Advertisement

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

03:59 PM Nov 22, 2024 | Team Udayavani |

ಯಾದಗಿರಿ: ಕೆಡಿಪಿ ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕ ಶರಣಗೌಡ ಕಂದಕೂರು ನಡುವೆ ಟಾಕ್ ವಾರ್ ಜೋರಾಗಿಯೇ ನಡೆಯಿತು.

Advertisement

ನಗರದ ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ (ನ.22) ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಶಾಸಕ ಶರಣಗೌಡ ಕಂದಕೂರು ಅವರು ಅಧಿಕಾರಿಗಳಿಗೆ ಪ್ರಶ್ನೆ ಕೇಳುತ್ತಾ, ಸರ್ಕಾರಕ್ಕೆ‌ ನೀವು ಪ್ರಸ್ತಾವನೆಯನ್ನು ಸಲ್ಲಿಸಿರುವುದು  ಕಾಗದ ರೂಪದಲ್ಲಿದೆ, ಪ್ರಸ್ತಾವನೆ ಎಲ್ಲಿಗೆ ಬಂತು ಎಂದು ಶಾಸಕರ ಪ್ರಶ್ನೆಗೆ ಕೆಂಡಾಮಂಡಲಗೊಂಡ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಯಾವ ವಿಷಯ ಎಲ್ಲಿ ಕೇಳಬೇಕು ಅಲ್ಲಿಯೇ ಕೇಳಬೇಕು ಎಂದು ಕೋಪಗೊಂಡರು.

ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಸಂಪುಟದಲ್ಲಿ ಸಭೆಯಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸುವುದು ಸಚಿವರು-ಶಾಸಕರಾದ ನಮ್ಮ ಕರ್ತವ್ಯವಾಗಿದೆ ಎಂದು ಸಚಿವ ದರ್ಶನಾಪುರ ಕೋಪದಿಂದ ಮಾತನಾಡಿದರು.

ತಕ್ಷಣ ಶಾಸಕ ಕಂದಕೂರು ಅವರು ಅಲ್ಲರಿ ಸಚಿವರೆ ನಾನು ಕೇಳುತ್ತಿರುವುದು ಪ್ರಸ್ತಾವನೆಯನ್ನು ನೀಡುದ್ದೇವೆ, ನಮ್ಮದು ಪ್ರಯತ್ನ ಇದೆ ಆದರೆ ಕೆಲಸ ಎಲ್ಲಿಗೆ ಬಂತು ಎಂದು ಸ್ಪಷ್ಟತೆ ನೀಡುಲು ಹೋದರು. ಆದರೆ ಸಚಿವ ದರ್ಶನಾಪುರ ಅವರು ಕೇಳುವವರಿಗೆ ನಿಮ್ಮ ಪ್ರಶ್ನೆಗಳನ್ನು ಕೇಳಿ ಎಂದರು.

Advertisement

ನಿಮ್ಮ ಪ್ರಸ್ತಾವನೆಯನ್ನು ಆಯಾ ಇಲಾಖೆ ಸಚಿವರೊಂದಿಗೆ ಸದನದಲ್ಲಿ ಚರ್ಚಿಸಿ, ಕೆಡಿಪಿ ಸಭೆಯಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಬಂದಿದೆ. ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕು ಆ ವಿಚಾರ ಮಾತ್ರ ಚರ್ಚಿಸಿ ಎಂದು ಸಚಿವ ದರ್ಶನಾಪುರ ಅವರು ಶಾಸಕ ಕಂದಕೂರು ಅವರಿಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next