Advertisement
ಈ ಪಂಡಿತನು ತನ್ನ ಹೆಂಡತಿಯೊಡನೆ ಚಿಕ್ಕ ಮನೆಯಲ್ಲಿ ವಾಸವಾಗಿದ್ದನು. ಸದಾ ವ್ಯಾಕರಣ ಅಭ್ಯಾಸದಲ್ಲಿ ತೊಡಗಿದ್ದ ಅವನಿಗೆ ಬಡತನ ಬಂದೊದಗಿತು. ದುಡಿಯುವ ಮಾರ್ಗ ತೋರದೆ ಬಡತನವನ್ನು ಅನುಭವಿಸುತ್ತ ಆ ಪಂಡಿತನು ಕಾಲ ಕಳೆಯುತ್ತಿದ್ದನು.
ಅವನು ವ್ಯಾಕರಣ ಜ್ಞಾನದಿಂದ ಒಂದು ಸಂಸ್ಕೃತದ ಶ್ಲೋಕವನ್ನು ರಚಿಸಿದನು. ಆ ಶ್ಲೋಕವನ್ನು ತೆಗೆದುಕೊಂಡು ಆ ಪಂಡಿತನು ಕಾಳಿದಾಸನಲ್ಲಿಗೆ ಹೋಗಿ ಅದನ್ನು ಕವಿಯ ಕೈಗಿತ್ತು, ಈ ಶ್ಲೋಕದ ಅಂತರಾರ್ಥವನ್ನು ಹಾಗೂ ಅದರ ಜತೆಗೆ ತನ್ನ ಬಡತನ ವಿಷಯವನ್ನೂ ತಿಳಿಸಿದನು. ಕಾಳಿದಾಸನು ಆ ಶ್ಲೋಕವನ್ನು ಓದಿ ಆನಂದಭರಿತನಾಗಿ ಆ ಪಂಡಿತನನ್ನು ಉದ್ದೇಶಿಸಿ, “”ನೀನು ಪ್ರತಿಭಾವಂತ ವ್ಯಾಕರಣ ಪಂಡಿತನಾಗಿದ್ದಿ. ನಾಳೆ ನೀನು ರಾಜನ ಆಸ್ಥಾನಕ್ಕೆ ಬಾ. ರಾಜನಿಗೆ ನಿನ್ನ ಪ್ರತಿಭೆಯನ್ನು ವಿವರಿಸಿ ನಿನಗೆ ಧನಸಹಾಯ ಮಾಡಲು ತಿಳಿಸುತ್ತೇನೆ” ಎಂದನು. ಪಂಡಿತನು, “”ಹಾಗೆಯೇ ಆಗಲಿ. ನಾನು ನಾಳೆ ರಾಜರ ಆಸ್ಥಾನಕ್ಕೆ ಬರುತ್ತೇನೆ” ಎಂದು ಹೇಳಿ ತನ್ನ ಮನೆಗೆ ಹೊರಟುಹೋದನು. ಮರುದಿನ ಪಂಡಿತನು ತಾನು ರಚಿಸಿದ ಶ್ಲೋಕವನ್ನು ಸುಂದರವಾದ ಹಾಳೆಯಲ್ಲಿ ಬರೆದುಕೊಂಡು ಭೋಜರಾಜನ ಆಸ್ಥಾನಕ್ಕೆ ಹೋದನು. ಕಾಳಿದಾಸನು ಪಂಡಿತನ ಪ್ರತಿಭೆ ಕುರಿತು ರಾಜನಿಗೆ ತಿಳಿಸಿ ಹೇಳಿದನು. ರಾಜನ ಅನುಮತಿ ಪಡೆದು ಪಂಡಿತ ತನ್ನ ಶ್ಲೋಕವನ್ನು ಓದಿದನು.
Related Articles
ನಿತ್ಯ ಮಯ್ಯಯೀಭಾವಃ| ತತು³ರುಷ, ಕರ್ಮಧಾರಾಯ
ಯೇ ನಾ ಹಂ, ಸ್ಯಾ ಬಹುವ್ರಿಹಿಃ ||
ಆಗ ಆ ಕಾಳಿದಾಸನು ಪಂಡಿತನಿಗೆ, “”ನೀನು ಈ ಶ್ಲೋಕದಲ್ಲಿ ದ್ವಂದ್ವ, ದ್ವಿಗು, ಅವ್ಯಯೀಭಾವ, ತತು³ರುಷ, ಕರ್ಮಧಾರಾಯ, ಬಹುವ್ರಿಹಿ ಸಮಾಸಗಳ ಹೆಸರುಗಳನ್ನು ಬಳಸಿರುವಿಯಲ್ಲ. ಶ್ಲೋಕದ ಅಂತರಾರ್ಥವನ್ನು ತಿಳಿಸು” ಎಂದನು. ಪಂಡಿತನು ಬಹಳ ಉತ್ಸಾಹದಿಂದ ಶ್ಲೋಕದ ಅರ್ಥ ವಿವರಿಸಿದನು:
“”ದ್ವಂಧ್ವೋಸ್ಮಿ (ನಾವಿಬ್ಬರಿದ್ದೇವೆ) ದ್ವಿಗು ರಶ್ಮಿಚ -ಬಾಳೆಂಬ ಬಂಡಿಗೆ ಎತ್ತುಗಳಂತೆ ಗಂಡಹೆಂಡತಿಯರಿಬ್ಬರಿದ್ದೇವೆ. (ದ್ವಿಗು ಸಮಾಸ) ಮದ್ಗೆಹೇ (ನನ್ನ ಮನೆಯಲ್ಲಿ) ಅವ್ಯಯೀಭಾವಃ (ಹಣವೇ ಇಲ್ಲದ್ದರಿಂದ ಖರ್ಚೇ ಇಲ್ಲ).
ಆದ್ದರಿಂದ “ತತು³ರುಷ’ (ಹೇ ರಾಜನೇ) ಬಹುವ್ರಿಹಿ (ಬತ್ತದೇ ಇರುವ ಬಹಳ ಸಂಪತ್ತುಳ್ಳವನಾದ ನೀನು) ಕರ್ಮಧಾರಾಯ (ಬತ್ತದೇ ಇರುವ ನಿನ್ನ ಸಂಪತ್ತಿನಲ್ಲಿ ಒಂದಿಷ್ಟನ್ನು ಕೊಡುವಂಥ ಕೆಲಸ ಮಾಡು).
Advertisement
ಸಮಾಸಗಳನ್ನೇ ಬಳಸಿ ಸೃಜನಶೀಲವಾಗಿ ಬರೆದ ಶ್ಲೋಕವನ್ನು ಕೇಳಿ, ಅದರ ಅಂತರಾರ್ಥವನ್ನು ಅರಿತು ಭೋಜರಾನು ಸಂತೋಷಭರಿತನಾದನು. ಪಂಡಿತನ ಪ್ರತಿಭೆಯನ್ನು ಪ್ರಶಂಸಿಸಿ ಅವನಿಗೆ ನೂರು ಸುವರ್ಣ ನಾಣ್ಯಗಳನ್ನು ಕೊಟ್ಟು ಕಳಿಸಿದನು.
ಬಸವರಾಜ ಹೂಗಾರ, ಹಿರೇಸಿಂಗನಗುತ್ತಿ