Advertisement

ಪಿಎಂ ಸೂರ್ಯ ಘರ್‌ ಯೋಜನೆ ಪ್ರಚಾರಕ್ಕೆ ರಾಜ್ಯದಲ್ಲಿ ಚಾಲನೆ

09:26 PM Jun 08, 2024 | Suhan S |

ಬೆಂಗಳೂರು: ದೇಶದ ಒಂದು ಕೋಟಿ ಮನೆಗಳ ಛಾವಣಿಗೆ ಸೋಲಾರ್‌ ಫಲಕ ಅಳವಡಿಸಿ ಉಚಿತ ವಿದ್ಯುತ್‌ ಒದಗಿಸುವ ಪಿಎಂ ಸೂರ್ಯ ಘರ್‌ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈ ಕುರಿತ ಪ್ರಚಾರಕ್ಕೆ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಅಧಿಕೃತ ಚಾಲನೆ ನೀಡಿದರು.

Advertisement

ಸೂರ್ಯ ಘರ್‌ ಯೋಜನೆಯ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ “ಸೂರ್ಯ ರಥ ಯಾತ್ರೆ’ಗೆ ಹಸುರು ನಿಶಾನೆ ತೋರಿದ ಬಳಿಕ  ಮಾತನಾಡಿದ ಅವರು, ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿ ರಾಜ್ಯದಲ್ಲಿ ಈವರೆಗೆ 10 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಕೇಂದ್ರ ಸರಕಾರದ  pmsuryaghar.gov.in  ವೆಬ್‌ಸೈಟ್‌ನಲ್ಲಿ ರೂಫ್‌ ಟಾಪ್‌ ಸೋಲಾರ್‌ ವ್ಯವಸ್ಥೆಗೆ ಗೃಹ ಬಳಕೆದಾರರು ಅರ್ಜಿ ಸಲ್ಲಿಸಬಹುದು ಎಂದರು.

ಸಂಪರ್ಕದ ಲಾಭಗಳು:

ಮನೆಯ ರೂಫ್‌ ಟಾಪ್‌ ಸೋಲಾರ್‌ ವ್ಯವಸ್ಥೆಯಿಂದ 25 ವರ್ಷ ವಿದ್ಯುತ್‌ ಬಿಲ್‌ ಪಾವತಿಸಬೇಕಿಲ್ಲ. ಮನೆ ಛಾವಣಿಯಲ್ಲಿ ಅಳವಡಿಕೆಯಿಂದ ಸ್ಥಳ ಬಳಕೆ ನಿಯಂತ್ರಣ, ನಿರ್ವಹಣೆ ಸುಲಭ. 1 ಕಿಲೋ ವ್ಯಾಟ್‌ ಸಾಮರ್ಥ್ಯದ ವ್ಯವಸ್ಥೆಗೆ 30 ಸಾವಿರ ರೂ. 2 ಕಿ. ವ್ಯಾ.ಗೆ 60 ಸಾವಿರ ರೂ. ಮತ್ತು 3 ಕಿ. ವ್ಯಾ.ಗೆ 78 ಸಾವಿರ ಸಬ್ಸಿಡಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next