Advertisement
ಜುಮಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡವಿಭಾವಿ ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತದಿಂದ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉಧ್ಗಾಟಿಸಿ ಮಾತನಾಡಿದರು, ಇಮದು ಪ್ರತಿ ಹಳ್ಳಿಗಳ ಯುವಕರು ಪ್ರಜ್ಞಾವಂತರಾಗಿದ್ದಾರೆ. ಹೀಗಾಗಿ ಅಧಿಕಾರಿಗಳು ಕೂಡ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಮೋಸ ಮಾಡುವುದಾಗಲಿ ಅಥವಾ ಭ್ರಷ್ಟಾಚಾರ ಮಾಡುವುದಾಗಲಿ ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Related Articles
Advertisement
ಇದಕ್ಕೆ ಉತ್ತರಿಸಿ ಶಾಸಕರು ಕೂಡಲೇ ಆರೋಗ್ಯ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜನೆ ಮಾಡಿ ಮತ್ತು ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದ್ದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಿ. ಇಂದು ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಹಳ್ಳಿಗಳ ಸಮಸ್ಯೆಗಳ ಬಗ್ಗೆ ಯುವಕರು ಚರ್ಚೆ ಮಾಡಿರೋದು ಒಂದು ಒಳ್ಳೆಯ ಬೆಳವಣಿಗೆ ಎಂದು ಶಾಸಕರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲದಾರ ಗುರುರಾಜ ಎಮ್. ಅವರು ಮಾತನಾಡಿ, ರಾಜ್ಯ ಸರಕಾರ ಕಂದಾಯ ಇಲಾಖೆಗಳ ಸವಲತ್ತುಗಳನ್ನು ಗ್ರಾಮೀಣ ಭಾಗದ ಜನರ ಮನೆಯ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಇಂದು ನಮ್ಮ ಜಿಲ್ಲೆಯ ಪ್ರತಿಯೊಂದು ತಾಲೂಕಿನ ಮೂರನೇ ಶನಿವಾರ ಒಂದು ಹಳ್ಳಿಯಲ್ಲಿ ಈ ಕಾರ್ಯಕ್ರಮವನ್ನು ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಶೇಕಡಾ 80ರಷ್ಟು ಭಾಗವನ್ನು ಕಂದಾಯ ಇಲಾಖೆ ಸಂಬಂದಿಸಿದ ಸಮಸ್ಯೆಗಳಿಗೆ ಸ್ಥಳದಲ್ಲಿ ಬಗೆಹರಸಿ ಪರಿಹಾರ ನೀಡಲಾಗುವದು, ಇನ್ನಿತರ ಇಲಾಖೆಗಳ ಸಮಸ್ಯಗೆ ಇಲ್ಲಿ ಪರಿಹಾರ ನೀಡಲಾಗುವದು ಎಂದು ಹೇಳಿದರು.
ಅಹವಾಲು ಅರ್ಜಿಗಳು : ರಸ್ತೆ ಅಭಿವೃದಿ, ಶಾಲೆಗಳ ಶಿಕ್ಷಕರ ನಿಯೋಜನೆ, ಸಾರಿಗೆ ವ್ಯವಸ್ಥೆ, ಸ್ಮಶಾನ ಜಮೀನು, ಗ್ರಾಮದಲ್ಲಿ ಇರುವ ವಿದ್ಯುತ್ ಕಂಬ, ತಂತಿಗಳನ್ನು ಸ್ಥಳಾಂತರಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ, ಕಿರಿಯ ಶಾಲೆಯನ್ನು ಹಿರಿಯ ಶಾಲೆಗೆ ಬಡ್ತಿ ನೀಡಬೇಕು, ಸೇರಿದಂತೆ ಸುಮಾರು 62 ಅಹವಾಲುಗಳು ಬಂದಿದ್ದು ಇದರಲ್ಲಿ 54 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಲಾಗಿದೆ ಉಳಿದ 8 ಅರ್ಜಿಗಳನ್ನು ಕೂಡಲೆ ಪರಿಹಾರವನ್ನ ಒದಗಿಸಲಾಗುವದು ಎಂದು ತಹಶೀಲಾದರ ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಈರಣ್ಣ ಅವರು ವಹಿಸಿದರು, ತಾಲೂಕಾ ಪಂಚಾಯತಿ ಇಒ ಶಿವಪ್ಪ ಸುಬೇದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಸಿಡಿಪಿಒ ಅಮರೇಶ ಹಾವಿನ, ಅಕ್ಷರದಾಸೋಹ ಅಧಿಕಾರಿ ಕೆ ಶರಣಪ್ಪ, ತಾಪಂ ಸಹಾಯಕ ನಿದೇಶಕರಾದ ವಿಶ್ವನಾಥ ರಾಠೋಡ್, ಸಮಾಜಕಲ್ಯಾಣ, ಪಿಡಬ್ಲೂಡಿ, ಆರೋಗ್ಯ ಇಲಾಖೆ, ಜೆಸ್ಕಾಂ ಅಧಿಕಾರಿಗಳು, ತಾವರಗೇರ ಪೋಲಿಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಜುಮಲಾಪೂರ ಗ್ರಾಪಂ ಪಿಡಿಓ ದೊಡ್ಡಪ್ಪ, ಗ್ರಾಪಂ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿಗಳು, ಅಡವಿಭಾವಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲ್ಲ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.