ಚೆನ್ನೈ: ಲಿಫ್ಟ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕನಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಕಿರುಕುಳ ನೀಡಿದ ಘಟನೆ ತಮಿಳುನಾಡಿನ ವಿಲ್ಲಿವಕ್ಕಂ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಅಪ್ರಾಪ್ತ ಬಾಲಕ ಬೈಕ್ ನಲ್ಲಿ ಹೋಗುತ್ತಿದ್ದ ಬಾಲಚಂದ್ರನ್ (47) ಅವರ ಬಳಿ ಲಿಫ್ಟ್ ಕೇಳಿದ್ದಾನೆ. ಈ ವೇಳೆ ಬೈಕ್ ನಿಲ್ಲಿಸಿ ಬಾಲಕನಿಗೆ ಬಾಲಚಂದ್ರನ್ ಲಿಫ್ಟ್ ನೀಡಿದ್ದಾನೆ. ಗಾಡಿಯಲ್ಲಿ ಹೋಗುವ ವೇಳೆ ನಿರ್ಜನ ಪ್ರದೇಶವಾದ ಪಾಡಿ ಸೇತುವೆಯ ಕೆಳಗಿರುವ ಸ್ಥಳಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದಾನೆ.
ಇದನ್ನೂ ಓದಿ: State Budget: ಜುಲೈ 7ರಂದು ರಾಜ್ಯ ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ
ಬಾಲಕ ಬೈಕ್ ನಿಂದ ಕೆಳಗಿಳಿದು ಆಳುತ್ತಾ ಬರುತ್ತಿರುವಾಗ ಸ್ಥಳೀಯರು ಬಾಲಕನ ಬಳಿ ಏನಾತೆಂದು ಕೇಳಿದ್ದಾರೆ. ಆಗ ಬಾಲಕ ಕಿರುಕುಳ ನೀಡಿದ್ದರ ಬಗ್ಗೆ ಹೇಳಿದ್ದಾನೆ.
Related Articles
ಬಾಲಚಂದ್ರನ್ ಅವರ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಅಲ್ಲಿಂದ ಪರಾರಿ ಆಗಲು ಯತ್ನಿಸಿದ್ದಾರೆ. ಆತನ ವಾಹನವನ್ನು ಪರಿಶೀಲನೆ ನಡೆಸಿದಾಗ ಅದರೊಳಗೆ ಬಿಜೆಪಿಯ ಧ್ವಜವಿರುವುದು ಪತ್ತೆಯಾಗಿದೆ. ಪಕ್ಷದ ಕಾರ್ಯಾಗಾರದಲ್ಲಿ ಭಾಗವಹಿಸಿದ ಐಡಿ ಕಾರ್ಡ್ ಕೂಡ ಪತ್ತೆಯಾಗಿದೆ.ಆ ಬಳಿಕ ಆತನನ್ನು ಕಳುಹಿಸಲಾಗಿದೆ.
ಆದರೆ ಆ ಬಳಿಕ ಬಾಲಕನ ತಾಯಿ ವಿಲ್ಲಿವಕ್ಕಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಬಾಲಚಂದ್ರನ್ ಅವರನ್ನು ಬಂಧಿಸಲಾಗಿದೆ. ಈ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.