Advertisement

58 ನಿಮಿಷಗಳಲ್ಲಿ 46 ಖಾದ್ಯ ಸಿದ್ಧ ತ.ನಾಡಿನ ಬಾಲಕಿ ವಿಶ್ವದಾಖಲೆ

01:30 AM Dec 17, 2020 | mahesh |

ಚೆನ್ನೈ: ಒಂದು ಗಂಟೆಯಲ್ಲಿ ಒಬ್ಬ ನಿಪುಣ ಬಾಣಸಿಗ ಎಷ್ಟು ಖಾದ್ಯ ಗಳನ್ನು ತಯಾರಿಸಬಲ್ಲ? ಹೋಗಲಿ ನೀವೆಷ್ಟು ಮಾಡ­ಬಲ್ಲಿರಿ? ಗರಿಷ್ಠ ಹತ್ತು ಎನ್ನಬಹುದೇನೋ?

Advertisement

ಕೇರಳದ 10 ವರ್ಷದ ಬಾಲಕಿಯೊಬ್ಬಳು 1 ಗಂಟೆಯೊಳಗೆ 30 ಖಾದ್ಯಗಳನ್ನು ತಯಾರಿಸಿ ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ್ದಳು. ಇದೀಗ ತಮಿಳುನಾಡಿನ ಸಿ.ಎನ್‌.ಲಕ್ಷ್ಮೀ ಸಾಯಿ ಶ್ರೀ ಎಂಬ ಬಾಲಕಿ ಬರೀ 58 ನಿಮಿಷಗಳಲ್ಲಿ 46 ಖಾದ್ಯಗಳನ್ನು ತಯಾರಿಸಿ, ಎಲ್ಲರನ್ನೂ ದಂಗುಬಡಿಸಿದ್ದಾಳೆ. ಎಲ್ಲವೂ ತಮಿಳುನಾಡಿನ ಸಾಂಪ್ರದಾಯಿಕ ಆಹಾರಗಳು. ಈ ಘಟನೆಯನ್ನು ಖುದ್ದು ವೀಕ್ಷಿಸಿದ ಗಿನ್ನೆಸ್‌ ಅಧಿಕಾರಿಗಳು ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಅಂದಹಾಗೆ ಆಕೆ ಈ ಕೌಶಲ ಕಲಿತಿದ್ದು ಕೊರೊನಾ ದಿಗ್ಬಂಧನದ ವೇಳೆ. ಆ ವೇಳೆ ತಾಯಿ ಕಲೈಮಗಳ್‌ರೊಂದಿಗೆ ಜಾಸ್ತಿ ಬೆರೆಯುತ್ತಿದ್ದ ಲಕ್ಷ್ಮೀ ಒಂದೊಂದೇ ಖಾದ್ಯಗಳನ್ನು ಕಲಿಯುತ್ತ ಹೋದಳು. ಈ ವೇಗವನ್ನು ನೋಡಿ ವಿಶ್ವದಾಖಲೆಗೆ ಸ್ಪರ್ಧಿಸುವ ಮನಸ್ಸನ್ನು ಮಾಡಿ, ಅದರಲ್ಲಿ ಯಶಸ್ವಿಯಾಗಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next