Advertisement
ಮಡಿಕೇರಿಯ ರಾಜಾಸೀಟ್ ನಲ್ಲಿ ವಿಶ್ವ ಚಿತ್ರ ಕಲಾ ದಿನಾಚರಣೆ ಸಂದರ್ಭ ಆಯೋಜಿತ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಚಿತ್ರಕಲಾವಿದ ಬಿ.ಆರ್.ಸತೀಶ್ ರಚಿಸಿದ ಮತದಾನದ ಮಹತ್ವ ಬಿಂಬಿಸುವ ಕೈಬೆರಳಿನ ಬೃಹತ್ ಚಿತ್ರಕ್ಕೆ ಬಣ್ಣ ಸಿಂಪಡಣೆ ಮೂಲಕ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಲಕ್ಷ್ಮೀಪ್ರಿಯ ಉದ್ಘಾಟಿಸಿದರು.
Related Articles
Advertisement
ವಿರಾಜಪೇಟೆಯ ಗಾಯಕರಾದ ಜಾನಪದ ಪರಿಷತ್ ಸದಸ್ಯರೂ ಆಗಿರುವ ಬಿ.ಕೆ.ಮೋಹನ್ , ಕ್ಲಿಫರ್ಡ್ ಡಿಮೆಲ್ಲೋ ಮತ್ತು ಟಾಮಿ ಥೋಮಸ್ ತಂಡದಿಂದ ಮತದಾನದ ಬಗ್ಗೆ ವಿಶೇಷವಾದ ಹಾಡು ಗಾರಿಕೆ ಮನಸೆಳೆಯಿತು.ಮ. ತಾ. ಜಾ.ಪ. ಅಧ್ಯಕ್ಷ ಅನಿಲ್ ಎಚ್. ಟಿ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್.ರವಿಶಂಕರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಮ್ತಾಜ್, ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಕೊಡಗು ಜಿಲ್ಲಾ ರಾಯಭಾರಿ ಈಶ್ವರಿ, ಹಿರಿಯ ಜಾನಪದ ಕಲಾವಿದೆ ಸುಳ್ಳಿಮಾಡ ಗೌರಿ ನಂಜಪ್ಪ, ಎಂ.ಕೆ.ಅರುಣ್ , ಸಂಗೀತಾ ಪ್ರಸನ್ನ, ಅಂಬೆಕಲ್ ನವೀನ್ ಕುಶಾಲಪ್ಪ ಸೇರಿದಂತೆ ರೋಟರಿ ಮಿಸ್ಟಿ ಹಿಲ್ಸ್, ಜಯಾಚಿಣ್ಣಪ್ಪ, ಪಿ.ಆರ್.ರಾಜೇಶ್, ನಿರ್ದೇಶಕ ಚೆಯ್ಯಂಡ ಸತ್ಯ, ಮೇರಿ ನಾಣಯ್ಯ ಸೇರಿದಂತೆ ಅನೇಕರು ಪಾಲ್ಗೊಂಡು ನಾನೂ ಸ್ಮಾರ್ಟ್ ಮತದಾರ ಎಂಬ ಸಂದೇಶಕ್ಕೆ ಸಹಿ ಹಾಕಿ ಮತದಾನದ ಮಹತ್ವ ಸಾರಿದರು. ಮಧ್ಯಾಹ್ನದವರೆಗೂ ರಾಜಾಸೀಟ್ ನಲ್ಲಿ ಪ್ರವಾಸಿಗರೂ ಸೇರಿದಂತೆ ನೂರಾರು ಸಾರ್ವಜನಿಕರು ಕ್ಯಾನ್ವಸ್ ನಲ್ಲಿ ಸಹಿ ಹಾಕಿದರು. ಮತದಾನ ಸಂಬಂಧಿತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ವಿಭಾಗದಲ್ಲಿ ಆಯೋಜಿತ ಚಿತ್ರಕಲಾ ಸ್ಪರ್ಧೆಯಲ್ಲಿ 148 ಸ್ಪರ್ಧಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮತದಾನ ಮಹತ್ವ
ಚಿತ್ರಕಲಾವಿದ ಬಿ.ಆರ್.ಸತೀಶ್ ಮಾತನಾಡಿ ಒಂದು ಚಿತ್ರ ಸಾವಿರ ಪದಗಳಿಗೆ ಸಮವೆಂಬಂತೆ ಚಿತ್ರಕಲೆ ಮೂಲಕ ಮತದಾನ ಮಹತ್ವ ಸಾರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಅರ್ಹರು ಮತದಾನ ಮಾಡುವಂತಾಗಬೇಕು ಎಂದು ಹೇಳಿದರು.