Advertisement

ಗೂಗಿಹಾಳ ಕೆರೆಗೆ ಜಲ ಜೀವಕಳೆ

11:05 AM May 12, 2019 | Team Udayavani |

ತಾಂಬಾ: ಭೀಕರ ಬರಗಾಲದ ಬಿರು ಬಿಸಿಲಿಗೆ ಬತ್ತಿ ಹೋಗಿರುವ ತಾಂಬಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗೂಗಿಹಾಳ ಕೆರೆಗೆ ಆಲಮಟ್ಟಿ ಜಲಾಶಯದಿಂದ ನೀರು ಹರಿದು ಬರುತ್ತಿರುವುದು ಈ ಭಾಗದ ಹತ್ತಾರು ಗ್ರಾಮದ ಜನತೆಯಲ್ಲಿ ಸಂತಸ ಮನೆ ಮಾಡಿದೆ.

Advertisement

ಈ ಬಾರಿ ಮಳೆ ಕೊರತೆಯಾದ ಕಾರಣ ಗೂಗಿಹಾಳ ಕೆರೆ ಹಾಗೂ ಅಂತರ್ಜಲ ಕೊರತೆಯಿಂದ ಅನೇಕ ಕೊಳವೆ ಬಾವಿಗಳಲ್ಲಿ ನೀರನ ಅಭಾವ ಉಂಟಾಗಿತ್ತು. ಗ್ರಾಮದ ಜನತೆ ಸುಮಾರು ದಿನಗಳಿಂದ ನೀರಿಗಾಗಿ ನಿತ್ಯ ಪರದಾಡುವಂತಾಗಿತ್ತು. ಇದರಿಂದ ಗ್ರಾಮದ ಜನತೆಯಲ್ಲಿ ಆತಂಕದ ಛಾಯೆ ಮೂಡಿತ್ತು.

ತಾಂಬಾ ಗ್ರಾಮ ಒಳಗೊಂಡಂತೆ ಕೆಂಗನಾಳ, ಶಿವಪುರ, ಬಂಥನಾಳ, ಸುರಗಿಹಳ್ಳಿ, ಬೆನಕನಹಳ್ಳಿ, ಅಥರ್ಗಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ತಲೆದೋರಿತ್ತು. ಆಲಮಟ್ಟಿ ಜಲಾಶಯದಿಂದ ಗೂಗಿಹಾಳ ಕೆರೆಗೆ ನೀರು ಹರಿದು ಬರುತ್ತಿರುವುದು ಈ ಭಾಗದ ಬಹು ಹಳ್ಳಿಗಳಿಗೆ ಅನುಕೂಲವಾಗಿದೆ. ಅಲ್ಲದೇ ಗೂಗಿಹಾಳ ನೀರಿನ ಶುದ್ಧೀಕರಣ ಘಟಕ, ಬಹು ಹಳ್ಳಿಗಳ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹಾಗೂ ತಾಂಬಾ ಗ್ರಾಮಕ್ಕೆ ನೀರನ್ನು ಒದಗಿಸಲು ಇದರಿಂದ ಅನುಕೂಲವಾಗುವುದಲ್ಲದೆ, ಪಶು ಪಕ್ಷಿಗಳಿಗೆ ಕುಡಿಯಲು ನೀರು ಅನುಕೂಲವಾಗಲಿದೆ.

ಆಲಮಟ್ಟಿ ಜಲಾಶಯದಿಂದ ಗೂಗಿಹಾಳ ಕೆರೆಗೆ ನೀರನ್ನು ಹರಿಸುವ ಮೂಲಕ ತಾಂಬಾ ಗ್ರಾಮದ ಜನತೆ ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ತಕ್ಕ ಮಟ್ಟಿಗೆಯಾದರೂ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರು ಅನುಕೂಲ ಮಾಡಿದ್ದಾರೆ. ಕೆರೆಗೆ ಈಗ ನೀರು ಹರಿದು ಬರುತ್ತಿದ್ದು ಇನ್ನು ಕೆಲ ದಿನಗಳಲ್ಲಿ ಕೆರೆಯ ನೀರನ ಸಂಗ್ರಹ ಘಟಕಕ್ಕೆ ಬರಲಿದ್ದು, ಅಲ್ಲಿ ಶುದ್ಧೀಕರಣಗೊಂಡು ಗ್ರಾಮದ ಜನತೆಗೆ ವಾರ್ಡ್‌ಗಳ ಸರದಿಯಂತೆ ನೀರು ಬರಲಿದೆ. ಮನಗೂಳಿ ಅವರ ಈ ಕಾರ್ಯಕ್ಕೆ ಗ್ರಾಮದ ಜನತೆ ಆಭಿನಂನೆ ಸಲ್ಲಿಸಿದ್ದಾರೆ.

ಗೂಗಿಹಾಳ ಕೆರೆ ಇತಿಹಾಸದಲ್ಲಿ ಯಾವತ್ತು ಬೇಸಿಗೆ ಕಾಲದಲ್ಲಿ ಕೆರೆಗೆ ನೀರು ಬಂದಿಲ್ಲ. ಪ್ರತಿ ವರ್ಷ ಬೇಸಿಗೆ ಬಂದರೆ ಸಾಕು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಇಗಲು ಹಾಗೇಯೆ ಆಗಿತ್ತು. ಇದನ್ನು ಅರ್ಥೈಸಿಕೊಂಡು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರು ಸರ್ಕಾರದ ಮೊರೆ ಹೋಗಿ ಅನುಕೂಲ ಮಾಡಿದ್ದಾರೆ. ಬೇಸಿಗೆ ಮುಗಿಯುವವರೆಗೂ ಆಲಮಟ್ಟಿ ಜಲಾಶಯದಿಂದ ಗೂಗಿಹಾಳ ಕೆರೆಗೆ ನೀರು ಹರಿದ ಬರಲಿದೆ ಎಂಬ ನಮಗೆ ವಿಶ್ವಾಸ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

ಪ್ರತಿ ವರ್ಷವು ಬೇಸಿಗೆ ಸಮಯದಲ್ಲಿ ತಾಂಬಾ ಭಾಗದ ಜನತೆ ಪ್ರತಿ ವರ್ಷವು ನೀರಿನ ಬವಣೆಯನ್ನು ಅನುಭವಿಸುತ್ತಲೆ ಇದ್ದಾರೆ. ಆದರೆ, ಇದನ್ನು ನಿರ್ಮೂಲನೆ ಮಾಡಲು ಇಂಡಿ ತಾಲೂಕಿನ ಗೂಗಿಹಾಳ ಕೆರೆಯಿಂದ ತಾಂಬಾ ಗ್ರಾಮವೂ ಒಳ ಗೊಂಡಂತೆ ವಿವಿಧ ಗ್ರಾಮಗಳಿಗೆ ನೀರು ಬರಲಿದೆ. ಗ್ರಾಮಗಳ ಜನತೆ ನೀರಿನ ವಿಷಯದಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲ.
ಎಂ.ಸಿ. ಮನಗೂಳಿ,
ಉಸ್ತುವಾರಿ ಸಚಿವ

ಲಕ್ಷ್ಮಣ ಹಿರೇಕುರುಬರ

Advertisement

Udayavani is now on Telegram. Click here to join our channel and stay updated with the latest news.

Next