Advertisement

ಆರ್ಯ ಮೂಲದ ಬಗ್ಗೆ ಮತ್ತೆ ಚರ್ಚೆ ಶುರು

10:50 AM Sep 09, 2019 | Team Udayavani |

ನವದೆಹಲಿ: ನಮ್ಮ ಮೂಲ ಯಾವುದು ಎಂಬ ಬಗ್ಗೆ ಈವರೆಗೆ ಸಾಹಿತ್ಯ ಹಾಗೂ ಭಾಷೆಯ ಆಧಾರದಲ್ಲಿ ನಡೆಸಿದ ಸಂಶೋಧನೆಗಿಂತ ವಿಭಿನ್ನವಾದ ವರದಿಯೊಂದನ್ನು ಸಂಶೋಧಕರು ನೀಡಿದ್ದಾರೆ. 4500 ವರ್ಷಗಳ ಹಿಂದೆ ಹರ್ಯಾಣದಲ್ಲಿರುವ ಹರಪ್ಪಾ ನಾಗರೀಕತೆಯ ಸ್ಥಳ ರಾಖೀಗರಿಯಲ್ಲಿ ನಡೆಸಿದ ಉತVನನದ ವೇಳೆ ಸಿಕ್ಕ ಮಹಿಳೆಯ ಡಿಎನ್‌ಎ ಆಧರಿಸಿ ಈ ಸಂಶೋಧನೆ ನಡೆಸಲಾಗಿದೆ.

Advertisement

ಹರಪ್ಪಾ ನಾಗರಿಕತೆಯಲ್ಲಿ ಕೃಷಿ ಮೂಲದ ಬಗ್ಗೆ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಿದ ಡೆಕ್ಕನ್‌ ಕಾಲೇಜಿನ ಕುಲಪತಿ ಡಾ. ವಸಂತ್‌ ಶಿಂದೆ ನೇತೃತ್ವದ ತಂಡ ವಿಸ್ತೃತ ವರದಿಯನ್ನು ನೀಡಿದೆ. ಈ ವರದಿಯನ್ನು ವ್ಯಾಖ್ಯಾನಿಸಿದ ಕೆಲವರು, ಆರ್ಯನ್ನರು ದಕ್ಷಿಣ ಏಷ್ಯಾಗೆ ದಂಡೆತ್ತಿ ಬಂದರು ಎಂಬ ಸಿದ್ಧಾಂತವನ್ನೇ ವರದಿಯಲ್ಲಿ ತಳ್ಳಿಹಾಕಲಾಗಿದೆ ಎಂದಿದ್ದಾರೆ. ಆದರೆ ಇನ್ನೂ ಕೆಲವು ವ್ಯಾಖ್ಯಾನದ ಪ್ರಕಾರ, ಆರ್ಯನ್ನರು 4500 ವರ್ಷಗಳವರೆಗೆ ದಕ್ಷಿಣ ಏಷ್ಯಾಗೆ ದಂಡೆತ್ತಿ ಬಂದಿಲ್ಲ. ಅದರ ನಂತರ ಬಂದಿರಬಹುದು. ಆರ್ಯನ್ನರು ಭಾರತಕ್ಕೆ ದಂಡೆತ್ತಿ ಬಂದಿದ್ದಾರೆಯೇ ಅಥವಾ ಇಲ್ಲವೇ ಎಂಬ ಉಲ್ಲೇಖವೇ ವರದಿಯಲ್ಲಿಲ್ಲ ಎಂದಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆದಿದೆ.

ಅಧ್ಯಯನ ವರದಿಯು ಸಿಇಎಲ್ಎಲ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು, ಸಿಂಧೂ ನಾಗರಿಕತೆಯನ್ನು ಪಾಶ್ಚಾತ್ಯ ಮತ್ತು ಕೇಂದ್ರ ಏಷ್ಯಾದಿಂದ ಬಂದ ಆರ್ಯರು ರೂಪಿಸಿದ್ದಲ್ಲ. ಬದಲಿಗೆ ಇಲ್ಲಿಯದೇ ಜನರು ರೂಪಿಸಿದ ನಾಗರಿಕತೆ. ಆದರೆ ಸ್ಟೆಪ್‌ ಪ್ಯಾಸ್ಟೋರಲಿಸ್ಟ್‌ಗಳು ಅಥವಾ ಇರಾನಿ ರೈತರು ಬಂದಿದ್ದು ಹರಪ್ಪಾ ನಾಗರಿಕತೆಯ ಅವನತಿಯ ಕಾಲದಲ್ಲಿ ಎಂದು ಈ ಅಧ್ಯಯನ ಹೇಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next