ಕಿನ್ನಿಗೋಳಿ: ಕಿನ್ನಿಗೋಳಿ ನ.ಪಂ. ವ್ಯಾಪ್ತಿಯ ತಾಳಿಪಾಡಿ ಗ್ರಾಮದ ತಾಳಿಪಾಡಿಗುತ್ತು ಹತ್ತರ ಬೆದ್ರಡಿಯಿಂದ ಪಿಪಾದೆ ಸಮೀಪದಲ್ಲಿ ಹರಿಯುತ್ತಿರುವ ನೀರಿನ ತೋಡಿನಲ್ಲಿ ಸುಮಾರು 5 ಅಡಿಯಷ್ಟು ಹೂಳು ತುಂಬಿದೆ. ಸ್ವಲ್ಪ ಮಳೆ ಬಂದರೆ ಸಾಕು ನೆರೆ ಬಂದು ಪರಿಸರದಲ್ಲಿ ಬಿತ್ತನೆ ನಾಟಿ ಮಾಡಿದ ಗದ್ದೆಗಳಿಗೆ ನೆರೆ ನೀರು ಬಿದ್ದು ಹಾನಿಯಾಗಿ ನಷ್ಟ ಉಂಟಾಗುತ್ತಿದೆ.
ಸುಮಾರು 12 ಕಿ.ಮೀ.ನಷ್ಟು ಉದ್ದದಲ್ಲಿ ಎಳತ್ತೂರು ಸಾಗಿ ಶಿಮಂತೂರು ಮೂಲಕ ಮೂಲ್ಕಿ ಶಾಂಭವಿ ನದಿಯನ್ನು ಸೇರುವ ಈ ಕಾಲುವೆಯು ತಾಳಿಪಾಡಿ ಭಾಗದಲ್ಲಿ 15 ವರ್ಷಗಳಿಂದ ಹೂಳು ಎತ್ತದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಎರಡು ವರ್ಷದಲ್ಲಿ ಐದು ಬಾರಿ ನೆರೆ ನೀರು ತುಂಬಿ ತಾಳಿಪಾಡಿಗುತ್ತು ಬೆದ್ರಡಿ, ಪಿಪಾದೆಯ ಸುಮಾರು 100 ಎಕರೆ ಗದ್ದೆಗಳಲ್ಲಿ ಲಕ್ಷಾಂತರ ರೂ. ನಷ್ಟವಾಗಿದೆ.
ಪಂಚಾಯತ್ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ :
ಕಿನ್ನಿಗೋಳಿ ಗ್ರಾ.ಪಂ.ನ ಗ್ರಾಮಸಭೆ, ವಾರ್ಡ್‌ಸಭೆಯಲ್ಲಿ ಹಾಗೂ ಸದಸ್ಯರಲ್ಲಿ, ಜನ ಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಯಾವ ಪ್ರಯೋಜನ ಆಗಿಲ್ಲ . ಬೆಳೆ ಹಾನಿಯ ಪರಿಹಾರವು ಸಿಕ್ಕಿಲ್ಲ ಎನ್ನುವುದು ಅಲ್ಲಿನ ಭತ್ತ ಬೆಳೆದ ಕೃಷಿಕರ ದೂರು.
ಕೆಲವು ವರ್ಷಗಳಿಂದ ನಾವು ಬೆಳೆದ ಭತ್ತ ಹಾಗೂ ಬೈಲು ಕೂಡ ನೆರೆಯಿಂದ ನಷ್ಟ ಉಂಟಾಗಿದೆ. ಜನಪ್ರತಿನಿದಿಗಳು ಸ್ಥಳೀಯಾಡಳಿತ ಈ ಬಗ್ಗೆ ಕ್ರಮ ಕೈಗೊಂಡ ನಮ್ಮ ಸಮಸ್ಯೆಗೆ ಫರಿಹಾರ ನೀಡಬೇಕಾಗಿದೆ.
–ಸುಕುಮಾರ ಶೆಟ್ಟಿ ತಾಳಿಪಾಡಿ, ಕೃಷಿಕರು
ಸ್ಥಳ ಪರೀಶಿಲನೆ ಮಾಡಿ ಕೃಷಿ ವಿಷಯದ ಸಮಸ್ಯೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು.
–ಮತ್ತಾಡಿ, ಮುಖ್ಯಾಧಿಕಾರಿ, ಕಿನ್ನಿಗೋಳಿ ಪ.ಪಂ.
ರಘುನಾಥ ಕಾಮತ್ ಕೆಂಚನಕೆರೆ