ತೆಕ್ಕಟ್ಟೆ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕುಂದಾಪುರ ತಾಲೂಕು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಕುಂದಾಪುರ ತಾಲೂಕು ಇವರ ಜಂಟಿ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಭಜನೋತ್ಸವ 2021 ಕಾರ್ಯಕ್ರಮವನ್ನು ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಫೆ.28 ರಂದು ಉದ್ಘಾಟಿಸಿ ಆರ್ಶೀವಚಿಸಿದರು.
ಈ ಸಂದರ್ಭದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಅವರು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ,ಉದ್ಯಮಿ ಬಿ.ಗಣೇಶ್ ಕಿಣಿ, ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ಧರ್ಮದರ್ಶಿ ಆನಂದ ಸಿ.ಕುಂದರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಉಡುಪಿ ಜಿಲ್ಲೆ ಇದರ ನಿರ್ದೇಶಕ ಗಣೇಶ್ ಬಿ.,ಭಜನಾ ಪರಿಷತ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ್,ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರಟ್ಟಾಡಿ ನವೀನ್‌ಚಂದ್ರ ಶೆಟ್ಟಿ, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಇದರ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ ಸುಳ್ಯ , ಹಾಗೂ ತಾಲೂಕಿನ ಭಜನಾ ತಂಡಗಳ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಗಮಿಸಿದ ಭಜಕರಿಗೆ ಭಜನಾ ತರಬೇತುದಾರರಾದ ಮೈಸೂರಿನ ರಾಜೇಶ್ ಪಡಿಯಾರ್, ಕಾಸರಗೋಡಿನ ರಾಮಕೃಷ್ಣ ಕಾಟುಕುಕ್ಕೆ, ಮಣಿಪಾಲದ ಉಷಾ ಹೆಬ್ಟಾರ್ ಭಜನೋತ್ಸವದಲ್ಲಿ ಕುಣಿತ ಹಾಗೂ ಕುಳಿತು ಭಜನಾ ತರಬೇತಿ ನೀಡಿದರು.
ಉಪನ್ಯಾಸಕ ಸುಧಾಕರ್ ಶೆಟ್ಟಿಗಾರ್ ಸ್ವಾಗತಿಸಿ, ಗಿರೀಶ್ ಚಾತ್ರಬೆಟ್ಟು ಪ್ರಸ್ತಾವನೆಗೈದು, ಪತ್ರಕರ್ತ ಚಂದ್ರಶೇಖರ್ ಬೀಜಾಡಿ ನಿರೂಪಿಸಿ, ಮೇಲ್ವಿಚಾರಕ ಹರೀಶ್ ಖಾರ್ವಿ ವಂದಿಸಿದರು.
ಸಾಧಕ ಹಿರಿಯ ಭಜನಾಗಾರರಿಗೆ ಸಮ್ಮಾನ :
ಸುಮಾರು 70 ವರ್ಷಗಳಿಂದ ಭಜನೆ ಮಾಡಿಕೊಂಡು ಬಂದಿರುವ ಶೀನ ಮರಕಾಲ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ 5 ದಶಕಗಳಿಂದಲೂ ಭಜನೆಯನ್ನೇ ಸಂಪ್ರದಾಯದಂತೆ ನಡೆಸಿಕೊಂಡು ಬಂದಿರುವ ರಾಜೀವ ಶೆಟ್ಟಿ ಉಳ್ಳೂರು 74, ಶ್ರೀಧರ ಶೆಟ್ಟಿ ಹೆಂಗವಳ್ಳಿ, ವಾಸುದೇವ, ಸುಮತಿ ಶೆಟ್ಟಿ, ಸಂಜೀವ ಆರ್.ಪೂಜಾರಿ,ಎಚ್.ವಿ.ಸುಂದರ್‌ರಾಮ್ ಶೆಟ್ಟಿ , ಬಾಲಕೃಷ್ಣ ಶೆಟ್ಟಿ ಮರಾತ್ತೂರು, ಆನಂದ ಶೆಟ್ಟಿ ಹಾಲಾಡಿ ಹಾಗೂ ಕುಂಭಾಸಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷೆ ಶ್ವೇತಾ ಎಸ್. ಹಾಗೂ ಶಖೀಲಾ ಶೆಟ್ಟಿ ಅವರನ್ನು ಗುರುತಿಸಿ ಸಮ್ಮಾನಿಸಲಾಯಿತು.