Advertisement

ಶಿಥಿಲಾವಸ್ಥೆಯಲ್ಲಿ ತಾಪಂ ಕ್ವಾರ್ಟರ್ಸ್

06:56 PM Feb 17, 2021 | Team Udayavani |

ಅಫಜಲಪುರ: ಪಟ್ಟಣದ ತಾ.ಪಂ ಸಿಬ್ಬಂದಿ ವಾಸವಿರುವ ಕ್ವಾರ್ಟರ್ಸ್ ಗಳು ಶಿಥಿಲಾವಸ್ಥೆ ತಲುಪಿದ್ದರಿಂದ ಅಲ್ಲಿರುವ ಸಿಬ್ಬಂದಿ ನಿತ್ಯ ಆತಂಕದಲ್ಲಿ ದಿನ ದೂಡುವಂತಾಗಿದೆ.

Advertisement

ತಾಪಂ ಕಚೇರಿ ಹಿಂಭಾಗದಲ್ಲಿ ಸಿಬ್ಬಂದಿಗೆ ನಿರ್ಮಿಸಲಾಗಿರುವ ಕ್ವಾರ್ಟರ್ಸ್ ಗಳ ಮೇಲ್ಛಾವಣಿ ಕುಸಿಯುತ್ತಿದೆ. ಮಳೆಗಾಲದಲ್ಲಿ ಸ್ವಲ್ವ-ಸ್ವಲ್ಪವೇ ಮುರಿದು ಬಿಳುತ್ತಿವೆ. ಅದರಲ್ಲೇ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದು ದಿನ ಕಳೆಯುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಮನೆಯಲ್ಲಿರುವವರ ಜೀವಕ್ಕೆ ಕುತ್ತು ನಿಶ್ಚಿತ ಎನ್ನುವಂತಾಗಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿರುವ ತಾಪಂ ಕಚೇರಿ ಸಹಿತ ಸಿಬ್ಬಂದಿಗಳ ಕ್ವಾರ್ಟರ್ಸ್ ಎಲ್ಲ ಸೇರಿ ಒಟ್ಟು 12 ಕಟ್ಟಡಗಳಿವೆ. ಇದರಲ್ಲಿ ಒಂದು ಸಭಾಂಗಣ, ಒಂದು ಕಚೇರಿ, ಬಿಸಿಎಂ ಇಲಾಖೆಗೆ ಒಂದು ಹೊಲಿಗೆ ತರಬೇತಿಗಾಗಿ ಕೋಣೆಬಿಟ್ಟಿದ್ದಾರೆ. ಉಳಿದಂತೆ ಒಂಭತ್ತು ವಸತಿ ಗೃಹಗಳಿವೆ. ಕಚೇರಿ, ಸಭಾಂಗಣಗಳು ಸುಭದ್ರವಾಗಿವೆ, ಆದರೆ ವಸತಿ ಗೃಹಗಳು ಮಾತ್ರ ಅಭದ್ರ ಸ್ಥಿತಿಯಲ್ಲಿವೆ. ಒಂಭತ್ತು ವಸತಿ ಗೃಹಗಳ ಪೈಕಿನಾಲ್ಕು ಕಟ್ಟಡಗಳು ಹೊಸ ಕಟ್ಟಡವಾಗಿದ್ದು, ಉಳಿದ ಐದು ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ.

ಕಚೇರಿಗೆ ಮಾತ್ರ ಸುಣ್ಣ-ಬಣ್ಣ: ತಾ.ಪಂ ಕಚೇರಿಗಳಿಗೆ ಮಾತ್ರ ಸುಣ್ಣಬಣ್ಣ ಬಳಿಯಲಾಗಿದೆ. ಸಿಬ್ಬಂದಿ ಮನೆಗಳ ದುರಸ್ತಿ ಮಾತ್ರ ಕೈಗೊಳ್ಳುತ್ತಿಲ್ಲ. ಕ್ವಾಟರ್ಗೆ ಶುದ್ದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಸಾರ್ವಜನಿಕರಿಗೂ ಸಿಬ್ಬಂದಿಗಳಿಗೂಒಂದೇ ಶೌಚಾಲಯ ಬಳಸಲಾಗುತ್ತಿದೆ. ನೀರಿನ ಸೌಲಭ್ಯ ಇಲ್ಲದ್ದರಿಂದ ಇಲ್ಲಿಯೂ ದುರ್ನಾತ ಬೀರುತ್ತಿದೆ. ಕಚೇರಿಆವರಣದಲ್ಲೊಂದು ಇದ್ದು ಇಲ್ಲದಂತಿರುವ ನೀರಿನ ಘಟಕವಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇವೆಲ್ಲವನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ತಾಪಂ ಕಚೇರಿಯಲ್ಲಿ ಶುದ್ಧ ಕುಡಿಯುವ ನೀರು ಲಭಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ವಾರದೊಳಗೆ ವ್ಯವಸ್ಥೆ ಮಾಡಲಾಗುತ್ತದೆ. ಸಿಬ್ಬಂದಿ ವಾಸಿಸುವ ವಸತಿಗೃಹಗಳ ಮೇಲ್ಛಾವಣಿಕುಸಿತದ ಬಗ್ಗೆ ಮಾಹಿತಿ ಇರಲಿಲ್ಲ. ಕೂಡಲೇ ವೀಕ್ಷಿಸಿ, ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.  ಮಹ್ಮದನಬಿ, ತಾ.ಪಂ ಇಒ

Advertisement

 

-ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next