Advertisement

ತಾಲೂಕು ಪಂಚಾಯತ್‌ : ಅನುದಾನ ಹೆಚ್ಚಿಸಿ, ಆಶಯ ಉಳಿಸಿ

12:53 AM Jan 29, 2021 | Team Udayavani |

ಬೆಂಗಳೂರು: ಅಧಿಕಾರ ವಿಕೇಂದ್ರೀಕರಣದ ಆಶಯ ಸಾಕಾರವಾಗಬೇಕಾದರೆ ಮೂರು ಹಂತಗಳ ಅಧಿಕಾರ ಇರಲೇಬೇಕು- ಇದು ತಾಲೂಕು ಪಂಚಾಯತ್‌ ಅಧ್ಯಕ್ಷರ ಅಭಿಪ್ರಾಯ. ಅಧಿಕಾರವೇ ಇಲ್ಲದ ತಾ.ಪಂ. ವ್ಯವಸ್ಥೆಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿರುವ ಈ ವೇಳೆ “ಉದಯವಾಣಿ’ ರಾಜ್ಯಾದ್ಯಂತ ತಾ.ಪಂ. ಅಧ್ಯಕ್ಷರನ್ನು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹಿಸಿದೆ. ಹೆಚ್ಚು ಕಡಿಮೆ ಶೇ. 75 ಮಂದಿ ತಾ.ಪಂ. ಇರಲಿ ಎಂದಿದ್ದಾರೆ. ತಾ.ಪಂ. ಇರಲಿ, ಜತೆಗೆ ಹೆಚ್ಚಿನ ಅಧಿಕಾರ ಕೊಡಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರು : ತಾ. ಪಂಚಾಯತ್‌ಗೆ ಅಧಿಕಾರ – ಸಮರ್ಪಕ ಅನುದಾನ ಕೊರತೆ ಇದೆ. ಇದರಿಂದ ಸದಸ್ಯರಿಗೆ ಜನರ ನಿರೀಕ್ಷೆಗಳಿಗೆ ತಕ್ಕಂತೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಸರಕಾರ ತಾ.ಪಂ.ಗಳನ್ನು ರದ್ದುಗೊಳಿಸುವ ಬದಲು ಹೆಚ್ಚಿನ ಅನುದಾನ ಮತ್ತು ಅಧಿಕಾರ ನೀಡಿ ಬಲವರ್ಧನೆಗೊಳಿಸಬೇಕು.

-ಇದು ರಾಜ್ಯದ ಬಹುತೇಕ ತಾ.ಪಂ. ಅಧ್ಯಕ್ಷ- ಉಪಾಧ್ಯಕ್ಷರು ಮತ್ತು ಸದಸ್ಯರ ಒಕ್ಕೊರಲ ಆಗ್ರಹ. ಪಂಚಾಯತ್‌ ವ್ಯವಸ್ಥೆಯ 3 ಹಂತಗಳನ್ನು ಎರಡಕ್ಕಿಳಿಸಲು ಸರಕಾರ ಚಿಂತನೆ ನಡೆಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತಾ.ಪಂ. ವ್ಯವಸ್ಥೆಗೆ ಹೆಚ್ಚು ಅನುದಾನ, ಅಧಿಕಾರ ನೀಡಬೇಕು. ಇದಕ್ಕಾಗಿ ಪಂ.ರಾಜ್‌ ಕಾಯಿದೆಯಲ್ಲಿ ಮಾರ್ಪಾಟು ತರಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಏಕೆ ಬೇಕು?
1 ಸ್ಥಳೀಯ ಸಂಸ್ಥೆಗಳು ಗ್ರಾಮೀಣಾಭಿವೃದ್ಧಿಗಾಗಿ ಜಿ. ಪಂ., ಸರಕಾರಗಳ ನಡುವೆ ಸೇತುವೆಯಂತಿವೆ.
2 ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳ ಮೇಲುಸ್ತುವಾರಿ, ಕಾರ್ಯವೈಖರಿ ತಪಾಸಣೆ, ಲೆಕ್ಕಪತ್ರ ಪರಿಶೋಧನೆಗೆ ಅನುಕೂಲ.
3 ಗ್ರಾ.ಪಂ. ಮಟ್ಟದ ದೂರು, ಸಮಸ್ಯೆಗಳಿಗೆ ತಾ.ಪಂ. ಹತ್ತಿರದ ವ್ಯವಸ್ಥೆ.
4 ಜಿಲ್ಲೆಯ ಎಲ್ಲ ಗ್ರಾ.ಪಂ.ಗಳ ಸಮರ್ಪಕ ಉಸ್ತುವಾರಿ ಜಿ.ಪಂ.ನಿಂದ ಅಸಾಧ್ಯ.
5 ತಾ.ಪಂ. ಸದಸ್ಯರು ಜಿಲ್ಲಾ ಮತ್ತು ಗ್ರಾ.ಪಂ. ನಡುವೆ ಸಂಪರ್ಕ ಸೇತುವಾಗಿರುತ್ತಾರೆ.

ವಿರೋಧ ಏಕೆ ?
1ಕಡಿಮೆ ಅನುದಾನ, ಕಡಿಮೆ ಅಧಿಕಾರ.
2ಹಿಂದೆ 32 ಇಲಾಖೆಗಳಿಗೆ ತಾ.ಪಂ. ಮೂಲಕ ಅನುದಾನ ಹೋಗುತ್ತಿತ್ತು. ಈಗಿಲ್ಲ.
3 20-30 ಸದಸ್ಯರಿರುವ ತಾ.ಪಂ.ನಲ್ಲಿ ಒಬ್ಬರಿಗೆ ನಾಲ್ಕೆ çದು ಲಕ್ಷ ರೂ. ಕೂಡ ಅನುದಾನ ಸಿಗುವುದಿಲ್ಲ.
4ಇಷ್ಟು ಕಡಿಮೆ ಅನುದಾನದಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಿಕೊಡಲಾಗುತ್ತಿಲ್ಲ.

Advertisement

ಆಗಬೇಕಿದೆ ಬಲವರ್ಧನೆ
– ಸರಕಾರವು ತಾ. ಪಂ. ಬಲವರ್ಧನೆಗೆ ಏನು ಮಾಡಬೇಕು ಎಂಬ ಬಗ್ಗೆ ಕೆಲವು ತಾ.ಪಂ. ಅಧ್ಯಕ್ಷರ ಸಲಹೆ ಹೀಗಿವೆ:
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ತ್ರಿಸ್ತರಗಳೂ ಪ್ರಮುಖ. ಹೀಗಾಗಿ ತಾ.ಪಂ. ವ್ಯವಸ್ಥೆಗೆ ಇನ್ನಷ್ಟು ಪುಷ್ಟಿ ತುಂಬ ಬೇ ಕು.

– ಪ್ರತೀ ತಾ.ಪಂ.ಗೆ ಹೆಚ್ಚಿನ ಅನುದಾನ ಮತ್ತು ಅಧಿಕಾರ ನೀಡಬೇಕು. ಇದಕ್ಕಾಗಿ ಕಾಯ್ದೆಯಲ್ಲಿ ಮಾರ್ಪಾಟು ತರಬೇಕು.

– ತಾ.ಪಂ. ಮೂಲಕ ನರೇಗಾ, ವಸತಿ ಯೋಜನೆ ಅನುಷ್ಠಾನಕ್ಕೆ ತರಬೇಕು. ಆದಾಯ ತರುವ ಮಾರ್ಗ ಒದಗಿಸಬೇಕು.

– ಪ್ರತ್ಯೇಕವಾಗಿ ಬಜೆಟ್‌ ಮಂಡಿಸುವ ಶಕ್ತಿ ತುಂಬಬೇಕು. ಅದಕ್ಕಾಗಿ ವಿವಿಧ ತೆರಿಗೆ ವಿಧಿಸುವ ಅಧಿಕಾರ ನೀಡಬೇಕು.

– ಗ್ರಾಮೀಣ ಭಾಗದಲ್ಲಿ ದೊಡ್ಡಮಟ್ಟದ ಯೋಜನೆ ಅನುಷ್ಠಾವನ್ನು ತಾ.ಪಂ.ಗೆ ವಹಿಸಬೇಕು.

– ಅನುದಾನವನ್ನು ಕಾಲಕಾಲಕ್ಕೆ ಬಿಡುಗಡೆ ಗೊಳಿಸಬೇಕು. ವಾರ್ಷಿಕ ಅನುದಾನ 5-6 ಕೋ.ರೂ.ಗಳಿಗೆ ಹೆಚ್ಚಿಸಬೇಕು.

– ಶಾಸಕರ ಅನಗತ್ಯ ಹಸ್ತಕ್ಷೇಪ ತಪ್ಪಿಸಬೇಕು. ಪಿಡಿಒ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಅಧಿ ಕಾರ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next