ಚೆನ್ನೈ : ತಮಿಳುನಾಡು ಮತ್ತು ಪದುಚೇರಿಯ ಕೆಲವು ಪ್ರದೇಶಗಳಲ್ಲಿ ಭಾರಿ ಯಿಂದ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಇದೇ ರೀತಿ ಕೇರಳ ಮತ್ತು ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಕೂಡ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಅದು ಹೇಳಿದೆ.
ಹವಾಮಾನ ಇಲಾಖೆಯ ಈ ಎಚ್ಚರಿಕೆಯನ್ನು ಅನುಸರಿಸಿ ಇಂದು ಗುರುವಾರವೇ ಚೆನ್ನೈ ನಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಚೆನ್ನೈ ಕಲೆಕ್ಟರ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ತಮಿಳು ನಾಡು ಕಳೆದ ನಾಲ್ಕು ವಾರಗಳಿಂದ ಅತ್ಯಂತ ಉಗ್ರ ಪ್ರತಾಪಿ ಗಜ ಚಂಡಮಾರುತದ ಪ್ರಹಾರಕ್ಕೆ ನಲುಗಿ ಹೋಗಿದೆ. ಇದರ ಪರಿಣಾಮವಾಗಿ 11 ಮಂದಿ ಮೃತಪಟ್ಟಿದ್ದಾರೆ.
ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಇಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಗಜ ಚಂಡಮಾರುತದಿಂದ ಆಗಿರುವ ನಾಶ ನಷ್ಟದ ವಿವರಗಳನ್ನು ನೀಡಲಿದ್ದಾರೆ. ಅಂತೆಯೇ ಇದನ್ನು ಭರಿಸುವುದಕ್ಕೆ ಕೇಂದ್ರದಿಂದ ಪರ್ಯಾಪ್ತ ಪ್ರಮಾಣದ ನೆರವು ಪರಿಹಾರದ ಪ್ಯಾಕೇಜ್ ಕೋರಲಿದ್ದಾರೆ.