Advertisement

ತಮಿಳು ದೇವ ಭಾಷೆ; ತಮಿಳಲ್ಲೇ ದೇಗುಲದಲ್ಲಿ ಪ್ರಾರ್ಥನೆ ನಡೆಯಲಿ : ಮದ್ರಾಸ್‌ ಹೈಕೋರ್ಟ್‌

11:09 PM Sep 13, 2021 | Team Udayavani |

ಚೆನ್ನೈ: ತಮಿಳು ಎನ್ನುವುದು ದೇವ ಭಾಷೆ ಯಾಗಿದೆ. ದೇಗುಲಗಳಲ್ಲಿ ನಡೆ ಯುವ ಧಾರ್ಮಿಕ ವಿಧಿ ವಿಧಾನಗಳು ತಮಿಳಿ ನಲ್ಲಿಯೇ ನಡೆಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ನ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

Advertisement

ನ್ಯಾ| ಎನ್‌.ಕಿರುಬಾ ಕರನ್‌ ಮತ್ತು ನ್ಯಾ| ಬಿ.ಪುಗಳೇಂದಿ ಅವರ ನ್ನೊಳಗೊಂಡ ನ್ಯಾಯಪೀಠ ಸಂತರಾಗಿರುವ ಅರುಣಗಿರಿ ನಾಥ, ಅಝ ವರ್‌ ಸೇರಿ ದಂತೆ ಹಲವರು ಸ್ತ್ರೋತ್ರ ಗಳನ್ನು ರಚಿಸಿದ್ದಾರೆ. ಅದನ್ನು ಉಚ್ಚರಿಸುವ ಮೂಲಕವೇ ಧಾರ್ಮಿಕ ವಿಧಿ- ವಿಧಾನ, ಪ್ರಾರ್ಥನೆಗಳನ್ನು ನಡೆಸ ಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಸಂಸ್ಕೃತ ಒಂದೇ ದೇವ ಭಾಷೆ ಎಂದು ನಮ್ಮನ್ನು ನಂಬಿಸಲಾಗಿದೆ. ಇತರ ದೇಶಗಳಲ್ಲಿ ಮತ್ತು ಧರ್ಮಗಳಲ್ಲಿ ವಿವಿಧ  ಧಾರ್ಮಿಕ ನಂಬಿಕೆಗಳು ಇವೆ. ಆಯಾ ಪ್ರದೇಶಕ್ಕೆ, ಸಂಸ್ಕೃತಿಗೆ ತಕ್ಕಂತೆ ಪೂಜೆ ಸಲ್ಲಿಸುವ ವಿಧಾನದಲ್ಲಿ ಬದಲಾವಣೆ ಇರುತ್ತದೆ ಎಂದು ನ್ಯಾಯಪೀಠ ಹೇಳಿದೆ.

ತಮಿಳು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆ. ದೇವ ಭಾಷೆಯೂ ಹೌದು.  ತಾಂಡವ ನೃತ್ಯ ಮಾಡುತ್ತಿದ್ದ ಶಿವನ ಕೈಯ್ಯಿಂದ ಬಿದ್ದ  ಡಮರುಗ ದಿಂದ ತಮಿಳು ಹುಟ್ಟಿ ದ್ದೆಂಬ ನಂಬಿಕೆಯಿದೆ. ಮತ್ತೂಂದು ನಂಬಿಕೆ ಪ್ರಕಾರ ಷಣ್ಮುಖನೇ ಆ ಭಾಷೆಯನ್ನು ಸೃಷ್ಟಿ ಮಾಡಿದ ಎಂಬ ವಾದವೂ ಇದೆ ಎಂದು ನ್ಯಾಯಪೀಠ ಹೇಳಿದೆ. ಕರೂರ್‌ ಜಿಲ್ಲೆಯ ದೇಗುಲದಲ್ಲಿ ತಮಿಳು ಭಾಷೆಯಲ್ಲಿಯೇ ಪ್ರಾರ್ಥನೆ, ಧಾರ್ಮಿಕ-ವಿಧಿ ವಿಧಾನ ನಡೆಸ ಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸುವ ವೇಳೆ  ನ್ಯಾಯಪೀಠ ಆದೇಶ ನೀಡಿತ್ತು. ಆಗಿನ ನ್ಯಾಯಪೀಠದಲ್ಲಿದ್ದ ನ್ಯಾ| ಎನ್‌. ಕಿರುಬಾಕರನ್‌ ಅವರು ಈಗ ನಿವೃತ್ತಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next