Advertisement
ಕೇಂದ್ರ ಸರ್ಕಾರದ ವಿರುದ್ಧ “ಹಿಂದಿ ಹೇರಿಕೆ’ಯ ಆರೋಪಗಳು ಕೇಳಿಬಂದಿರುವ ನಡುವೆಯೇ ಪ್ರಧಾನಿ ಮೋದಿ ಅವರು ಆಡಿರುವ ಮಾತುಗಳಿವು.
Related Articles
Advertisement
ಹಲವು ಯೋಜನೆಗಳು: ತ.ನಾಡಿನಲ್ಲಿ ಲೈಟ್ ಹೌಸ್ ಯೋಜನೆಯನ್ವಯ ನಿರ್ಮಿಸಲಾದ 1,152 ಮನೆಗಳನ್ನು ಮೋದಿ ಉದ್ಘಾಟಿಸಿದ್ದಾರೆ. ಸಿಎಂ ಸ್ಟಾಲಿನ್ ಸಮ್ಮುಖದಲ್ಲಿ 2,960 ಕೋಟಿ ರೂ. ವೆಚ್ಚದ 5 ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. 75 ಕಿ.ಮೀ. ಉದ್ದದ ಮದುರೈ-ತೇಣಿ ರೈಲ್ವೆ ಗೇಜ್ ಪರಿವರ್ತನೆ ಯೋಜನೆ ಹಾಗೂ ಚೆನ್ನೈನಲ್ಲಿ 1430 ಕೋಟಿ ರೂ. ವೆಚ್ಚದ ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್‌ಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.
ನೀಟ್‌ನಿಂದ ವಿನಾಯಿತಿಗೆ ಒತ್ತಾಯಿಸಿದ ಸಿಎಂ ಸ್ಟಾಲಿನ್ :
“ಹಿಂದಿಯಂತೆಯೇ ತಮಿಳು ಭಾಷೆಯನ್ನೂ ಅಧಿಕೃತ ಭಾಷೆ ಎಂದು ಘೋಷಿಸಿ. ಮದ್ರಾಸ್ ಹೈಕೋರ್ಟ್‌ನಲ್ಲೂ ತಮಿಳನ್ನು ಅಧಿಕೃತ ಭಾಷೆಯಾಗಿಸಿ’. ಪ್ರಧಾನಿ ಮೋದಿಯ ವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ತ.ನಾಡು ಮುಖ್ಯ ಮಂತ್ರಿ ಎಂ.ಕೆ. ಸ್ಟಾಲಿನ್ ಅವರು ವೇದಿಕೆಯಲ್ಲೇ ಈ ಆಗ್ರಹ ವನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರೀಯ ವೈದ್ಯ ಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ನಿಂದ ತಮಿಳುನಾಡಿಗೆ ವಿನಾಯ್ತಿ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ. ಈ ಹಿಂದಿನಿಂದಲೂ ಡಿಎಂಕೆ ತಮಿಳಿಗೆ ಅಧಿಕೃತ ಮತ್ತು ಆಡಳಿತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಾ ಬಂದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ನೀಡಿದೆ.
ಪರಿವಾರವಾದಿ ಪಕ್ಷಗಳೇ ದೇಶದ ಶತ್ರು :
ತಮಿಳುನಾಡು ಭೇಟಿಗೂ ಮುನ್ನ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದ ಮೋದಿ ಅವರು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ 20ನೇ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದರು. ಅದಕ್ಕೂ ಮುಂಚೆ ಬೇಗುಂಪೇಟ್ ಏರ್‌ಪೋರ್ಟ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿವಾರವಾದಿ ಪಕ್ಷಗಳು ಯಾವತ್ತೂ ತಮ್ಮ ಕುಟುಂಬದ ಏಳಿಗೆಯನ್ನಷ್ಟೇ ನೋಡುತ್ತವೆ. ಹೀಗಾ ಗಿ, ಅಂಥ ಪಕ್ಷಗಳೇ ದೇಶದ ಅತಿದೊಡ್ಡ ಶತ್ರುಗಳು ಎಂದಿದ್ದಾರೆ. ಇದೇ ವೇಳೆ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಬಗ್ಗೆ ಪರೋಕ್ಷ ವಾಗ್ಧಾಳಿ ನಡೆಸಿದ ಅವರು, “ಮೌಡ್ಯವನ್ನು ಅನುಸರಿಸುವ ಜನರು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ನಂಬಿಕೆಯಿ ಟ್ಟವನು. ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೂ ಸಂತರಾಗಿದ್ದರೂ, ಅವರಿಗೆ ಮೂಢನಂಬಿಕೆಯಿಲ್ಲ. ಮೌಡ್ಯ ವ್ಯಕ್ತಿಗಳಿಂದ ನಾವು ತೆಲಂಗಾಣವನ್ನು ರಕ್ಷಿಸಬೇಕಿದೆ’ ಎಂದಿದ್ದಾರೆ.
ಸಿಎಂ ಕೆಸಿಆರ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮನೆಯ ವಾಸ್ತು ಬದಲಿಸಿದ್ದು, ಕ್ಯಾಂಪ್ ಆಫೀಸ್ ನವೀಕರಣ, ಫಾರ್ಮ್ ಹೌಸ್‌ನಲ್ಲಿ ಯಜ್ಞ ಆಯೋಜಿಸಿದ್ದನ್ನು ಟೀಕಿಸಿ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.
ತ.ನಾಡಲ್ಲಿ ಮೋದಿ ರೋಡ್ ಶೋ; ಭರ್ಜರಿ ಸ್ವಾಗತ :
ಗುರುವಾರ ಪ್ರಧಾನಿ ಮೋದಿ ಅವರಿಗೆ ತಮಿಳುನಾಡಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬಿಜೆಪಿ ಧ್ವಜವನ್ನು ಹಿಡಿದುಕೊಂಡು, ಘೋಷಣೆ ಕೂಗುತ್ತಾ ಸಾವಿರಾರು ಬಿಜೆಪಿ ಕಾರ್ಯಕರ್ತರು ಮೋದಿಯವರನ್ನು ಸ್ವಾಗತಿಸಿದ್ದಾರೆ. ಅಭಿಮಾ ನಿಗಳು “ವಣಕ್ಕಂ ಮೋದಿಜೀ’ ಎಂಬ ಫಲಕಗ ಳನ್ನು ಹಿಡಿದು, ಮೋದಿ ಪರ ಘೋಷಣೆ ಗಳನ್ನೂ ಕೂಗಿದ್ದಾರೆ. ರಸ್ತೆಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿವೆ. ಚೆನ್ನೈಗೆ ಬಂದಿಳಿದ ಬಳಿಕ ಮೋದಿ ಅವರು ರೋಡ್‌ಶೋವನ್ನೂ ನಡೆಸಿದ್ದಾರೆ.