Advertisement
ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಇಕ್ಕಟ್ಟಾಗಿರುವುದರಿಂದ ಈ ಮಾರ್ಗದಲ್ಲಿ ಎದುರು-ಬದುರು ವಾಹನ ಸಂಚರಿಸುವುದು ಕಷ್ಟವಾಗಿದೆ. ಈಗ ನಿರ್ಮಿಸುತ್ತಿರುವ ರಸ್ತೆಯೂಅದೇ ಪ್ರಮಾಣದಲ್ಲಿ ಇರುವುದರಿಂದ ಜನರಿಗೆ ಅನಾನುಕೂಲತೆಯಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಎಸ್.ಎಸ್. ಸಾವನ್ ಅವರಿಗೆ ತಿಳಿಸಿದರು.
Related Articles
Advertisement
ತಾಪಂ ಸದಸ್ಯ ಕರಿಯಪ್ಪ ಮಾತನಾಡಿ, ಪೆಟ್ಲೂರಲ್ಲಿ ನಿರ್ಮಾಣವಾಗುತ್ತಿರುವ ಬಾಬು ಜಗಜೀವನ್ ರಾಂ ಸಮುದಾಯ ಭವನ 4-5 ವರ್ಷವಾದರೂಪೂರ್ಣಗೊಳ್ಳುತ್ತಿಲ್ಲ. ಇದಕ್ಕೆ ಕಾರಣ ಏನು ಎಂದು ಅ ಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಲ್ಯಾಂಡ್ ಆರ್ಮಿ ಎಂಜಿನಿಯರ್, ಅನುದಾನ ಬಾಕಿ ಇದೆ ಎಂದು ಉತ್ತರಿಸಿದಾಗ ಸದಸ್ಯರು ಅಸಮಾಧಾನವ್ಯಕ್ತಪಡಿಸಿ ಬೇಗ ಭವನ ನಿರ್ಮಾಣ ಮಾಡುವಂತೆ ಅಧಿಕಾರಿಗೆ ಸೂಚಿಸಿದರು.
ಸದಸ್ಯ ಜನವಾಡ ಮಾತನಾಡಿ, ತೋಟಗಾರಿಕೆ ಇಲಾಖೆ ತರಕಾರಿ ಬೀಜಗಳನ್ನು ಮಾರಾಟ ಮಾಡಲಾಗುವುದೇ ಎಂದು ಪ್ರಶ್ನಿಸಿದರು. ಅವರ ಮಾತಿಗೆ ಉತ್ತರಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ ದಂಡನ್ನವರ ಮಾತನಾಡಿ,ಎರಡು ವರ್ಷದಿಂದ ನಮ್ಮ ಇಲಾಖೆಗೆ ಬೀಜ ಖರೀದಿಗೆ ಅನುದಾನ ಬಿಡುಗಡೆಯಾಗುತ್ತಿತ್ತು. ಆಗ ಬೀಜ ಮಾರಾಟ ಮಾಡಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆ ಬೀಜ ಮಾರಾಟಕ್ಕೆ ಇಲಾಖೆಗೆ ಅನುದಾನ ಬಂದಿಲ್ಲ. ಆದ್ದರಿಂದ ಬೀಜಗಳು ನಮ್ಮಲ್ಲಿ ಲಭ್ಯವಿಲ್ಲ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ಮಾತನಾಡಿ, ತಾಲೂಕಿನ ವಸತಿ ಶಾಲೆಗಳಲ್ಲಿ ಹೆಚ್ಚು ಸಸಿಗಳನ್ನು ಬೆಳೆಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಸಂಗಪ್ಪ ಇಮ್ಮನ್ನವರಮಾತನಾಡಿ, ಇಂಗಳಗಿ-ಯಡಹಳ್ಳಿ ರಸ್ತೆಯಲ್ಲಿ ಕೆಲವು ಮರಗಳು ರಸ್ತೆ ಸಮೀಪಕ್ಕೆ ಬಂದಿವೆ. ಅಂತವುಗಳ ರೆಂಬೆಗಳನ್ನು ಕತ್ತರಿಸಿ ಎಂದು ಸೂಚಿಸಿದರು.
ತಾಲೂಕು ಪಂಚಾಯಿತಿ ಸದಸ್ಯೆಗೌರವ್ವ ಸೊಕನಾದಿ ಮಾತನಾಡಿ, ಹಲಗಲಿ ದೊಡಮನಿ ತೋಟದ ಶಾಲೆ ಸೋರುತ್ತಿದ್ದು, ಅದನ್ನು ದುರಸ್ತಿಗೊಳಿಸಿ ಎಂದು ಅಧಿಕಾರಿಗೆ ಸೂಚಿಸಿದರು.
ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ ಮಾತನಾಡಿ, ಖಾಸಗಿ ಶಾಲೆಯಲ್ಲಿ ಹೆಚ್ಚಿನ ಪ್ರಮಾಣದ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಏನುಕ್ರಮ ಕೈಗೊಂಡಿದ್ದೀರಿ ಎಂದು ಬಿಇಒ ಪತ್ತಾರಅವರನ್ನು ಪ್ರಶ್ನಿಸಿದರು. ಬಿಇಒ ವಿ.ಎಂ.ಪತ್ತಾರ, ಹೆಚ್ಚು ಶುಲ್ಕ ಪಡೆಯುತ್ತಿರುವ ಬಗ್ಗೆ ನಮ್ಮಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಹಲಗಲಿಯಲ್ಲಿನ ತೋಟದ ಶಾಲೆ ಸೋರುತ್ತಿರುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇಒ ಕಿರಣ್ ಘೋರ್ಪಡೆ ಮಾತನಾಡಿ, ರಂಜಣಗಿಯಲ್ಲಿ ಮೀಟರ್ ಇಲ್ಲದೆ ನೇರವಾಗಿವಿದ್ಯುತ್ ಬಳಸಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಜನರಿಗೆ ಮೊದಲು ಡಂಗೂರ ಸಾರಿ ಮಾಹಿತಿ ನೀಡಿ. ಒಂದು ವೇಳೆ ಅವರು ಮೀಟರ್ ಅಳವಡಿಸಿಕೊಳ್ಳಲು ಮುಂದಾಗದಿದ್ದರೆ ಆ ಬಳಿಕ ವಿದ್ಯುತ್‌ಸ್ಥಗಿತಗೊಳಿಸಿ ಎಂದು ಸೂಚಿಸಿದರು.
ಮೀಸಲಾತಿ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ: ಮುಧೋಳ ಪರಿಶಿಷ್ಟ ಜಾತಿಗೆ ಮೀಸಲಾಗಿರುವಕ್ಷೇತ್ರ ಈ ಕ್ಷೇತ್ರದಲ್ಲಿಯೇ ಎಸ್‌ಸಿಪಿಗೆ ಅನುದಾನವೇ ಬರುತ್ತಿಲ್ಲವೆಂದರೆ ಏನುಅರ್ಥ. ಯಾವುದೇ ಇಲಾಖೆಗೆ ಹೋದರೂ ಅಧಿಕಾರಿಗಳು ಅನುದಾನದ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ನಾವು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಸದಸ್ಯರಾದ ಯಶವಂತ ಹರಿಜನ ಹಾಗೂ ಸಂಗಪ್ಪಇಮ್ಮನ್ನವರ ಅಸಮಾಧಾನ ವ್ಯಕ್ತಪಡಿಸಿದರು.
ಹಾಜರಾಗದ ಅಧಿಕಾರಿಗೆ ನೋಟಿಸ್:
ಸಭೆಗೆ ಮಾಹಿತಿ ನೀಡದೆ ಗೈರು ಹಾಜರಾದ ಕೃಷಿ ಇಲಾಖೆ ಅಧಿಕಾರಿ ದಾಸರ ಹಾಗೂ ಜಿಎಆರ್‌ಬಿಸಿ ಅಧಿಕಾರಿ ದೊಡಮನಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿ ಅಧ್ಯಕ್ಷ ಬಟಕುರ್ಕಿ ಇಒ ಘೋರ್ಪಡೆ ಅವರಿಗೆ ಸೂಚಿಸಿದರು.
ಗಮನ ಸೆಳೆದ ಸದಸ್ಯೆ ಪತಿ: ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಒಂಟಗೋಡಿ ಮತಕ್ಷೇತ್ರದ ಸದಸ್ಯೆ ಶಶಿಕಲಾ ಅಂಬಿಗೇರ ಅವರ ಪತಿ ಮುದಕಣ್ಣಾ ಅಂಬಿಗೇರಸಾಮಾನ್ಯ ಸಭೆಯಲ್ಲಿಪಾಲ್ಗೊಂಡಿದ್ದೂ ಅಲ್ಲದೆ ಅಧಿಕಾರಿಗಳನ್ನು ಪ್ರಶ್ನಿಸುವ ಮೂಲಕ ಎಲ್ಲರ ಗಮನ ಸೆಳೆದರು. ಒಂಟಗೋಡಿಯಲ್ಲಿನ ಸಮುದಾಯ ಭವನ ನಿರ್ಮಾಣದ ಬಗ್ಗೆ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ ಮುದಕಣ್ಣಾ ಅಂಬಿಗೇರ ಉಳಿದ ಸದಸ್ಯರು ಹುಬ್ಬೇರುವಂತೆ ಮಾಡಿದರು.