Advertisement

ತಾಳಿಕೋಟೆ ಬಂದ್‌ ಸಂಪೂರ್ಣ ಯಶಸ್ವಿ

01:23 PM Oct 25, 2019 | Naveen |

ತಾಳಿಕೋಟೆ: ಸಿಂಧಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ದಲಿತ ಸಮುದಾಯದವರ ಮೇಲೆ ದೌರ್ಜನ್ಯ ಹಾಗೂ ಡಾ| ಅಂಬೇಡ್ಕರ್‌ ಅವರ ಮೂರ್ತಿ ಭಗ್ನಗೊಳಿಸಿರುವ ಕೃತ್ಯ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಕರೆ ನೀಡಿದ್ದ ತಾಳಿಕೋಟೆ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ.

Advertisement

ಅಂಬೇಡ್ಕರ್‌ ಭವನದಿಂದ ಪ್ರಾರಂಭಗೊಂಡ ಬೃಹತ್‌ ಪ್ರತಿಭಟನಾ ರ್ಯಾಲಿಯು ಅಂಬೇಡ್ಕರ್‌ ಸರ್ಕಲ್‌, ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಭಜಾರ, ಶಿವಾಜಿ ಚೌಕ್‌, ಮಹಾರಾಣಾಪ್ರತಾಪ ಸಿಂಹ್‌ ಸರ್ಕಲ್‌ ಮಾರ್ಗವಾಗಿ ಬಸವೇಶ್ವರ ವೃತ್ತ ತಲುಪಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಕೆಲಹೊತ್ತು ಸಂಪೂರ್ಣ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ನಡೆದ ಬಹಿರಂಗ ಸಭೆಯ ನೇತೃತ್ವ ವಹಿಸಿದ್ದ ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಸುರೇಶ ಮಣೂರ ಮಾತನಾಡಿ, ದಲಿತ ಸಮುದಾಯಗಳ ಮೇಲೆ ಇತ್ತೀಚೆಗೆ ದೌರ್ಜನ್ಯಗಳು ಹೆಚ್ಚುಗುತ್ತಿವೆ. ಅಲ್ಲದೆ ಈ ದೇಶದ ಉಜ್ವಲ ಭವಿಷ್ಯವನ್ನು ಸಂವಿಧಾನದ ಮೂಲಕ ರೂಪಿಸಿದ ಡಾ| ಬಾಬಾಸಾಹೇಬ ಅಂಬೇಡ್ಕರ್‌ ಅವರ ಮೂರ್ತಿಗೆ ಅವಮಾನದ ಘಟನೆ ನಡೆಯುತ್ತಿರುವದು ಅತ್ಯಂತ ಖೇದಕರ ಸಂಗತಿ. ಸಿಂದಗಿ ತಾಲೂಕಿನ ಕಕ್ಕಳ ಮೇಲಿ ಗ್ರಾಮದಲ್ಲಿ ಅದೇ ಗ್ರಾಮದವರೇ ಸುಮಾರು 60ಕ್ಕೂ ಹೆಚ್ಚು ಜನರು ದಲಿತ ಜನಾಂಗದವರ ಮೇಲೆ ಹಲ್ಲೆವೆಸಗುವಂತಹ ಕಾರ್ಯ ಮಾಡಿದ್ದಾರೆ.

ಮಹಿಳೆಯರು, ವೃದ್ಧರು, ಮಕ್ಕಳು ಯಾರೂ ಎಂಬದೇ ತಮ್ಮ ಮನಬಂದಂತೆ ಥಳಿಸಿ ಹಲ್ಲೆ ಮಾಡಲಾಗಿದೆ. ಡಾ| ಅಂಬೇಡ್ಕರ್‌ ಅವರ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ.

ಇಂತಹ ಕೃತ್ಯವೆಸಗಿದವರ ಮೇಲೆ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದು ಸಂಶಯಕ್ಕೆ ಎಡೆ ಆಡಿಕೊಟ್ಟಿದೆ. ಕೂಡಲೇ ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

Advertisement

ಡಿಎಸ್‌ಎಸ್‌ ಸಂಘಟನಾ ಸಂಚಾಲಕ ರಾವುತ ತಳಕೇರಿ, ಬ.ಬಾಗೇವಾಡಿ ಡಿ.ಎಸ್‌.ಎಸ್‌. ತಾಲೂಕು ಸಂಚಾಲಕ ಗುರು ಗುಡಿಮನಿ, ದಲಿತ ವಿದ್ಯಾರ್ಥಿ ಪರಿಷತ್‌ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಎಂ.ಸಿ. ಮಯೂರ, ಅಶೋಕ ಚಲವಾದಿ, ಲಕ್ಕಪ್ಪ ಬಡಿಗೇರ, ಜೈಭೀಮ ಮುತ್ತಗಿ ಮಾತನಾಡಿದರು.

ಸುಮಾರು 7 ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ತಾಲೂಕು ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ವಿವಿಧ ದಲಿತಪರ ಸಂಘಟನೆಗಳ ಮುಖಂಡರಾದ ಮುತ್ತಪ್ಪ ಚಮಲಾಪುರ, ಬಸವರಾಜ ಕಟ್ಟಿಮನಿ, ಶಾಂತಪ್ಪ ಚಲವಾದಿ, ಶಂಕರ ಕಟ್ಟಿಮನಿ, ಮಾಳಪ್ಪ ಮಾಳಳ್ಳಿ, ಶೇಖರ ರಕ್ಕಸಗಿ, ಶರಣು ಜಮಖಂಡಿ, ದೇವೀಂದ್ರ ಹಾದಿಮನಿ, ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ, ಮಹಾಂತೇಶ ಕಟ್ಟಿಮನಿ, ನಿಂಗಣ್ಣ ಹೊಸಮನಿ, ಸಿದ್ದು ಬಾರಿಗಿಡದ, ಬಸ್ಸು ಕಟ್ಟಿಮನಿ, ಗೌತಮ ಪತ್ತೇಪೂರ, ನಜೀರ ಚೋರಗಸ್ತಿ, ಬಸವರಾಜ ಗುಂಡಕನಾಳ, ದೇವೀಂದ್ರ ಗೊಟಗುಣಕಿ, ಶರಣು ಭಂಟನೂರ, ಗುರುಪ್ರಸಾದ ಬಿ.ಜಿ, ಪ್ರಕಾಶ ಪೂಜಾರಿ, ಬಿ.ಕೆ. ರತ್ನಾಕರ, ಗೋಪಾಲಕ ಕಟ್ಟಿಮನಿ, ಶ್ವೇತಾ ಭೀಮಕ್ರಾಂತಿ, ಪ್ರಭು ತಮದಡ್ಡಿ, ಹುಯೋಗಿ ತಳ್ಳೊಳ್ಳಿ, ಅಶೋಕ ಚಲವಾದಿ, ಪರಶುರಾಮ ದಿಂಡವಾರ, ನಜೀರಸಾಬ ಬಿಳಗಿ, ವಿನಾಯಕ ಗುಣಸಾಗರ, ದ್ಯಾವಪ್ಪ ದೊಡಮನಿ, ಅಕ್ಷಯ ಅಜಮನಿ, ಚಂದ್ರಶೇಖರ ದೊಡಮನಿ, ಬಸವರಾಜ ಕೊಳ್ಯಾಳ, ಪರಪ್ಪ ಚಲವಾದಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next