Advertisement

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

09:06 AM May 28, 2024 | Team Udayavani |

ಚೆನ್ನೈ: ಕಾಲಿವುಡ್‌ ಚಿತ್ರರಂಗದ ಹೆಸರಾಂತ ನಿರ್ದೇಶಕರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.

Advertisement

ಕಾಲಿವುಡ್‌ ನಿರ್ದೇಶಕ ಸೂರ್ಯ ಪ್ರಕಾಶ್(56) ಸೋಮವಾರ (ಮೇ.27 ರಂದು) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ನಟ ಶರತ್‌ ಕುಮಾರ್‌ ಅಧಿಕೃತವಾಗಿ ಎಕ್ಸ್‌ ನಲ್ಲಿ ಹಂಚಿಕೊಂಡಿದ್ದಾರೆ.

ಕಾಲಿವುಡ್‌ ನಲ್ಲಿ ʼಮಣಿಕ್ಕಂʼ (1996)  ʼಮಾಯಿʼ(2000) ಹಾಗೂ ‘ದಿವಾನ್‌ʼ(2003) ಸಿನಿಮಾಗಳನ್ನು ಮಾಡಿ ಮಿಂಚಿದ್ದ ಸೂರ್ಯ ಪ್ರಕಾಶ್‌ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

“ನಾನು ನಟಿಸಿದ ʼಮಾಯಿʼ ಹಾಗೂ ʼದಿವಾನ್‌ʼ ಸಿನಿಮಾಗಳನ್ನು  ನಿರ್ದೇಶನ ಮಾಡಿದ್ದ ನನ್ನ ಆತ್ಮೀಯ ಸ್ನೇಹಿತ ಸೂರ್ಯ ಪ್ರಕಾಶ್ ಅವರ ಹಠಾತ್‌ ನಿಧನದಿಂದ ಆಘಾತವಾಗಿದೆ. ನಿನ್ನೆಯಷ್ಟೇ ನಾನು ಅವರೊಂದಿಗೆ ಮಾತನಾಡಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಬಳಿ ಕೇಳಿಕೊಳ್ಳುತ್ತೇನೆ” ಎಂದು ನಟ ಶರತ್‌ ಕುಮಾರ್‌ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

Advertisement

ಸೂರ್ಯ ಪ್ರಕಾಶ್‌ ನಿರ್ದೇಶನ ಮಾಡಿದ್ದ ಶರತ್‌ ಕುಮಾರ್‌ ಹಾಗೂ ಮೀನಾ ನಟನೆಯ ʼಮಾಯಿʼ ಸಿನಿಮಾಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಈ ಸಿನಿಮಾ ತೆಲುಗಿನಲ್ಲಿ ಸಿಂಹರಸಿ (2001) ಮತ್ತು ಕನ್ನಡದಲ್ಲಿ ನರಸಿಂಹ (2012) ಆಗಿ ರಿಮೇಕ್‌ಗೊಂಡು ತೆರೆಕಂಡಿತ್ತು.

2002 ರಲ್ಲಿ ಟಾಲಿವುಡ್‌ ಗೆ ಹಾರಿದ ಅವರು ʼಭರತಸಿಂಹ ರೆಡ್ಡಿʼ ಎನ್ನುವ ಸಿನಿಮಾವನ್ನು ಮಾಡಿದ್ದರು. ಆದರೆ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. 2003 ರಲ್ಲಿ ಮತ್ತೆ ಶರತ್‌ ಕುಮಾರ್‌ ಅವರೊಂದಿಗೆ ಕೈಜೋಡಿಸಿ ʼದಿವಾನ್ʼ ಮಾಡಿ ಗೆದ್ದಿದ್ದರು. ಇದಾದ ಬಳಿಕ ಸುದೀರ್ಘ ಅವಧಿಯ ಕಾಲ ಬ್ರೇಕ್‌ ಪಡೆದುಕೊಂಡ ಅವರು, 2015 ರಲ್ಲಿ ಜೀವನ್ ನಟಿಸಿದ ʼಅಧಿಬರ್ʼ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next