ಕರ್ನಾಲ್: ಕಳೆದ ತಿಂಗಳು ಪ್ರತಿಭಟನಾಕಾರ ರೈತರ ಮೇಲೆ ನಡೆದ ಲಾಠಿ ಪ್ರಹಾರವನ್ನು ಖಂಡಿಸಿ ಮಂಗಳವಾರ ಹರ್ಯಾಣದಲ್ಲಿ ಸಾವಿರಾರು ರೈತರು ಜಿಲ್ಲಾ ಕಾರ್ಯಾಲ ಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತರು ಪಾದಯಾತ್ರೆ ನಡೆಸಿದ್ದು, ಅವರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.
ರೈತರನ್ನು ತಡೆಯಲು ಹರ್ಯಾಣ ಸರ್ಕಾರವು ಪೊಲೀಸರು ಹಾಗೂ ಅರೆಸೇನಾಪಡೆಯ ಭಾರೀ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಿತ್ತು. ಅಲ್ಲದೇ, 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಹಾಗೂ ಎಸ್ಸೆಮ್ಮೆಸ್ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ:ಸತತವಾಗಿ ಸುರಿಯುತ್ತಿರುವ ಮಳೆ: ಆನಂದವಾಡಿ, ನಿಡೇಬಾನ್ ಬ್ರಿಜ್ ಮುಳುಗಡೆ
ಆದರೂ, ಮಹಾಪಂಚಾಯತ್ ನಡೆಯುತ್ತಿದ್ದ ಸ್ಥಳದಿಂದ 5 ಕಿ.ಮೀ. ದೂರದವರೆಗೆ ಪಾದಯಾತ್ರೆ ನಡೆಸಿದ ರೈತರು, ಜಿಲ್ಲಾ ಕಾರ್ಯಾಲಯದತ್ತ ನುಗ್ಗಿದರು. ಅಷ್ಟರಲ್ಲಿ ಜಿಲ್ಲಾಧಿ ಕಾರಿಗಳು ರೈತ ಮುಖಂಡರ ಮನವೊಲಿಸಲು ಯತ್ನಿಸಿದ ರಾದರೂ, ಸಭೆ ಫಲಪ್ರದವಾಗಲಿಲ್ಲ.
ಪ್ರತಿಭಟನಾಕಾರ ರೈತರ “ತಲೆ ಒಡೆಯಿರಿ’ ಎಂದು ಪೊಲೀ ಸರಿಗೆ ಐಎಎಸ್ ಅಧಿಕಾರಿ ಸೂಚಿಸಿದ್ದ ಆಡಿಯೋ ಬಹಿ ರಂಗವಾದ ಹಿನ್ನೆಲೆಯಲ್ಲಿ, ಆ ಅಧಿಕಾರಿಯನ್ನು ವಜಾ ಮಾಡ ಬೇಕು ಎನ್ನುವುದು ರೈತರ ಆಗ್ರಹವಾಗಿದೆ.