Advertisement
ಇತ್ತೀಚೆಗಷ್ಟೇ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾದ ಆಡಿಯೋ ಲಾಂಚ್ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಸಿನಿಮಾದ ಬಗ್ಗೆ ಹೈಪ್ ದಿನಕಳೆದಂತೆ ಹೆಚ್ಚಾಗುತ್ತಿದೆ. ʼಜೈಲರ್ʼ ಪ್ರಚಾರವೂ ಅಬ್ಬರದಿಂದ ಸಾಗುತ್ತಿದೆ.
Related Articles
Advertisement
ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ತಮನ್ನಾ ʼಸುರʼ ಸೋಲಿನ ಬಗ್ಗೆ ʼ ಗಲಾಟ್ಟಾʼ ಸಂದರ್ಶನದಲ್ಲಿ ಮಾತನಾಡಿದ್ದಾರೆ.
“ನನಗೆ ʼಸುರʼ ಸಿನಿಮಾ ಇಷ್ಟವಾಯಿತು. ಆದರೆ ಅದರಲ್ಲಿನ ಕೆಲ ಸೀನ್ ಗಳಲ್ಲಿ ನನ್ನ ಅಭಿನಯ ಇಷ್ಟವಾಗಿಲ್ಲ. ತುಂಬಾ ಕೆಟ್ಟದಾಗಿ ನಾನು ಅಭಿನಯಿಸಿದೆ. ಸಿನಿಮಾದ ಹಾಡುಗಳು ಹಿಟ್ ಆಗಿವೆ. ಆದರೆ ʼಸುರʼ ಸಿನಿಮಾದಲ್ಲಿ ನಾನು ಚೆನ್ನಾಗಿ ನಟಿಸಿಲ್ಲ ಎಂದು ನನಗೆ ಅನ್ನಿಸಿತ್ತು.” ಎಂದರು.
ʼಸುರʼ ಬಾಕ್ಸ್ ಆಫೀಸ್ ನಲ್ಲಿ ಸೋತ ಬಗ್ಗೆ ಮಾತನಾಡಿದ ಅವರು “ಈ ಸಿನಿಮಾ ಓಡುವುದಿಲ್ಲ ಎಂದು ನನಗೆ ಶೂಟಿಂಗ್ ವೇಳೆಯೇ ಮನಸ್ಸಿನಲ್ಲಿ ಅನಿಸಲು ಶುರುವಾಗಿತ್ತು. ಕೆಲ ಸಿನಿಮಾಗಳು ಹಿಟ್ ಆಗುವುದಿಲ್ಲ ಎಂದು ನಿಮಗೆ ಮೊದಲೇ ಅನ್ನಿಸಿರುತ್ತದೆ. ಆದರೆ ನಿಮ್ಮ ಬದ್ಧತೆಗಾಗಿ ಅದನ್ನು ನೀವು ಮಾಡಬೇಕಾಗುತ್ತದೆ. ಎಲ್ಲವೂ ಸೋಲು – ಗೆಲುವೇ ಅಲ್ಲ. ಸಿನಿಮಾರಂಗ ಎನ್ನುವುದು ದುಬಾರಿ ಕಲಾ ಪ್ರಕಾರವಾಗಿದೆ. ಆದ್ದರಿಂದ ನಾವು ಜವಾಬ್ದಾರರಾಗಿರಬೇಕು. ಇದು ಕೆಲಸದ ಒಂದು ಭಾಗವಾಗಿದೆ.” ಎಂದು ನಟಿ ಹೇಳಿದರು.
2010 ರಲ್ಲಿ ಬಂದ ʼಸುರʼ ಆ್ಯಕ್ಷನ್ ಕಾಮಿಡಿ ಚಿತ್ರವಾಗಿದ್ದು, ಎಸ್ಪಿ ರಾಜಕುಮಾರ್ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ದೊಡ್ಡ ಮಟ್ಟದ ನೆಗೆಟಿವ್ ರೆಸ್ಪಾನ್ಸ್ ಕೇಳಿಬಂದಿತ್ತು. ಚಿತ್ರಕ್ಕೆ ಹಾಕಿದ ಬಜೆಟ್ ಮಾತ್ರ ವಾಪಾಸ್ ಬಂತು ಎಂದು ನಿರ್ಮಾಪಕ ಸಂಗಿಲಿ ಮುರುಗನ್ ಹೇಳಿದ್ದರು.