Advertisement

ಅಂಗನವಾಡಿ ಕಟ್ಟಡ ಜಾಗಕ್ಕಾಗಿ ಮಾತಿನ ಜಟಾಪಟಿ

02:21 PM Mar 07, 2022 | Team Udayavani |

ಆನೇಕಲ್‌: ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಆರ್‌ ಬಡಾವಣೆಯ ಸಿಎ ಸೈಟನ್ನು ಅಂಗನವಾಡಿ ಕಟ್ಟಡಕ್ಕೆ ಮೀಸಲಿಟ್ಟಿದ್ದ ಜಾಗದ ವಿಚಾರವಾಗಿ ಪಂಚಾಯಿತಿ ಸದಸ್ಯರ ನಡುವೆ ಶಾಸಕ ಬಿ. ಶಿವಣ್ಣ ಸಮ್ಮುಖದಲ್ಲಿ ಜಟಾಪಟಿ ನಡೆದಿದೆ.

Advertisement

ಮರಸೂರು ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್‌ ರೆಡ್ಡಿಸುದ್ದಿಗಾರರೊಂದಿಗೆ ಮಾತನಾಡಿ, ಮರಸೂರು ಗ್ರಾಪಂ ವತಿಯಿಂದ ಜೆಆರ್‌ ಕೋಕನೆಟ್‌ ಬಡಾವಣೆಯ ಸಿಎ ಸೈಟ್‌ನ್ನು ಖರೀದಿ ಮಾಡಲಾಗಿದ್ದು,ಅದನ್ನು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಭೂಮಿಪೂಜೆಗೆ ನಿಗದಿಪಡಿಸಲಾಗಿತ್ತು. ಆದರೆ, ಬಿಜೆಪಿ ಬೆಂಬಲಿತಅಧ್ಯಕ್ಷರು ಮತ್ತು ಸದಸ್ಯರು ನಿಖರ ಕಾರಣನೀಡದೆ ಕಟ್ಟಡದ ಭೂಮಿಪೂಜೆ ದಿನಾಂಕ ಮುಂದೂಡಲಾಗಿದೆ ಎಂದು ಹೇಳುತ್ತಿದ್ದಾರೆ. ಬಡಾವಣೆ ಅವರ ಜೊತೆ ಆಡಳಿತದಲ್ಲಿರುವವರು ಶಾಮೀಲಾಗಿ ಜಾಗವನ್ನು ಗುಳುಂ ಮಾಡುವತಂತ್ರಗಾರಿಕೆ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಬಡಾವಣೆ ಯವರ ಜೊತೆಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಶಾಮೀಲಾಗಿ ಸಿಎ ಸೈಟ್‌ ಜಾಗವನ್ನುಗುಳುಂ ಮಾಡಲು ಹುನ್ನಾರ ನಡೆದಿದ್ದು, ಜಾಗ ಬೆಲೆ ಬಾಳುವಂತದ್ದು. ಅವರಿಗೆ ಬೇರೆ ಕಡೆ ಕಡಿಮೆ-ವೆಚ್ಚದ ಜಾಗವನ್ನು ಪಡೆದುಕೊಳ್ಳಲು ಮರಸೂರು ಗ್ರಾಪಂಅಧ್ಯಕ್ಷರು ಮತ್ತು ಬಿಜೆಪಿ ಬೆಂಬಲಿತ

ಸದಸ್ಯರು ಮುಂದಾಗಿದ್ದಾರೆ. ಕಾಂಗ್ರೆಸ್‌ಆಡಳಿತ ಅವಧಿಯಲ್ಲಿ ಉದ್ಘಾಟನೆಮಾಡಿದ ಕಟ್ಟಡಗಳು ಮತ್ತು ಹಲವುಅಭಿವೃದ್ಧಿ ಕಾರ್ಯಗಳನ್ನು ಮತ್ತೂಮ್ಮೆಕೇಂದ್ರ ಸಚಿವರನ್ನು ಕರೆಸಿ ಪೂಜೆಮಾಡಿಸುತ್ತಿದ್ದಾರೆ. ಅವರಿಗೆ ಶೋಭೆ ತರುವುದಿಲ್ಲ ಎಂದರು.

ಮರಸೂರು ಗ್ರಾಪಂ ಸದಸ್ಯ ಮಂಜುನಾಥ್‌ ರೆಡ್ಡಿ ಮಾತನಾಡಿ, ಜೆಆರ್‌ಕೋಕನೆಟ್‌ ಬಡಾವಣೆಯಲ್ಲಿ ಖರೀದಿಸಿರುವ ಸಿಎ ಸೈಟ್‌ನ್ನು ಅಂಗನವಾಡಿಕಟ್ಟಡಕ್ಕೆ ಎಂದು ಮೀಸಲಿಟ್ಟಿದ್ದರು. ಆದರೆ, ಈಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಮತ್ತು ಅಧ್ಯಕ್ಷರನ್ನು ಕೇಳಿದರೆ ಅದರಲ್ಲಿ ಕೆಲವು ದೋಷಗಳು ಇದ್ದು ಅದನ್ನುಅಂಗನವಾಡಿ ಕಟ್ಟಡ ಕಟ್ಟಲು ಸೂಕ್ತವಲ್ಲಎಂದು ಸಬೂಬು ಹೇಳುತ್ತಿದ್ದಾರೆ. ಕಟ್ಟಡ

Advertisement

ಕಾಮಗಾರಿಗೆ ಭೂಮಿಪೂಜೆ ನಿಗದಿಪಡಿಸಲಾಗಿತ್ತು. ಕೊನೆ ಕ್ಷಣದಲ್ಲಿಅದನ್ನು ಬಿಟ್ಟಿರುವುದು ಹಲವು

ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಮರಸೂರು ಗ್ರಾಪಂ ವತಿಯಿಂದ ಭೂಮಿಪೂಜೆ ನೆರವೇರಿಸಿ ಕೊಟ್ಟರೆ ಕಟ್ಟಡ ಸಂಪೂರ್ಣ ವೆಚ್ಚ ಭರಿಸಿ, ಕಟ್ಟಡ ನಿರ್ಮಾಣ ಮಾಡಲು ನಾನು ಸಿದ್ಧನಿದ್ದೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next