Advertisement

ಕಲಬುರಗಿ: ಗ್ರಾಮ ಪಂಚಾಯತ್ ಚುನಾವಣೆ ಗೆದ್ದ ತಾಲೂಕು ಪಂಚಾಯತ್ ಸದಸ್ಯ!

01:13 PM Dec 30, 2020 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ 11 ಕೇಂದ್ರಗಳಲ್ಲಿ ನಡೆಯುತ್ತಿದ್ದು, ತಾಲೂಕು ಪಂಚಾಯಿತಿ ಸದಸ್ಯರೊಬ್ಬರು ಗೆಲುವು ಸಾಧಿಸಿದ್ದಾರೆ.

Advertisement

ಚಿಂಚೋಳಿ ತಾಲೂಕಿನ ಜಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಿದ್ದ ತಾಲೂಕು ಪಂಚಾಯಿತಿ ಸದಸ್ಯ ವೆಂಕಟರೆಡ್ಡಿ ಸಾಯಿರೆಡ್ಡಿ ಗೆಲುವಿನ ನಗೆ ಬೀರಿದರು.

121 ಮತಗಳ ಅಂತರದಿಂದ ವೆಂಕಟರೆಡ್ಡಿ ಜಯ ಗಳಿಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಇವರು 2015ರಲ್ಲಿ ಶಿರೋಳ್ಳಿ ತಾಪಂ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಇತರ ಕ್ಷೇತ್ರಗಳ ಫಲಿತಾಂಶ: ಕಲಬುರಗಿ ತಾಲೂಕಿನ ಫರಹತಾಬಾದ್ ಗ್ರಾಮ ಪಂಚಾಯಿತಿ ವಾರ್ಡ್ ನಂ.2ರಲ್ಲಿ ಮೂವರು ಆಯ್ಕೆಯಾದರು. ರಾಚಮ್ಮ ಶರಣಬಸಪ್ಪ 386 ಮತ, ವಿಶ್ವರಾಜ ಹಿರೇಮಠ 381 ಮತ ಹಾಗೂ ಕಾಳಮ್ಮ ಭಂಕೂರ 292‌ ಮತಗಳಿಂದ ಜಯ ಗಳಿಸಿದರು.

ಇದನ್ನೂ ಓದಿ:ರಾತ್ರಿ ಕರ್ಫ್ಯೂ ವಿಚಾರ: ಸಚಿವರುಗಳ ಭಿನ್ನ ಹೇಳಿಕೆ, ಬಗೆಹರಿಯದ ಗೊಂದಲ!

Advertisement

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮ ಪಂಚಾಯಿತಿ ವಾರ್ಡ್ ನಂ.1ರಲ್ಲಿ ಮಲ್ಲಿನಾಥ ತುಪ್ಪದ 341 ಮತ, ಮಲ್ಲಿಕಾರ್ಜುನ ‌ಅಳ್ಳೊಳ್ಳಿ 394 ಮತ, ಮೋನಮ್ಮ ಭಜಂತ್ರಿ 303 ಮತಗಳನ್ನು ಪಡೆದು ಆಯ್ಕೆಯಾದರು.

ಇದೇ ಗ್ರಾಮ ಪಂಚಾಯಿತಿಯ ವಾರ್ಡ್ ನಂ‌.2ರಲ್ಲಿ ಮೂವರು ಗೆಲುವು ಸಾಧಿಸಿದರು. ರಾಜೇಶ್ವರಿ ಅಖಂಡಪ್ಪ ಶಿರವಾಳ 394 ಮತ, ಮಲ್ಲಿನಾಥ ಕೆ.ಭೂಸಾ 393 ಮತ ಹಾಗೂ ವಿರೂಪಾಕ್ಷಪ್ಪ 335 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಕಲಬುರಗಿ ತಾಲೂಕಿನ ನಂದೂರ (ಕೆ) ಗ್ರಾಮ ಪಂಚಾಯಿತಿಯ ವಾರ್ಡ್ ನಂ.2ರಿಂದ ಸೀತಾಬಾಯಿ ರಾಠೋಡ 282 ಮತ, ಗೀತಾ ರವಿ ಪವಾರ 279 ಮತ ಹಾಗೂ ಗಂಗಾಧರ ಸಾವಕಾರ 255 ಮತಗಳನ್ನು ಪಡೆದು ಆಯ್ಕೆಯಾದರು.

ಕಲಬುರಗಿ ತಾಲೂಕಿನ ಸರಡಗಿ (ಬಿ) ಗ್ರಾಮ ‌ಪಂಚಾಯಿತಿಯ ವಾರ್ಡ್ ನಂ.2ರಲ್ಲಿ ಚಂದನಕುಮಾರ ಬಾಬು ಬುಳ್ಳಾ 394 ಮತ, ಚಂದ್ರಕಾಂತ ಸಣಬು‌ 313 ಮತ, ಲಕ್ಷ್ಮಣ ಹೂವಣ್ಣ ಲಗಬೊ 332 ಮತಗಳಿಂದ ಗೆಲುವು ಪಡೆದರು.

ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮ ಪಂಚಾಯಿತಿಯ ವಾರ್ಡ್ ನಂ.1ರಿಂದ ಅಣ್ಣಾರಾಯ ಗೊಲ್ಲಾಳಪ್ಪ 578 ಮತಗಳನ್ನು ಪಡೆದು ಆಯ್ಕೆಯಾದರು.

ಕಾಳಗಿ ತಾಲೂಕಿನ ಅರಣಕಲ್ ಗ್ರಾಮ ಪಂಚಾಯಿತಿಯ ಗೊಣಗಿ ಗ್ರಾಮದ ಅಪ್ಪರಾವ ರುದ್ರಪ್ಪ 92 ಮತಗಳಿಂದ ಗೆಲುವು ‌ಸಾಧಿಸಿದರು. ವಿಜೇತ ಅಭ್ಯರ್ಥಿಗಳು ಮತ್ತು ಬೆಂಬಲಿಗರು ವಿಜಯೋತ್ಸವದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next