Advertisement

ಆರೋಗ್ಯ ಕಾಳಜಿ ವಹಿಸಿ: ಸವದಿ

04:37 PM Jun 02, 2018 | Team Udayavani |

ಬನಹಟ್ಟಿ: ನಗರದ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಆದ್ಯತೆ ನೀಡಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಆಸ್ಪತ್ರೆ ಕುರಿತು ತಿಳಿದುಕೊಂಡಿದ್ದು, ಇಲ್ಲಿಯ ಮೂಲ ಸಮಸ್ಯೆಗಳ ಕಡಿವಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗೆ ಬೇಕಾಗುವ ಎಲ್ಲ ಕೆಲಸ ಕಾರ್ಯಗಳನ್ನು ಮುತುವರ್ಜಿಯಿಂದ ಮಾಡಿಕೊಡುತ್ತೇನೆ. ಹಾಗೆಯೇ ಆಸ್ಪತ್ರೆಯ ಸ್ವತ್ಛತೆ ಕಡೆ ಹೆಚ್ಚಿನ ಗಮನ ನೀಡಿ, ನಾನು ಸದಾ ತಮ್ಮ ಜೊತೆ ಇದ್ದು, ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ನನ್ನ ಗಮನಕ್ಕೆ ತೆಗೆದುಕೊಂಡು ಬಂದರೆ
ಕೊರತೆಗಳನ್ನು ತುಂಬಲು ಪ್ರಯತ್ನ ಮಾಡುತ್ತೇನೆ. ಅಲ್ಲದೇ ಬಹಳ ದಿನಗಳಿಂದ ಬಂದ ಆಗಿರುವ ಡಯಟ್‌(ಬಡವರಿಗೆ ಊಟದ ವ್ಯವಸ್ಥೆ)ಯನ್ನು ಪ್ರಾರಂಭಿಸುವ ಕುರಿತು ಜಿಲ್ಲಾ ಆರೋಗ್ಯಾಧಿ ಕಾರಿಗಳ ಜೊತೆ ಮಾತನಾಡುತ್ತೇನೆ. ಆಸ್ಪತ್ರೆಯ ಮೂಲ ಸೌಲಭ್ಯ, ನೀರು, ರಬಕವಿ-ಬನಹಟ್ಟಿ
ತಾಲೂಕು ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಸರಕಾರ ಹಾಗೂ ಮೇಲಾಧಿಕಾರಿಗಳ ಗಮನ ಸೆಳೆದು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

ಡಾ.ಪಿ.ವಿ. ಪಟ್ಟಣ, ಹಿರಿಯರಾದ ದುಂಡಪ್ಪ ಮಾಚಕನೂರ, ಭೀಮಸಿ ಮಗದುಮ್‌, ಸುರೇಶ ಚಿಂಡಕ ಮಾತನಾಡಿ, ರೋಗಿಗಳಿಗೆ ಊಟದ ವ್ಯವಸ್ಥೆ, ಬಡ ರೋಗಿಗಳ ಆರೋಗ್ಯದ ಕಡೆ ಹೆಚ್ಚಿನ ಗಮನ ಸೇರಿದಂತೆ ಆಸ್ಪತ್ರೆ ಕುರಿತು ಹಲವರು ಅನಿಸಿಕೆ ವ್ಯಕ್ತಪಡಿಸಿದರು. ನಗರದ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ನೂತನ ಶಾಸಕರಾದ ಸಿದ್ದು ಸವದಿ ಅವರನ್ನು ಸನ್ಮಾನಿಸಲಾಯಿತು.

ಡಾ.ಎನ್‌.ಎಂ. ನದಾಫ್‌, ಡಾ.ವೀರೇಶ ಹುಡೇದಮನಿ, ಡಾ. ಸುನೀಲ ಹನಗಂಡಿ, ನಗರ ಬಿಜೆಪಿ ಘಟಕದ ಅಧ್ಯಕ್ಷ ರಾಜು ಅಂಬಲಿ, ರಾಜು ಬಾಣಕಾರ, ಸಿದ್ದನಗೌಡ ಪಾಟೀಲ, ಸದಪ್ಪ ಜಿಡ್ಡಿಮನಿ, ಈರಣ್ಣ ಚಿಂಚಖಂಡಿ, ಶೇಖರ ಹಕ್ಕಲದಡ್ಡಿ, ಶಿವಾನಂದ ಕಾಗಿ, ಈಶ್ವರ ನಾಗರಾಳ, ಡಾ.ಆರ್‌.ಎನ್‌.
ನದಾಫ್‌, ಐ.ತಾಂಬೋಳಿ, ಎಂ. ಬಿ. ಗೋನಿ, ಎಂ. ಕೆ. ಮುಲ್ಲಾ, ಎ. ಫಣಿಬಂದ, ವೈ.ಎಸ್‌. ದನಗಾರ, ಪಿ.ಎಂ. ಗೋಕಾವಿ ಸೇರಿದಂತೆ ಅನೇಕರು ಇದ್ದರು. ರಾಜೇಶ್ವರಿ ನನಜಗಿ ಪ್ರಾರ್ಥಿಸಿದರು. ಎಂ.ಕೆ. ಮುಲ್ಲಾ ಸ್ವಾಗತಿಸಿದರು. ಬಿ.ಎಸ್‌. ಪಟ್ಟಣಶೆಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next