Advertisement

ಭೇಟಿಗೆ ಮೋದಿ ನಕಾರ; ಪ್ರಧಾನಿ ಕಚೇರಿ ಬಳಿ ರೈತರ ನಗ್ನ ಪ್ರತಿಭಟನೆ!

01:19 PM Apr 10, 2017 | Sharanya Alva |

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕುಪಿತಗೊಂಡ ಪ್ರತಿಭಟನಾ ನಿರತ ತಮಿಳುನಾಡಿನ ಕೆಲವು ರೈತರು ನಗ್ನವಾಗಿ ಓಡಿ ಪ್ರತಿಭಟನೆಗಿಳಿದ ಘಟನೆ ಸೋಮವಾರ ನಡೆಯಿತು.

Advertisement

ರೈತರ ತೊಂದರೆ ಕುರಿತು ಪ್ರಧಾನಿ ಸಚಿವಾಲಯಕ್ಕೆ ತೆರಳಿ ಮನವಿ ಪತ್ರ ನೀಡಲು ಮುಂದಾಗಿದ್ದರು. ಆದರೆ ಯಾವುದೇ ಅಧಿಕಾರಿಗಳನ್ನಾಗಲಿ, ಪ್ರಧಾನಿಯನ್ನಾಗಲಿ ಭೇಟಿಯಾಗಲು ಅವಕಾಶ ನಿರಾಕರಿಸಲಾಗಿತ್ತು.

ಇದರಿಂದ ಆಕ್ರೋಶಗೊಂಡ ತಮಿಳುನಾಡಿನ ರೈತರು ಕಳೆದ 28 ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಪ್ರಧಾನಿ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ಕೆಲವು ರೈತರು ಇಂದು ವಾಹನಗಳ ಮೇಲೆ ಹಾರಿ, ತಮ್ಮ ಮೈಮೇಲಿದ್ದ ಬಟ್ಟೆಗಳನ್ನೆಲ್ಲಾ ಕಿತ್ತೆಸೆದು ನಗ್ನನವಾಗಿ ಪ್ರತಿಭಟನೆ ನಡೆಸಿದರು. ಪೊಲೀಸರು ಕೂಡಲೇ ಅವರನ್ನೆಲ್ಲ ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕೆಲವು ರೈತರು ರಸ್ತೆ ಮೇಲೆ ಓಡಿದ್ದು, ಅವರನ್ನೆಲ್ಲ ಪೊಲೀಸರು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದರು. ಅಯ್ಯಕಣ್ಣು ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಂಧಿತ ಅಯ್ಯಕಣ್ಣು ಸುದ್ದಿಗಾರರ ಜೊತೆ ಮಾತನಾಡುತ್ತ, ಪ್ರಧಾನಿ ಮೋದಿ ಅವರು ನಮ್ಮ ಭೇಟಿಗೆ ನಿರಾಕರಿಸಿದ್ದರು. ಹಾಗಾಗಿ ನಾವು ಯಾಕೆ ನಗ್ನವಾಗಿ ಓಡಬಾರದು. ನಮ್ಮ ರಾಜ್ಯದ ರೈತರ ದುಸ್ಥಿತಿ ಕೇಳೋರಾರು ಎಂದು ಅಸಮಾಧಾನವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next