Advertisement

ಕಡಬ: ಇನ್ನೂ ತೆರೆದಿಲ್ಲ ತಾಲೂಕು ಮಟ್ಟದ ಸರಕಾರಿ ಕಚೇರಿಗಳು

01:16 PM Nov 08, 2020 | mahesh |

ಕಡಬ, ನ. 7: ನೂತನ ಕಡಬ ತಾಲೂಕು ಉದ್ಘಾಟನೆ ಗೊಂಡು 2 ವರ್ಷಗಳಾದರೂ ಸರಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಇನ್ನೂ ತೆರೆದುಕೊಂಡಿಲ್ಲ. ಆ ಪೈಕಿ ಕಡಬ ತಾಲೂಕು ಪತ್ರಾಂಕಿತ ಉಪ ಖಜಾನಾಧಿಕಾರಿಗಳ ಕಚೇರಿ (ಟ್ರೆಜರಿ) ಕೂಡ ನಾಮಫಲಕಕ್ಕೆ ಸೀಮಿತವಾಗಿದೆ.

Advertisement

ಆರ್ಥಿಕ ಇಲಾಖೆಯು ರಾಜ್ಯ ಹಣಕಾಸಿನ ನಿರ್ವಹಣೆಯ ಕಾರ್ಯಭಾರವನ್ನು ಹೊಂದಿದ್ದು, ಆ ಕಾರ್ಯದಲ್ಲಿ ಖಜಾನೆ ಇಲಾಖೆಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ತಾಲೂಕು ಖಜಾನೆಗಳು ಕಾರ್ಯನಿರ್ವಹಿಸುತ್ತಿವೆ. ಕಡಬದಲ್ಲಿಯೂ ಶೀಘ್ರದಲ್ಲಿ ತಾಲೂಕು ಖಜಾನೆ ಕಾರ್ಯಾರಂಭಿಸಬೇಕೆನ್ನುವುದು ಸ್ಥಳೀಯರ ಆಗ್ರಹ.

ಪುತ್ತೂರಿನಿಂದಲೇ ಕಾರ್ಯನಿರ್ವಹಣೆ :  ಕಡಬದ ತಹಶೀಲ್ದಾರ್‌ ಕಚೇರಿಯ ಬಳಿ ಇರುವ ಎಪಿಎಂಸಿ ಕಟ್ಟಡದಲ್ಲಿನ ಕೊಠಡಿಯೊಂದಕ್ಕೆ ಕಡಬ ತಾಲೂಕು ಪತ್ರಾಂಕಿತ ಉಪ ಖಜಾನಾಧಿಕಾರಿಗಳ ಕಚೇರಿ ಎನ್ನುವ ನಾಮಫಲಕ ಅಳವಡಿಸಿ 2 ತಿಂಗಳುಗಳು ಕಳೆದಿವೆ . ಕಚೇರಿಗೆ ಪೀಠೊಪಕರಣಗಳು, ಕಂಪ್ಯೂಟರ್‌ ಅಳವಡಿಕೆ ಕಾರ್ಯವೂ ಮುಗಿದಿದೆ. ಕಡಬ ತಾ| ಉಪ ಖಜಾನಾಧಿಕಾರಿಗಳ ಕಚೇರಿಗೆ ತಾಲೂಕು ಮಟ್ಟದ ಅಧಿಕಾರಿ ಸೇರಿ ಒಟ್ಟು 6 ಹುದ್ದೆಗಳು ಮಂಜೂರಾಗಿವೆೆ. ಆದರೆ ಕಚೇರಿ ನಾಮಫಲಕಕ್ಕೆ ಮಾತ್ರ ಸೀಮಿತವಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಕಡಬ ಉಪ ಖಜಾನಾಧಿಕಾರಿಗಳ ಕಚೇರಿಗೆ ನೇಮಕಗೊಂಡ ಸಿಬಂದಿ ಪ್ರಸ್ತುತ ಪುತ್ತೂರು ತಾ| ಉಪ ಖಜಾನಾಧಿಕಾರಿ ಕಚೇರಿಯಿಂದಲೇ ಕಡಬಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಆರಂಭದ ನಿರೀಕ್ಷೆ :  ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಕಡಬದಲ್ಲಿ ನಮ್ಮ ಕಚೇರಿ ಕಾರ್ಯಾರಂಭ ಮಾಡಲು ಸಾಧ್ಯವಾಗಿಲ್ಲ. ಕಡಬ ಉಪ ಖಜಾನಾಧಿಕಾರಿಗಳ ಕಚೇರಿಗೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳು ಪುತ್ತೂರಿನಿಂದ ಕಡಬ ಕಚೇರಿಯ ಕೋಡ್‌ ಸಂಖ್ಯೆಯ ಮೂಲಕವೇ ನಡೆಯುತ್ತಿವೆ. ಡಿಸೆಂಬರ್‌ ಆರಂಭದಲ್ಲಿ ಕಡಬದ ಕಚೇರಿ ಕಾರ್ಯಾರಂಭ ಮಾಡಬೇಕೆಂಬ ಪ್ರಯತ್ನದಲ್ಲಿದ್ದೇವೆ. -ಸುಜಾತಾ ರಾವ್‌, ಉಪ ನಿರ್ದೇಶಕರು, ಜಿಲ್ಲಾ ಖಜಾನೆ, ಮಂಗಳೂರು

ಕಡಬ ತಾಲೂಕು ಪತ್ರಾಂಕಿತ ಉಪಖಜಾನಾಧಿಕಾರಿಗಳ ಕಚೇರಿಗೆ ಈಗಾಗಲೇಅಧಿಕಾರಿ ಹಾಗೂ ಸಿಬಂದಿ ಹುದ್ದೆಮಂಜೂರಾಗಿದೆ. ಪ್ರಸ್ತುತ ಕಡಬ ತಾಲೂಕು ಕಚೇರಿಯ ಬಳಿ ಇರುವ ಎಪಿಎಂಸಿ ಕಟ್ಟಡದಲ್ಲಿ ಬಾಡಿಗೆ ಕೊಠಡಿ ಪಡೆದು ಕಚೇರಿ ತೆರೆಯಲುಸಿದ್ಧತೆ ನಡೆಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿಸ್ವಲ್ಪ ತಡವಾಗಿದೆ. ಇತರ ಇಲಾಖೆಗಳ ತಾಲೂಕುಮಟ್ಟದ ಕಚೇರಿಗಳನ್ನು ಕೂಡ ಹಂತ ಹಂತವಾಗಿತೆರೆಯುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. -ಎಸ್‌.ಅಂಗಾರ, ಸುಳ್ಯ ಶಾಸಕರು

Advertisement

– ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next