ಚೆನ್ನೈ: “ನಮ್ಮ ರಸ್ತೆ ಎಷ್ಟು ಕೆಟ್ಟದಾಗಿದೆ ಎಂದರೆ ನಾನು ಕಾರು ಬಿಟ್ಟು ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿದೆ..” ಇದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬರೆದ ಪತ್ರದ ಒಕ್ಕಣೆ.
ಚೆನ್ನೈ ಮತ್ತು ರಾಣಿಪೇಟ್ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡಿಕೊಡಲು ಸ್ಟಾಲಿನ್ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ಈ ರಸ್ತೆ ವಿಭಾಗವು ಚೆನ್ನೈ ಮತ್ತು ಅದರ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು ಮತ್ತು ಕೃಷ್ಣಗಿರಿಯ ಕೈಗಾರಿಕಾ ಕ್ಲಸ್ಟರ್ ಗಳಿಗೆ ಪ್ರಮುಖ ಸಂಪರ್ಕ ನೀಡುತ್ತದೆ ಎಂದು ಸ್ಟಾಲಿನ್ ಹೈಲೈಟ್ ಮಾಡಿದ್ದಾರೆ. ಡಿಎಂಕೆ ಸಂಸದ ದಯಾನಿಧಿ ಮಾರನ್ ಸಂಸತ್ತಿನಲ್ಲಿ ಮಾಡಿದ ಮನವಿಗೆ ಕೇಂದ್ರ ಸಚಿವರು ನೀಡಿದ ಉತ್ತರ ‘ಬಹಳ ಸಾಮಾನ್ಯವಾಗಿತ್ತು ಮತ್ತು ‘ಬದ್ಧತೆ ಇಲ್ಲ’ದ ಉತ್ತರವಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ:ಇತಿಹಾಸದಲ್ಲೇ ಮೊದಲ ಬಾರಿಗೆ ಏರ್ ಇಂಡಿಯಾದಿಂದ ಬರೋಬ್ಬರಿ 500 ವಿಮಾನ ಖರೀದಿ
“ಸಂಸದ ಮಾರನ್ ಅವರು ಸಂಸತ್ತಿನಲ್ಲಿ ಮಾಡಿದ ಮನವಿಯನ್ನು ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ. ಈ ವಿಭಾಗವು ಚೆನ್ನೈ ನಗರ ಮತ್ತು ಅದರ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು ಮತ್ತು ಕೃಷ್ಣಗಿರಿಯ ಕೈಗಾರಿಕಾ ಸಮೂಹಗಳಿಗೆ ಪ್ರಮುಖ ಸಂಪರ್ಕವನ್ನು ಒದಗಿಸುತ್ತದೆ. ರಸ್ತೆಯ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ನಾನು ರೈಲಿನಲ್ಲಿ ಕೆಲವು ಜಿಲ್ಲೆಗಳಿಗೆ ನನ್ನ ಇತ್ತೀಚಿನ ಭೇಟಿಗಳನ್ನು ಯೋಜಿಸಬೇಕಾಗಿತ್ತು. ನಮ್ಮ ಸಂಸದರ ವಿನಂತಿಯು ಈ ಪ್ರಮುಖ ರಸ್ತೆಯಲ್ಲಿ ಬಹಳ ನಿರ್ದಿಷ್ಟವಾಗಿದ್ದರೂ, ನಿಮ್ಮ ಉತ್ತರದಿಂದ ನಾವು ನಿರಾಶೆಗೊಂಡಿದ್ದೇವೆ” ಎಂದು ಪತ್ರ ಬರೆದಿದ್ದಾರೆ.