂಡು, ಆ ಭೂಮಿಯನ್ನು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಉಚಿತವಾಗಿ ನೀಡುತ್ತದೆ.

ಕೇಂದ್ರ ಸರಕಾರವು ಆ ಭೂಮಿಯನ್ನು ಮೂರನೇ ವ್ಯಕ್ತಿಗೆ(ಖಾಸಗೀಕರಣ) ವರ್ಗಾಯಿಸುತ್ತದೆ ಎಂದರೆ, ಅದರಿಂದ ಬರುವ ಆದಾಯವನ್ನು ಕೇಂದ್ರವು ನಮ್ಮೊಂದಿಗೆ ಹಂಚಿಕೊಳ್ಳಬೇಕು ಎನ್ನುವುದು ರಾಜ್ಯಗಳ ವಾದ. ಇದೇ ವಾದವನ್ನು ಈಗ ಛತ್ತೀಸ್‌ಗಢ, ಜಾರ್ಖಂಡ್‌ ಸರಕಾರಗಳೂ ಕೇಂದ್ರ ಸರಕಾರದ ಮುಂದಿಟ್ಟಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next