Advertisement
ನಗರದ ಬಿ.ಎಚ್.ರಸ್ತೆಯ ಹೊಯ್ಸಳ ಹೋಟೆಲ್ನಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಸುರೇಶ್‌ಗೌಡ ಬರುವುದಕ್ಕೂ ಮುಂಚೆಯೇ ಹೋಟಲ್ಗೆ ಆಗಮಿಸಿದ್ದ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಯುವ ಘಟಕದ ಅಧ್ಯಕ್ಷರಾದ ಹಿರೇಹಳ್ಳಿ ಮಹೇಶ್, ಬೆಳಗುಂಬ ವೆಂಕಟೇಶ್ ಮತ್ತಿತರರು ಪತ್ರಿಕಾಗೋಷ್ಠಿ ಆಗುವವರೆಗೆ ಹೋಟೆಲನಲ್ಲಿಯೇ ಇದ್ದರು.
Related Articles
Advertisement
ಮಾಜಿ ಶಾಸಕರಿಗೆ ಮುತ್ತಿಗೆ ಹಾಕುತ್ತಲೆ ಬಿಜೆಪಿ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರು, ಸುರೇಶ ಗೌಡರಿಗೆ ಸುತ್ತುವರಿದು ನಿಂತರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ನೂಕಾ- ತಳ್ಳಾಟ ನಡೆಯಿತು. ಒಂದು ಹಂತಕ್ಕೆ ಕೈ ಕೈ ಮಿಲಾಯಿ ಸುವವರೆಗೂ ಹೋಗಿತ್ತು. ಆದರೆ ಮಾಜಿ ಶಾಸಕರು ತಮ್ಮ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಹೊರನಡೆದರು.
ಹೋಟೆಲ್ನಲ್ಲಿದ್ದವರಿಗೆ ಗಾಬರಿ ಮೂಡಿಸಿತು. ಈ ನೂಕಾಟ ತಳ್ಳಾಟದಲ್ಲಿ ಹೋಟೆಲ್ನ ಪೀಠೊಪ ಕರಣಗಳು ಹಾಳಾದವು. ಘಟನೆ ನಡೆದು ಅರ್ಧ ಗಂಟೆಗೆ ನಗರದ ಡಿವೈಎಸ್‌ಪಿ ಸೇರಿ ಹಲವು ಪೊಲೀಸರು ಹೋಟೆಲ್ಗೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾಜಿ ಶಾಸಕ ಸುರೇಶ್‌ಗೌಡ ನೇತೃತ್ವ ದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್ಪಿ ಕಚೇರಿಗೆ ತೆರಳಿ ಗ್ರಾಮಾಂತರ ಕ್ಷೇತ್ರದಲ್ಲಿ ಕಳ್ಳತನ ಮಾಡುವ ಕಳ್ಳರನ್ನು ಹಿಡಿಯಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಹೊರಬರುವ ವೇಳೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿರುವುದನ್ನು ಬಿಜೆಪಿ ಮುಖಂಡರು ಖಂಡಿಸಿದರು. ಏನೇ ಆರೋಪವಿದ್ದರೂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಬಹುದಿತ್ತು. ಅದನ್ನು ಬಿಟ್ಟು 2 ಬಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದಿರುವ ಮಾಜಿ ಶಾಸಕರ ಮೇಲೆ ಈ ರೀತಿಯ ದೌರ್ಜನ್ಯ ಸರಿಯಲ್ಲ ಎಂದರು.