Advertisement

ತಮಿಳುನಾಡಿನಲ್ಲಿ ಕೋವಿಡ್ 19 ಲಾಕ್ ಡೌನ್ ಜೂನ್ 28ರವರೆಗೆ ವಿಸ್ತರಣೆ, ನಿರ್ಬಂಧ ಸಡಿಲಿಕೆ

02:17 PM Jun 20, 2021 | Team Udayavani |

ಚೆನ್ನೈ: ಕೋವಿಡ್ 19 ಸೋಂಕು ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಇನ್ನೂ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಿರುವುದಾಗಿ ಭಾನುವಾರ(ಜೂನ್ 20) ಘೋಷಿಸಿದೆ. ತಮಿಳುನಾಡಿನಲ್ಲಿ ಇನ್ನಷ್ಟು ಕೋವಿಡ್ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಮೂಲಕ ಜೂನ್ 28ರವರೆಗೆ ಲಾಕ್ ಡೌನ್ ವಿಸ್ತರಿಸಿರುವುದಾಗಿ ತಿಳಿಸಿದೆ.

Advertisement

ಇದನ್ನೂ ಓದಿ:ಅಪ್ಪಂದಿರ ದಿನವೇ ದುರಂತ: ತನ್ನ ಇಬ್ಬರು ಮುದ್ದು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಂದೆ.!

ಚೆನ್ನೈ, ತಿರುವಳ್ಳೂರ್, ಕಾಂಚಿಪುರಂ ಹಾಗೂ ಚೆಂಗಲ್ ಪೇಟ್ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದೆ. ಅದೇ ರೀತಿ ಮೆಟ್ರೋ ರೈಲು ಸಂಚಾರಕ್ಕೂ ಅನುಮತಿ ನೀಡಿರುವುದಾಗಿ ಹೇಳಿದೆ.

ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ನಿರ್ಬಂಧ ಸಡಿಲಿಕೆ ಮಾಡಿರುವುದಾಗಿ ತಿಳಿಸಿರುವ ತಮಿಳುನಾಡು ಸರ್ಕಾರ, ಸಿನಿಮಾ ಮತ್ತು ಟೆಲಿವಿಷನ್ ಸೀರಿಯಲ್ ಶೂಟಿಂಗ್ ಅನ್ನು ಗರಿಷ್ಠ ನೂರು ಮಂದಿ ಮಿತಿಯೊಂದಿಗೆ ಆರಂಭಿಸಲು ಅನುಮತಿ ನೀಡಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next