Advertisement
ಹೆಮ್ಮಾಡಿ: ಕಳೆದ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ತಲ್ಲೂರು, ಹೆಮ್ಮಾಡಿ ಹಾಗೂ ಕಟ್‌ಬೆಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸದ್ಯ ಬಹುತೇಕ ಕಡೆಗಳಲ್ಲಿ ಸಮಸ್ಯೆ ಇಲ್ಲ. ಆದರೆ ಎಪ್ರಿಲ್- ಮೇ ತಿಂಗಳಲ್ಲಿ ಕೆಲವೆಡೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದ್ದು, ಇದಕ್ಕೆ ಆಯಾ ಪಂಚಾಯತ್‌ಗಳು ತಾತ್ಕಾ ಲಿಕ ಪರಿಹಾರ ಕಂಡುಕೊಂಡಿದ್ದರೂ, ಶಾಶ್ವತ ಪರಿಹಾರದ ಅಗತ್ಯವಿದೆ.
ಪಂಚಾಯತ್ ವ್ಯಾಪ್ತಿಯ ಉಪ್ಪಿನಕುದ್ರು ಪರಿಸರದ ಬಾಳೆಬೆಟ್ಟು, ಬೊಬ್ಬರ್ಯ ಕೇರಿ, ಸಂಕ್ರಿಬೆಟ್ಟು, ಆಲ್ಕುದ್ರು, ಪಡುಕೇರಿಯಲ್ಲಿ ಉಪ್ಪು ನೀರಿನಿಂದಾಗಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಾರಿ ಸದ್ಯಕ್ಕೆ ಈ ಭಾಗಗಳಲ್ಲಿ ನೀರಿನ ಸಮಸ್ಯೆಯಿಲ್ಲ. ಪ್ರಸ್ತುತ 2 ದಿನ ಅಥವಾ 3 ದಿನಕ್ಕೊಮ್ಮೆ ಈ ಭಾಗಗಳಿಗೆ ನಳ್ಳಿ ಮೂಲಕ ನೀರು ಪೂರೈಸಲಾಗುತ್ತಿದೆ. ಜನವರಿಯಲ್ಲಿ ನೀರಿನ ಸಮಸ್ಯೆ ಇತ್ತು. ಆದರೆ ಈಗ ಪಂಚಾಯತ್‌ನಿಂದ ಕಳೆದ 2 ವಾರದಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿದೆ ಎನ್ನುವುದಾಗಿ ಉಪ್ಪಿನಕುದ್ರುವಿನ ಪ್ರದೀಪ್ ಹೇಳುತ್ತಾರೆ.
Related Articles
ಗ್ರಾಮ ಪಂಚಾಯತ್ ವತಿಯಿಂದ ಜಿ.ಪಂ. ಸದಸ್ಯೆ ಜ್ಯೋತಿ ಎಂ. ಕಾವ್ರಾಡಿ ಅವರ ಮುತುವರ್ಜಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ 50 ಲೀ. ನೀರು ಸಂಗ್ರಹ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ಮಂಜೂರಾಗಿದ್ದು, ಉಪ್ಪಿನಕುದ್ರುವಿನಲ್ಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಈ ಭಾಗದ ನೂರಾರು ಮನೆಗಳಿಗೆ ಅನುಕೂಲವಾಗಲಿದೆ. ಬಾಳೆಬೆಟ್ಟು, ಪಡುಕೇರಿ, ಬೊಬ್ಬರ್ಯ ಕೇರಿ ಪರಿಸರಕ್ಕೆ ಹೊಸದಾಗಿ ಪೈಪ್ ಲೈನ್ ಮಾಡಲಾಗಿದೆ. ಇದಕ್ಕಾಗಿ ಪಂಚಾಯತ್‌ನಿಂದ 5 ಲಕ್ಷ ರೂ. ವೆಚ್ಚ ಮಾಡಲಾಗಿದೆ.
Advertisement
ಹೆಮ್ಮಾಡಿ ಗ್ರಾ.ಪಂ.ಹೆಮ್ಮಾಡಿಯಲ್ಲಿ ಕಳೆದ ಬೇಸಿಗೆಯಲ್ಲಿ ಮಾತ್ರವಲ್ಲದೆ ಡಿಸೆಂಬರ್‌ನಲ್ಲೇ ಕೆಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು. ಸಂತೋಷನಗರ, ಕನ್ನಡಕುದ್ರು, ಬುಗುರಿಕಡು, ಮೂವತ್ತುಮುಡಿ ಹಾಗೂ ಕಟ್ಟುವಿನಲ್ಲಿ ಉಪ್ಪು ನೀರಿನಿಂದಾಗಿ ಸಮಸ್ಯೆ ಉಲ್ಬಣಿಸಿತ್ತು. ಪಂಚಾಯತ್‌ನಿಂದ 2 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಈಗ ಸಮಸ್ಯೆಯಿಲ್ಲ. ಆದರೆ ಮುಂದೆ ಏನೋ ಗೊತ್ತಿಲ್ಲ ಎನ್ನುವುದಾಗಿ ಕನ್ನಡಕುದ್ರುವಿನ ಕಿರಣ್ ಹೇಳುತ್ತಾರೆ. ಪರಿಹಾರ ಕ್ರಮಗಳೇನು?
ಪಂಚಾಯತ್‌ನಿಂದ ಕಳೆದ 1 ವರ್ಷದಲ್ಲಿ 3 ಬೋರ್‌ವೆಲ್ ಕೊರೆಯಿಸಲಾಗಿದೆ. ಇದರಲ್ಲಿ ಸದ್ಯ ನಾವಡರ ಕೇರಿಯಲ್ಲಿ ತೆಗೆದ ಬೋರ್‌ವೆಲ್‌ನಿಂದ ಉತ್ತಮ ನೀರು ಸಿಗುತ್ತಿದೆ. ಇನ್ನೊಂದರಲ್ಲಿ ಉಪ್ಪು ನೀರಿದ್ದು, ಮತ್ತೂಂದನ್ನು ಸ್ವತ್ಛ ಮಾಡುವ ಯೋಜನೆಯಿದೆ. 14 ನೇ ಹಣಕಾಸು ಯೋಜನೆಯ 90 ಸಾವಿರ ರೂ., ವಿದ್ಯುತ್ ಸಂಪರ್ಕಕ್ಕೆ 1.5 ಲಕ್ಷ ರೂ.,2 ಬೋರ್‌ವೆಲ್‌ಗೆ 1.25 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕನ್ನಡಕುದ್ರು – ಮೂವತ್ತುಮುಡಿಗೆ 3.35 ಲಕ್ಷ ರೂ. ಹಾಗೂ ಕಟ್ಟು ಪ್ರದೇಶಕ್ಕೆ 3.25 ಲಕ್ಷ ರೂ. ವೆಚ್ಚದಲ್ಲಿ ಹೊಸ ಪೈಪ್‌ಲೈನ್ ಮಾಡಲಾಗಿದೆ. ಕಟೆಬೆಲ್ತೂರು ಗ್ರಾ.ಪಂ.
ಕಟ್‌ಬೆಲೂ¤ರು ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಬೇಸಗೆಯಲ್ಲಿ ದೇವಲ್ಕುಂದದ ಎತ್ತರದ ಪ್ರದೇಶದಲ್ಲಿರುವ ಸುಮಾರು 16 ಮನೆಗಳು, ಕಟ್‌ಬೆಲೂ¤ರು ಗ್ರಾಮದ ಸುಮಾರು 20-25 ಮನೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸದ್ಯಕ್ಕಂತೂ ನೀರಿನ ಸಮಸ್ಯೆಯಿಲ್ಲ. ಕೈಗೊಂಡ ಕ್ರಮಗಳೇನು?
ಇರುವಂತಹ ಬಾವಿ, ಬೋರ್‌ವೆಲ್‌ಗಳಂತಹ ನೀರಿನ ಸಂಪನ್ಮೂಲಗಳನ್ನು ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಕಳೆದ ಬಾರಿಯಿಂದಲೇ ಟ್ಯಾಂಕರ್ ನೀರು ಪೂರೈಕೆ ಬೇಡ ಎನ್ನುವುದಾಗಿ ಪಂಚಾಯತ್ ನಿರ್ಣಯ ಕೈಗೊಂಡಿತ್ತು. ದೇವಲ್ಕುಂದದಲ್ಲಿ ಪಂಚಾಯತ್ ವತಿಯಿಂದ ಬೋರ್‌ವೆಲ್ ಕೊರೆಯಿಸಲಾಗಿದ್ದು, ಇದರಿಂದ ನೂರಾರು ಮಂದಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಸುಳೆÕಯಲ್ಲಿ ಖಾಸಗಿ ಬೋರ್‌ವೆಲ್‌ಗೆ ಪಂಚಾಯತ್‌ನಿಂದ ಪಂಪ್ ಅಳವಡಿಸಿ, ನೀರು ಪೂರೈಸಲಾಗುತ್ತಿದೆ. ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇಂದಿನಿಂದ ಆರಂಭ. ಶಾಶ್ವತ ಪರಿಹಾರಕ್ಕೆ ಪ್ರಯತ್ನ
ಸೌಕೂರು-ಸಿದ್ದಾಪುರ ಏತ ನೀರಾವರಿಯಲ್ಲಿ ನಮ್ಮ ಪಂಚಾಯತನ್ನು ಸೇರಿಸಿಕೊಳ್ಳಲು ಮನವಿ ಸಲ್ಲಿಸ ಲಾಗಿತ್ತು. ಆದರೆ ಅದರಲ್ಲಿ ಸೇರಿಸಿಲ್ಲ. ಈಗ ಪುರಸಭೆಯಿಂದ ನೀರು ಪೂರೈಕೆಗೂ ಮನವಿ ಸಲ್ಲಿಸಲಾಗಿದೆ. ಅಲ್ಲಿಂದ ಅನುಮತಿ ಸಿಕ್ಕರೆ ನೀರಿನ ಸಮಸ್ಯೆಯ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ.
-ಆನಂದ ಬಿಲ್ಲವ, ಅಧ್ಯಕ್ಷರು ತಲ್ಲೂರು ಗ್ರಾ.ಪಂ. ಪೂರೈಕೆಗೆ ಗರಿಷ್ಠ ಪ್ರಯತ್ನ
ಇಂದಿರಾ ನಗರದಲ್ಲಿ ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್ ಮುತುವರ್ಜಿಯಲ್ಲಿ ಓವರ್ ಹೆಡ್‌ಟ್ಯಾಂಕ್ ನಿರ್ಮಾಣವಾಗುತ್ತಿದೆ. ಕಂಜಾಡಿ ಹಾಗೂ ಕಟ್‌ಬೆಲೂ¤ರಿನಲ್ಲಿ 2 ಬಾವಿ ಕೂಡ ಆಗುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿ ಕಳೆದ ವರ್ಷ 35-40 ಬಾವಿ ನಿರ್ಮಾಣವಾಗಿದ್ದು, ಈ ವರ್ಷ 50 ಕ್ಕೂ ಹೆಚ್ಚು ಬಾವಿ ನಿರ್ಮಾಣವಾಗಲಿದೆ. ಗ್ರಾಮಸ್ಥರಿಗೆ ನೀರಿನ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಪಂಚಾಯತ್‌ನಿಂದ ನೀರು ಪೂರೈಕೆಗೆ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ.
– ಅಶ್ವಿನಿ, ಪಿಡಿಒ, ಕಟ್‌ಬೆಶಾಶ್ವತ ಪರಿಹಾರಕ್ಕೆ ಪ್ರಯತ್ನರು ಗ್ರಾ.ಪಂ. ಪುರಸಭೆಗೆ ಮನವಿ
ಸೌಕೂರು- ಸಿದ್ದಾಪುರ ಏತ ನೀರಾ ವರಿಯ ಪೈಪ್‌ಲೈನ್‌ಗೆ ರೈಲ್ವೇ ಹಳಿ ಅಡ್ಡಿಯಾಗುವು ದರಿಂದ ಹೆಮ್ಮಾಡಿ ಪಂಚಾಯತ್ ಸೇರ್ಪಡೆ ಯಾಗಿಲ್ಲ. ಪುರಸಭೆಯಿಂದ ನೀರು ಪೂರೈಕೆಗೆ ಮನವಿ ಸಲ್ಲಿಸಲಾಗಿದೆ. ಇದರಿಂದ ಶಾಶ್ವತ ಪರಿಹಾರ ಸಾಧ್ಯ. – ಮಂಜು ಬಿಲ್ಲವ, ಪಿಡಿಒ, ಹೆಮ್ಮಾಡಿ ಗ್ರಾ.ಪಂ. - ಪ್ರಶಾಂತ್ ಪಾದೆ