Advertisement
ಈ ಕುರಿತಂತೆ, ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಗೊತ್ತುವಳಿಗೆ ಸದನದ ಅಂಗೀಕಾರ ಸಿಕ್ಕಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಡಿಸಿದ್ದ ನಿರ್ಣಯ ವಿರೋಧಿಸಿದ ಬಿಜೆಪಿ ಸಭಾತ್ಯಾಗ ನಡೆಸಿದ್ದು, ಪ್ರಮುಖ ವಿಪಕ್ಷವಾದ ಎಐಎಡಿಎಂಕೆ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಸದಸ್ಯರು ಪಕ್ಷಭೇದ ಮರೆತು ನಿರ್ಣಯದ ಪರ ಮತಚಲಾಯಿಸಿದ್ದಾರೆ.
ಸಿಯುಇಟಿ ಪರಿಕಲ್ಪನೆಯಡಿ, ರಾಷ್ಟ್ರೀಯ ಪರೀûಾ ಪ್ರಾಧಿಕಾರ ನಡೆಸುವ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕಗಳ ಆಧಾರದ ಮೇಲೆ ರಾಜ್ಯಗಳ ಕೇಂದ್ರೀಯ ವಿವಿಗಳಲ್ಲಿ ಪ್ರವೇಶ ಕಲ್ಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಸಿಯುಇಟಿ ಪರೀಕ್ಷೆಗೆ ಸಮ್ಮತಿಸುವ ರಾಜ್ಯಗಳ ಸರ್ಕಾರಿ ಅಥವಾ ಖಾಸಗಿ ವಿಶ್ವವಿದ್ಯಾಲಯಗಳು ತಮ್ಮಲ್ಲಿನ ಪ್ರವೇಶಕ್ಕೂ ಸಿಯುಇಟಿ ಅಂಕಗಳ ಮಾನದಂಡವನ್ನೇ ಬಳಸಬಹುದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಅದನ್ನು ತಮ್ಮ ರಾಜ್ಯದಲ್ಲಿ ಅಳವಡಿಸದಿರಲು ನಿರ್ಧರಿಸಿದೆ.