ಚೆನ್ನೈ: ತಮಿಳುನಾಡು ಸರ್ಕಾರ ಕೋವಿಡ್ 19 ಸೋಂಕು ಎರಡನೇ ಅಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತೊಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಿರುವುದಾಗಿ ಶನಿವಾರ(ಮೇ 22) ಘೋಷಿಸಿದೆ.
ಇದನ್ನೂ ಓದಿ:ತಾಯಿಯಾದ ಗಾಯಕಿ : ಶ್ರೇಯಾ ಘೋಷಾಲ್ ಮನೆಗೆ ಹೊಸ ಅತಿಥಿ ಆಗಮನ
ಲಾಕ್ ಡೌನ್ ನಿರ್ಬಂಧ ಭಾನುವಾರದಿಂದ (ಮೇ 23) ಜಾರಿಯಾಗಲಿದ್ದು, ಈ ಹಿಂದಿನ ಆದೇಶದಂತೆ ಮೇ 24ರಂದು ಲಾಕ್ ಡೌನ್ ಅವಧಿ ಕೊನೆಗೊಳ್ಳಲಿದೆ. ಶುಕ್ರವಾರ ತಮಿಳುನಾಡಿನಲ್ಲಿ ಕೋವಿಡ್ ನಿಂದ 467 ಮಂದಿ ಸಾವನ್ನಪ್ಪಿದ್ದರು.
ಕಳೆದ 24ಗಂಟೆಗಳಲ್ಲಿ ರಾಜ್ಯದಲ್ಲಿ 36,184 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆಯ ಅಂಕಿಅಂಶ ತಿಳಿಸಿದೆ. ಗುರುವಾರ 35,579 ಕೋವಿಡ್ ಪ್ರಕರಣ ವರದಿಯಾಗಿತ್ತು.
ತಮಿಳುನಾಡಿನಲ್ಲಿ ಒಟ್ಟು 2,74,629 ಕೋವಿಡ್ 19 ಪ್ರಕರಣ ವರದಿಯಾಗಿದೆ. ಅಲ್ಲದೇ ರಾಜ್ಯದಲ್ಲಿನ ಪಾಸಿಟಿವ್ ದರ ಶೇ.21.8ರಷ್ಟಿದೆ ಎಂದು ತಿಳಿಸಿದೆ. ಹೊಸ ಮಾರ್ಗಸೂಚಿ ಪ್ರಕಾರ, ಶನಿವಾರ ಮತ್ತು ಭಾನುವಾರ ರಾತ್ರಿ ಒಂಬತ್ತು ಗಂಟೆವರೆಗೆ ಅಂಗಡಿಗಳು ತೆರದಿರಲಿದೆ. ತರಕಾರಿ, ಹಣ್ಣು ಸರಬರಾಜು ಎಂದಿನಂತೆ ಮುಂದುವರಿಯಲಿದೆ. ಆದರೆ ಎಲ್ಲಾ ಮಾಲ್ ಗಳನ್ನು ಬಂದ್ ಮಾಡಬೇಕೆಂದು ತಿಳಿಸಿದೆ.