Advertisement

ಕೋವಿಡ್ ನಿಂದ ದೂರವಿರಲು ಹಾವು ತಿಂದ ತಮಿಳುನಾಡಿನ ವ್ಯಕ್ತಿಯ ಬಂಧನ

11:13 AM May 28, 2021 | Team Udayavani |

ಚೆನ್ನೈ: ಕೋವಿಡ್ 19 ಸೋಂಕು ತಾಗಬಾರದು ಎಂಬ ಉದ್ದೇಶದಿಂದ ಹಾವೊಂದನ್ನು ತಿಂದ ತಮಿಳುನಾಡಿನ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ತಿರುನೆಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲ್ ಎಂಬಾತನೇ ಹಾವು ತಿಂದ ಭೂಪ. ತಾನು ಹಾವು ತಿನ್ನುವುದನ್ನು ವಿಡಿಯೋ ಮಾಡಿಸಿರುವ ಈತ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಿಸರ ಪ್ರೇಮಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಡಿವೇಲ್ ನನ್ನು ಬಂಧಿಸಿದ್ದು,  7500  ರೂ. ದಂಡ ವಿಧಿಸಿದ್ದಾರೆ.

ಈತ ತನ್ನ ಗದ್ದೆಯಲ್ಲಿ ಸಿಕ್ಕ ಹಾವನ್ನು ಹಿಡಿದಿದ್ದಾನೆ. ಹಾವನ್ನು ಕೊಂದು ನಂತರ ಅದನ್ನು ತಿಂದಿದ್ದಾನೆ. ಕೋವಿಡ್ ವೈರಸ್ ನ್ನು ದೂರವಿಡಲು ಸರಿಸೃಪಗಳ ಭಕ್ಷಣೆ ಉತ್ತಮ ಎಂದು ವಡಿವೇಲ್ ವಿಡಿಯೋದಲ್ಲಿ ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next