ಚೆನ್ನೈ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ತಮಿಳುನಾಡು ಸರ್ಕಾರ ರಾಜ್ಯದ ರೈತರಿಗೆ ಬಂಪರ್ ಕೊಡುಗೆಯನ್ನೇ ಘೋಷಿಸಿದೆ.
ಸಹಕಾರಿ ಬ್ಯಾಂಕುಗಳಿಂದ ಸಾಲದ ಪಡೆದಿರುವ 16.43 ಲಕ್ಷ ರೈತರ ಬರೋಬ್ಬರಿ 12,110 ಕೋಟಿ ರೂ. ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ.
ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಈ ವಿಚಾರವನ್ನು ತಿಳಿಸಿದ ಅವರು, ತತ್‌ಕ್ಷಣದಿಂದಲೇ ಸಾಲ ಮನ್ನಾ ಯೋಜನೆ ಜಾರಿಗೆ ಬರಲಿದ್ದು, ಇದಕ್ಕೆ ಅಗತ್ಯವಾದ ಹಣಕಾಸನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ಪ್ರಥಮ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ದಿನಾಂಕ ಫೆಬ್ರವರಿ 13 ರವರೆಗೆ ವಿಸ್ತರಣೆ
ಸತತ 2 ಬಾರಿ ಅಪ್ಪಳಿಸಿದ ಚಂಡಮಾರುತ, ಅಕಾಲಿಕ ಮಳೆ, ಬೆಳೆ ಹಾನಿ ಮತ್ತು ಲಾಕ್‌ಡೌನ್‌ನಿಂದಾಗಿ ರೈತರು ಸಂಕಷ್ಟಕ್ಕೆ ನೂಕಲ್ಪಟ್ಟಿದ್ದಾರೆ. ಕೃಷಿ ಪುನಶ್ಚೇತನಕ್ಕಾಗಿ ಅನ್ನದಾತರಿಗೆ ನೆರವು ನೀಡಬೇಕಾದ್ದು ಮುಖ್ಯ ಎಂದು ಪಳನಿಸ್ವಾಮಿ ಹೇಳಿದ್ದಾರೆ.