Advertisement

ತಮಿಳು ನಟ, ಮಿಮಿಕ್ರಿ ಕಲಾವಿದ ಮಾನೋ ಅಪಘಾತದಿಂದ ನಿಧನ

10:20 AM Oct 30, 2019 | Hari Prasad |

ಚೆನ್ನೈ: ತಮಿಳು ನಟ, ಹೆಸರಾಂತ ಮಿಮಿಕ್ರಿ ಕಲಾವಿದ ಮತ್ತು ಟಿವಿ ನಿರೂಪಕ ಮಾನೋ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಮಾನೋ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಅಪ್ಪಳಿಸಿದ ಪರಿಣಾಮ ಮಾನೋ ಅವರು ಸ್ಥಳದಲ್ಲೇ ಮೃತಪಟ್ಟರು. ಇನ್ನು ಮಾನೋ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ರಾಮಚಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ತಿಳಿದುಬಂದಿದೆ.

Advertisement

2010ರಲ್ಲಿ ತೆರೆಕಂಡಿದ್ದ ತಮಿಳು ಚಿತ್ರ ಪುಝಲ್ ನಲ್ಲಿ ಗಮನಾರ್ಹ ನಟನೆಯನ್ನು ಮಾಡಿದ್ದರು. ಬಳಿಕ ಅವರು ಟಿವಿ ನಿರೂಪಕರಾಗಿ, ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ, ಡ್ಯಾನ್ಸರ್ ಮತ್ತು ಮಿಮಿಕ್ರಿ ಕಲಾವಿದರಾಗಿಯೂ ಗಮನ ಸೆಳೆದಿದ್ದರು.

ಪ್ರತಿಭಾವಂತ ಕಲಾವಿದ ಮಾನೋ ಅವರ ಅಕಾಲಿಕ ದುರ್ಮರಣಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗದಲ್ಲಿನ ಮಾನೋ ಗೆಳೆಯರು ಹಾಗೂ ಅವರ ಸಹೋದ್ಯೋಗಿಗಳು ಮಾನೋ ಅಕಾಲಿಕ ಅಗಲುವಿಕೆಗೆ ಟ್ವಟ್ಟರ್ ನಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next