Advertisement

ನ. 22ರಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

02:41 PM Oct 07, 2019 | Suhan S |

ಸಾಗರ: ಬರುವ ನ. 22ರಿಂದ 24ರವರೆಗೆ ನಗರಸಭೆ ಆವರಣದ ಗಾಂಧಿ  ಮೈದಾನದಲ್ಲಿ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌.ವಿ.ಹಿತಕರ ಜೈನ್‌ ತಿಳಿಸಿದ್ದಾರೆ.

Advertisement

ಕಳೆದ ಮೂರು ವರ್ಷದಂತೆ ಈ ಬಾರಿಯೂ ಸಮ್ಮೇಳನವನ್ನು ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲು ತಯಾರಿ ನಡೆದಿದ್ದು, ಖಾದಿ-ಖಾದ್ಯ ಮತ್ತು ಪುಸ್ತಕ ಮೇಳ ಹಮ್ಮಿಕೊಳ್ಳಲಾಗುವುದು. ವಿವಿಧ ವಿಷಯಗಳ ಕುರಿತು ಚಿಂತನಾ ಗೋಷ್ಠಿ, ಕವಿಗೋಷ್ಠಿ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು.

ಸಮ್ಮೇಳನದ ಪೂರ್ವ ತಯಾರಿಯ ಸಭೆ ಕರೆಯುವ ಬಗ್ಗೆ ಶಾಸಕ ಎಚ್‌. ಹಾಲಪ್ಪ ಅವರಲ್ಲಿ ಚರ್ಚಿಸಿದ್ದು, ಅವರು ನಿಗದಿಗೊಳಿಸಿದ ದಿನಾಂಕದಂದು ಸಭೆ ಕರೆಯಲಾಗುವುದು. ಎಲ್ಲ ಸಂಘ- ಸಂಸ್ಥೆಗಳು, ಸಾರ್ವಜನಿಕರು ಭಾಗವಹಿಸಿ ಉಪಯುಕ್ತ ಸಲಹೆ ನೀಡಲು ಅವಕಾಶವಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಸಾಪ ಯಕ್ಷೊತ್ಸವ: ತಾಲೂಕು ಕಸಾಪ ಕಟ್ಟಡ ನಿರ್ಮಾಣ ಹಾಗೂ ವಿವಿಧ ಚಟುವಟಿಕೆಯ ಸಹಾಯಾರ್ಥವಾಗಿ ನ. 2ರಂದು ಸಂಜೆ 4ರಿಂದ ಲಾಲ್‌ ಬಹದ್ದೂರ್‌ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಕಸಾಪ ಯಕ್ಷೊàತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ಕಲಾವಿದರಿಂದ “ಸುಧನ್ವಾರ್ಜುನ ಮತ್ತು ರಾಣಿ ಶಶಿ ಪ್ರಭೆ’ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನದ ಕರಪತ್ರವನ್ನು ಶಾಸಕ ಎಚ್‌.ಹಾಲಪ್ಪ ಬಿಡುಗಡೆ ಮಾಡಿ ಶುಭ ಕೋರಿದರು.

ಯಕ್ಷಗಾನ ಪ್ರದರ್ಶನದ ಪ್ರವೇಶ ದರದ ಟಕೆಟನ್ನು ಪರಿಷತ್ತಿನ ಕಾರ್ಯದರ್ಶಿ ಮೇಜರ್‌ ಎಂ. ನಾಗರಾಜ್‌ ಅವರು ಪರಿಷತ್ತಿನ ಅಧ್ಯಕ್ಷ ಹಿತಕರ ಜೈನ್‌ ಅವರಿಂದ ಖರೀದಿಸುವ ಮೂಲಕ ಮಾರಾಟಕ್ಕೆ ಚಾಲನೆ ನೀಡಲಾಯಿತು. ಪರಿಷತ್ತಿನ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌, ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಪದಾಧಿಕಾರಿಗಳಾದಗಣಪತಿ ಶಿರಳಗಿ, ಮೇಜರ್‌ ಎಂ. ನಾಗರಾಜ್‌, ಎಸ್‌.ಎಂ. ಗಣಪತಿ, ಸೈಯದ್‌ ನೂರುಲ್ಲಾ ಹಕ್‌, ಹನುಮಂತಪ್ಪ, ಜಿ.ಎಸ್‌. ವೆಂಕಟೇಶ್‌, ಪರಶುರಾಮಪ್ಪ, ಆಯಿಷಾ ಭಾನು, ರವೀಂದ್ರ ಸಾಗರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next