Advertisement

ಸೈಬರ್‌ ಭದ್ರತೆ ಕುರಿತು ಚರ್ಚೆ

11:35 AM Nov 29, 2017 | Team Udayavani |

ಬೆಂಗಳೂರು: ಸಾರ್ವಜನಿಕ ವಲಯದ ಸಿಂಡಿಕೇಟ್‌ ಬ್ಯಾಂಕ್‌ ಹಾಗೂ ಇನ್ಸ್‌ಟಿಟ್ಯೂಟ್‌ ಫಾರ್‌ ಡೆವೆಲಪ್‌ಮೆಂಟ್‌ ಆ್ಯಂಡ್‌ ರಿಸರ್ಚ್‌ ಇನ್‌ ಬ್ಯಾಂಕಿಂಗ್‌ ಟೆಕ್ನಾಲಜಿ (ಐಡಿಆರ್‌ಬಿಟಿ) ಸಹಯೋಗದಲ್ಲಿ ಆಯೋಜಿಸಿದ್ದ ಚೀಫ್‌ ಇನ್ಫರೆಷನ್‌ ಆಫೀಸರ್ (ಸಿಐಎಸ್‌ಒ) ಸಭೆಯಲ್ಲಿ ಸೈಬರ್‌ ಭದ್ರತೆ ಕುರಿತು ಚರ್ಚಿಸಲಾಯಿತು.

Advertisement

ವಿಚಾರ ಸಂಕಿರಣದಲ್ಲಿ ವಿವಿಧ ಖಾಸಗಿ, ಸಾರ್ವಜನಿಕ ವಲಯದ ಬ್ಯಾಂಕುಗಳ ಮತ್ತು ಹಣಕಾಸು ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿ ಸೈಬರ್‌/ಮಾಹಿತಿ ಭದ್ರತೆ ಕುರಿತು ಚರ್ಚಿಸಿದರು. ಪ್ರತಿನಿತ್ಯ ಬ್ಯಾಂಕುಗಳಲ್ಲಿ ಅಧಿಕಾರಿಗಳು ಎದುರಿಸುವ ಭದ್ರತಾ ಸವಾಲುಗಳನ್ನು ಬಲಪಡಿಸುವ ಮತ್ತು  ಮತ್ತಷ್ಟು ಹೆಚ್ಚಿಸುವ ಬಗ್ಗೆ ಸಮಾಲೋಚಿಸಲಾಯಿತು.

ಈ ಸಂದರ್ಭದಲ್ಲಿ ಐಡಿಆರ್‌ಬಿಟಿ ನಿರ್ದೇಶಕ ಡಾ. ಎ.ಎಸ್‌. ರಾಮಶಾಸ್ತ್ರಿ  ಅವರು ರಚಿಸಿರುವ ಸೈಬರ್‌ ಇನ್ಸೂರೆನ್ಸ್‌ ಎಂಬ ಪುಸ್ತಕವನ್ನು ಸಿಂಡಿಕೇಟ್‌ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌. ಕೃಷ್ಣನ್‌ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ  ಡಾ.ಬಿ.ಎಂ. ಮೆಹ¤ರೆ, ಡಾ. ರಾಜರ್ಷಿ ಪಾಲ್‌, ಬ್ಯಾಂಕಿನ ಅಧಿಕಾರಿಗಳಾದ ಭಾಸ್ಕರ್‌ ಹಂದೆ, ಯು.ಎಸ್‌. ಮಜುಂದಾರ್‌,  ಕೆ. ಶ್ರೀನಿವಾಸ್‌ ರಾವ್‌, ತಿರುಪತಿ ರೆಡ್ಡಿ, ಎ. ಜಯಶೀಲಾ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next