Advertisement

ತಮಿಳು ಸಂಸ್ಕೃತಿ ಮುಖ್ಯ : ತಮಿಳು ನಾಡಿನಲ್ಲಿ ಪ್ರಧಾನಿ ‘ಜಲ್ಲಿಕಟ್ಟು’ ಗುಣಗಾನ

06:01 PM Apr 02, 2021 | Team Udayavani |

ಮದುರೈ : ತಮಿಳು ನಾಡಿನ ವಿಧಾನ ಸಭಾ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಎಐಎಡಿಎಮ್ ಕೆ ಮೈತ್ರಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಾರೆ.

Advertisement

ಮದುರೈ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಜಲ್ಲಿಕಟ್ಟು  ಹಾಗೂ ತಮಿಳು ಭಾಷೆಯ ಬಗ್ಗೆ ಗುಣಗಾನ ಮಾಡಿದ್ದಾರೆ. ಜಲ್ಲಿಕಟ್ಟು ತಮಿಳು ನಾಡಿದ ಅತ್ಯಂತ ಪ್ರಸಿದ್ಧ ಸಂಸ್ಕೃತಿಯಾಗಿದೆ. ತಮಿಳು ಭಾಷೆ ಪ್ರಪಂಚದ ಅತ್ಯಂತ ಹಳೆಯ ಭಾಷೆ. ಪ್ರಾದೇಶಿಕ ಸಾಹಿತ್ಯದೊಂದಿಗೆ ಮುದುರೈ ನೊಂದಿಗೆ ಸಂಪರ್ಕ ಹೊಂದಿದೆ ಎಂದಿದ್ದಾರೆ.

ಓದಿ : ರಾಜ್ಯದಲ್ಲಿ ಯಾವುದೇ ಲಾಕ್ ಡೌನ್, ಕರ್ಪ್ಯೂ ಇಲ್ಲ: ಸರ್ಕಾರದ ಸ್ಪಷ್ಟನೆ

ಜಲ್ಲಿಕಟ್ಟುವಿನ ಬಗ್ಗೆ ಮಾತಿಗಿಳಿದ ಮೋದಿ, ರಾಜ್ಯದಲ್ಲಿ ಡಿ ಎಮ್ ಕೆ ಸರ್ಕಾರ ಹಾಗೂ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಜಲ್ಲಿಕಟ್ಟನ್ನು ರದ್ದುಗೊಳಿಸಿತ್ತು.  ಯುಪಿಎ ಸರ್ಕಾರದ ಮಂತ್ರಿಯೊಬ್ಬರು ಇದನ್ನು ಅನಾಗರಿಕ ಅಭ್ಯಾಸವೆಂದರು… ಇದು ಸರಿಯೇ..? ನೂರಾರು ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಒಂದು ಸಂಸ್ಕೃತಿಯ ಬಗ್ಗೆ ಹೀಗೆಲ್ಲಾ ಮಾತನಾಡುವುದಕ್ಕೆ ಹೇಗೆ ಸಾಧ್ಯ..? ಎಂದು ಅವರು ಪ್ರಶ್ನಿಸಿದ್ದಾರೆ.

ನಾವು 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಇಲ್ಲಿ ಎಐಎಡಿಎಮ್ ಕೆ ಸರ್ಕಾರವಿದ್ದಾಗ ನಿಷೇಧಿಸಲ್ಪಟ್ಟ ಜಲ್ಲಿಕಟ್ಟನ್ನು ಮತ್ತೆ ಆಚರಣೆಗೆ ತಂದಿದ್ದು ಯಾಕೆ..? ಯಾಕೆಂದರೇ ನಮ್ಮ ತಮಿಳು ಸಂಸ್ಕೃತಿಗಾಗಿ. ತಮಿಳು ಸಂಸ್ಕೃತಿಯಲ್ಲಿ ಅದಕ್ಕೆ ಪ್ರಾಮುಖ್ಯತೆ ಇರುವ ಕಾರಣದಿಂದ ಮತ್ತೆ ನಾವು ಆಚರಣೆಗೆ ಅವಕಾಶ ಒದಗಿಸಿದೆವು.

Advertisement

ಇನ್ನು, ಜನವರಿಯಲ್ಲಿ ರಾಹುಲ್ ಗಾಂಧಿ ಮಧುರೈನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. “ತಮಿಳು ಸಂಸ್ಕೃತಿ, ಇತಿಹಾಸ ಕಾರ್ಯರೂಪಕ್ಕೆ ಬಂದದ್ದನ್ನು ನೋಡುವುದು ಸಾಕಷ್ಟು ಸುಂದರ ಅನುಭವ ಎಂದು ಅವರು ಹೇಳುವುದರ ಮೂಲಕ ರಾಹುಲ್ ಗೆ ಮೋದಿ ಪರೋಕ್ಷವಾಗಿ ಕುಟುಕಿದ್ದಾರೆ.

ಡಿಎಮ್ ಕೆ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಮೋದಿ, ಡಿಎಮ್ ಕೆ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಮಾತನಾಡಲು ವಿಷಯಗಳಿಲ್ಲ. ಹಾಗಾಗಿ ಅವರು ಸುಳ್ಳು ಹೇಳುವುದನ್ನು ಮುಂದುವರಿಸಲೇಬೇಕು. ಅವರು ನಿತ್ಯ ಸುಳ್ಳು ಹೇಳುವುದರಲ್ಲೇ ಕಾಲ ಕಳೆಯುತ್ತಾರೆ ಎಂದು ಹೇಳಿದ್ದಾರೆ.

ಓದಿ : ಸಿಎಂ ಆಗುವುದಕ್ಕಾಗಿ ಈಶ್ವರಪ್ಪ ಹೀಗೆಲ್ಲಾ ಮಾಡುತ್ತಿದ್ದಾರೆ- ಕೆ.ಬಿ.ಪ್ರಸನ್ನಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next