Advertisement

ದೇವೇಗೌಡರೊಂದಿಗೆ ಸಿಎಂ ಎಚ್‌ಡಿಕೆ ಚರ್ಚೆ

01:43 AM May 24, 2019 | Lakshmi GovindaRaj |

ಬೆಂಗಳೂರು: ಲೋಕಸಭೆ ಚುನಾವಣೆ ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಆಪ್ತ ಸಚಿವರು ಹಾಗೂ ಶಾಸಕರ ಜತೆ ಸಮಾಲೋಚನೆ ನಡೆಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು.

Advertisement

ಖಾಸಗಿ ಹೋಟೆಲ್‌ನಲ್ಲಿದ್ದ ಕುಮಾರಸ್ವಾಮಿ, ಬೆಳಗ್ಗೆಯಿಂದ ಫ‌ಲಿತಾಂಶದತ್ತಲೇ ದೃಷ್ಟಿ ಹರಿಸಿದ್ದರು. ಮಂಡ್ಯ ಹಾಗೂ ತುಮಕೂರಿನಲ್ಲಿ ಪಕ್ಷದ ಸೋಲಿನ ಮುನ್ಸೂಚನೆ ದೊರೆ ಯುತ್ತಿ ದ್ದಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಜತೆ ದೂರ ವಾಣಿ ಮೂಲಕ ಚರ್ಚಿಸಿದರು. ನಂತರ ತಮ್ಮ ಆಪ್ತ ಸಚಿವರನ್ನು ಹೋಟೆಲ್‌ಗೆ ಕರೆಸಿಕೊಂಡು ಮಾತನಾಡಿದರು.

ನಂತರ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಫ‌ಲಿತಾಂಶ ಹಾಗೂ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಕಾಂಗ್ರೆಸ್‌ ರಾಜ್ಯ ನಾಯಕರ ಪ್ರತಿಕ್ರಿಯೆ ನೋಡಿ ಮುಂದಿನ ತೀರ್ಮಾನ ಕೈಗೊಳ್ಳೋಣ. ಬಿಜೆಪಿಯತ್ತ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಹೋಗದಂತೆ ನೋಡಿಕೊಳ್ಳಬೇಕು ಎಂದು ಈ ವೇಳೆ ದೇವೇಗೌಡರು, ಕುಮಾರಸ್ವಾಮಿಗೆ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

ಮನೆಯಲ್ಲೇ ಇದ್ದ ಗೌಡರು: ತುಮಕೂರಿನಿಂದ ಸ್ಪರ್ಧಿಸಿದ್ದ ಎಚ್‌.ಡಿ.ದೇವೇಗೌಡರು, ಮನೆಯಲ್ಲೇ ಕುಳಿತು ಫ‌ಲಿತಾಂಶ ವೀಕ್ಷಿಸುತ್ತಿದ್ದರು. ಆದರೆ, ಮೊದಲ ಸುತ್ತಿನಿಂದ ಕೊನೆ ಸುತ್ತಿನವರೆಗೂ ಬಿಜೆಪಿ ಅಭ್ಯರ್ಥಿಯ ಲೀಡ್‌ ಹೆಚ್ಚಾಗುತ್ತಲೇ ಹೋಯಿತು. ಇದರ ನಡುವೆ ಮುಖಂಡರು ದೂರವಾಣಿ ಮೂಲಕ ಸಂಪರ್ಕಿಸಿ ಇನ್ನೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳ ಎಣಿಕೆ ಆಗಿಲ್ಲ ಎಂದು ಸಮಾಧಾನ ಮಾಡುತ್ತಿದ್ದರು. ಆದರೆ, ಕೊರಟಗೆರೆ, ಮಧುಗಿರಿ ಯಲ್ಲೇ ಬಿಜೆಪಿಗೆ ಲೀಡ್‌ ಬಂದ ನಂತರ ಗೆಲುವಿನ ಆಸೆ ಕೈ ಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next