Advertisement

ನಾಮ್‌ಕೇವಾಸ್ತೆ ತಾ.ಪಂ. ಅಗತ್ಯವಿಲ್ಲ

12:31 AM Feb 20, 2021 | Team Udayavani |

ಈ ಹಿಂದೆ ಜಾರಿಯಲ್ಲಿದ್ದ ಮಂಡಲ ಪಂಚಾಯತ್‌, ಜಿಲ್ಲಾ ಪರಿಷತ್‌ನ ಎರಡು ಹಂತದ ಆಡಳಿತ ವ್ಯವಸ್ಥೆ ಅತ್ಯುತ್ತಮವಾಗಿತ್ತು. ಈ ಎರಡು ಹಂತದ ಆಡಳಿತದ ನಡುವೆ ಸೃಷ್ಟಿಯಾಗಿರುವ ತಾಲೂಕು ಪಂಚಾಯತ್‌ಗೆ ಯಾವುದೇ ಅಧಿಕಾರವಿಲ್ಲ, ಹೆಚ್ಚಿನ ಅನುದಾನವೂ ಇಲ್ಲ. ತಾಲೂಕು ಪಂಚಾಯತ್‌ ಸದಸ್ಯರಿಗೆ ಸಿಗುವುದು 5- 10 ಲಕ್ಷ ರೂ. ಅನುದಾನವಷ್ಟೇ. ಹಾಗಾಗಿ ತಾಲೂಕು ಪಂಚಾಯತ್‌ ಸದಸ್ಯರಾದವರು ಜನರಿಂದ ಬೈಗುಳ ತಿನ್ನುವ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ.

Advertisement

ಸದ್ಯದ ವ್ಯವಸ್ಥೆಯಲ್ಲಿ ಮೂರು ಸ್ತರದ ಆಡಳಿತಗಳ ನಡುವೆ ಸಮನ್ವಯವೇ ಇಲ್ಲ. ಗ್ರಾಮ ಪಂಚಾಯತ್‌ ಏನು ಮಾಡುತ್ತಿದೆ ಎಂಬ ಬಗ್ಗೆ ತಾ. ಪಂಚಾಯತ್‌ಗೆ ಗೊತ್ತಿರುವುದಿಲ್ಲ. ಜಿ.ಪಂ. ಏನೆಲ್ಲ ಕಾರ್ಯ ಚಟುವಟಿಕೆ ನಡೆಸಿದೆ ಎಂಬ ಬಗ್ಗೆ ಉಳಿದೆರಡು ಹಂತದ ಆಡಳಿತಕ್ಕೆ ಗೊತ್ತಿರುವುದಿಲ್ಲ. ಪರಿಣಾಮ ಕಾಮಗಾರಿ ಗಳು ಪುನರಾವರ್ತನೆಯಾಗುತ್ತಿದ್ದು, ತೆರಿಗೆ ದಾರರ ಹಣ ದುರ್ಬಳಕೆಯಾಗುವಂತಾಗಿದೆ. ಹಿಂದೆ ತಾಲೂಕು ಮಟ್ಟದಲ್ಲಿ ಒಂದು ಸಮಿತಿ ರಚನೆ ಯಾಗುತ್ತಿತ್ತು. ಸ್ಥಳೀಯ ಶಾಸಕರ ಅಧ್ಯ ಕ್ಷತೆಯ ಸಮಿತಿಗೆ ಜಿಲ್ಲಾ ಪಂಚಾಯತ್‌ ಸದಸ್ಯರು, ಮಂಡಲ ಪ್ರಧಾನರು ಸದಸ್ಯರಾಗಿರುತ್ತಿದ್ದರು. ಆ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸುಳ್ಳು ಹೇಳಲು ಅವಕಾಶವಿರುತ್ತಿರಲಿಲ್ಲ. ಎಲ್ಲ ಕಾಮಗಾರಿ, ಯೋಜನೆ, ಕಾರ್ಯಕ್ರಮಗಳ ಬಗ್ಗೆ ಎಲ್ಲರಿಗೂ ಗೊತ್ತಾಗು ತ್ತಿ ದ್ದುದರಿಂದ ಪುನರಾವರ್ತನೆಗೆ ಅವಕಾಶವಿರ ಲಿಲ್ಲ. ಈಗ ಮೂರು ಸ್ತರದ ಆಡಳಿತಗಳ ಕಾರ್ಯ ನಿರ್ವ ಹಣೆ ಬಗ್ಗೆ ಮೂರು ಆಡಳಿತಗಳಿಗೂ ಪರಸ್ಪರ ಮಾಹಿತಿ ಇರುವುದಿಲ್ಲ. ಹಾಗಾಗಿ ಕಾಮಗಾರಿಗಳು ಪುನರಾವರ್ತನೆಯಾಗುತ್ತಿವೆ.

ಸುಗಮ ಹಾಗೂ ಪರಿಣಾಮಕಾರಿ ಆಡಳಿತ ದೃಷ್ಟಿಯಿಂದ ಹಿಂದಿನ ಎರಡು ಸ್ತರದ ಆಡಳಿತ ವ್ಯವಸ್ಥೆಯೇ ಅತ್ಯುತ್ತಮ ಎನಿಸುತ್ತದೆ. ಹಾಗಾಗಿ 2 ಸ್ತರದ ವ್ಯವಸ್ಥೆ ಜಾರಿಗಿರುವ ಕಾನೂನು ತೊಡಕುಗಳ ಬಗ್ಗೆ ಸರಕಾರ ಪರಿಶೀಲಿಸಬೇಕು. ಸಂವಿಧಾನಾತ್ಮಕ ತಿದ್ದುಪಡಿ ಅಗತ್ಯವಿರುವುದರಿಂದ ರಾಜ್ಯದಿಂದಲೇ ಪ್ರಸ್ತಾವ ಸಲ್ಲಿಕೆಯಾಗಲಿ ಎಂಬ ಅಭಿಪ್ರಾಯವನ್ನು ಸದನದಲ್ಲಿ ವ್ಯಕ್ತಪಡಿಸಲಾಗಿತ್ತು. ಸದ್ಯ ತಾ. ಪಂ. ವ್ಯವಸ್ಥೆ ನಾಮ್‌ಕೆವಾಸ್ತೆ ಎಂಬಂತಾಗಿದೆ. ಸದಸ್ಯರಾದವರು ಜನರಿಂದ ಬೈಗುಳ ತಿನ್ನುವಂತಾಗಿದೆ. ತಾಲೂಕು ಪಂಚಾಯತ್‌ಗೆ ಹೆಚ್ಚಿನ ಅನುದಾನ ಬಾರದ ಕಾರಣ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್‌ ಚುನಾವಣೆಗೆ ತಾಲೂಕು ಪಂಚಾಯತ್‌ ಸದಸ್ಯರು ಸ್ಪರ್ಧಿಸಿ ಗೆದ್ದ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ತಾಲೂಕು ಪಂಚಾಯತ್‌ ವ್ಯವಸ್ಥೆ ಅಗತ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸರಕಾರ ಯಾವ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕು. ಸದ್ಯದಲ್ಲೇ ತಾ.ಪಂ. ಚುನಾವಣೆ ಇರುವುದರಿಂದ ಈ ಬಾರಿ ಆ ವ್ಯವಸ್ಥೆಯ ವಿಸರ್ಜನೆ ಸಾಧ್ಯತೆ ಕಡಿಮೆ. ಆದರೆ ಈಗ ಪ್ರಯತ್ನ ಆರಂಭವಾದರೆ ಮುಂದಿನ ಐದು ವರ್ಷಗಳಲ್ಲಾದರೂ ವಿಸರ್ಜಿಸಿ ಎರಡು ಸ್ತರದ ಆಡಳಿತ ವ್ಯವಸ್ಥೆ ಮತ್ತೆ ಬರಬಹುದು ಎಂಬುದು ನಮ್ಮ ಆಶಯ.

 

-ವೆಂಕಟರಾವ್‌ ನಾಡಗೌಡ, ಜೆಡಿಎಸ್‌ ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next