Advertisement
ಚನ್ನಪಟ್ಟಣ ತಾಲೂಕಿನಲ್ಲಿ ಸರ್ಕಾರಿ ಜಮೀನುಗಳ ಕಡತ ವಿಲೇವಾರಿ ವಿಚಾರವಾಗಿ ವ್ಯಾಪಕ ಗೋಲ್ ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೆ ಇತ್ತು. ಈ ಅಕ್ರಮಕ್ಕೆ ದ್ವಿತೀಯ ದರ್ಜೆ ನೌಕರ ಅಮಾ ನತು ಗೊಂಡು ಶಿಕ್ಷೆಗೆ ಒಳಗಾಗಿದ್ದಾನೆ. ತಾಲೂಕು ಕಚೇರಿಯ ಮಂಜೂರಾತಿ ವಿಭಾಗದ ದ್ವಿತೀಯ ದರ್ಜೆ ಸಹಾ ಯಕ ಬಿ.ಕೆ. ಹರೀಶ್ ಅಮಾನತುಗೊಂಡಿದ್ದು, ಕೆಲಸದಲ್ಲಿ ಬೇಜವಾಬ್ದಾರಿ ಹಾಗೂ ಅಶ್ರದ್ಧೆ ತೋರಿದ ಆರೋಪದ ಮೇರೆಗೆ ಜಿಲ್ಲಾಧಿಕಾರಿ ಡಾ. ಅನಾಶ್ ಮೆನನ್ ರಾಜೇಂದ್ರನ್ ಅಮಾನತು ಆದೇಶ ಹೊರಡಿಸಿದ್ದಾರೆ.
Related Articles
Advertisement
ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ!: ಅಮಾನತಾಗಿರುವ ಬಿ.ಕೆ. ಹರೀಶ್ ಕುಮಾರ್ ಚನ್ನಪಟ್ಟಣ ತಾಲೂಕು ಕಚೇರಿ ಭೂ ಮಂಜೂರಾತಿಯ ಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸನಿರ್ವಹಿಸುತ್ತಿದ್ದನು. ಈತ ಮಳೂರು ಹೋಬಳಿ ಕೋಲೂರು ಗ್ರಾಮದ ಸರ್ವೆ ನಂ.118ರ ಮೂಲ ಮಂಜೂರು ಕಡತವನ್ನ ಮೇಲಧಿಕಾರಿಗಳ ಹಾಗೂ ಶಾಖೆಯ ವಿಷಯ ನಿರ್ವಾಹಕರ ಅನುಮತಿ ಇಲ್ಲದೇ ಇದೇ ಮೇ 27ರಂದು ಕಚೇರಿಯಿಂದ ತೆಗೆದುಕೊಂಡು ಹೋಗಿ, ಮೇ 30ಕ್ಕೆ ಈ ಕಡತವನ್ನು ಕಚೇರಿಗೆ ಹಿಂದುರಿಗಿಸಿದ್ದನು. ಈ ಬಗ್ಗೆ ಮಾಹಿತಿ ತಿಳಿದು ಬಂದ ತಹಶೀಲ್ದಾರ್ ಈ ಕಡತಗಳನ್ನು ಪರಿಶೀಲಿಸಿದಾಗಮೂಲ ಕಡಕದ ಪುಟಗಳನ್ನು ತೆಗೆದು ನಕಲಿ ದಾಖಲೆಗಳನ್ನು ಆ ಜಾಗಕ್ಕೆ ಸೇರಿಸಲಾಗಿತ್ತು. ಕಚೇರಿಯ ಕಡತವನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈತನ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.