Advertisement

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ: ನಡಹಳ್ಳಿ

04:27 PM Mar 01, 2020 | Naveen |

ತಾಳಿಕೋಟೆ: ಅಭಿವೃದ್ಧಿ ದೃಷ್ಟಿಯಿಂದ ಕಳೆದ 25 ವರ್ಷಗಳಿಂದ ಹಿಂದುಳಿದಂತ ಹರನಾಳ ಗ್ರಾಮ ಇದಾಗಿದೆ. ಈ ಗ್ರಾಮದ ರಸ್ತೆಗಳು ಅಭಿವೃದ್ಧಿಯಾಗಬೇಕೆಂಬ ಬಯಕೆ ಗ್ರಾಮಸ್ಥರದ್ದಾಗಿತ್ತು. ಅವರ ಆಶಯದಂತೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳೆಲ್ಲವನ್ನು ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಂದು ಶಾಸಕ ಎ.ಎಸ್‌. ಪಾಟೀಲ(ನಡಹಳ್ಳಿ) ಹೇಳಿದರು.

Advertisement

ಹರನಾಳ ಗ್ರಾಮದಿಂದ ಕಲ್ಲದೇವನಹಳ್ಳಿ ಗ್ರಾಮದವರೆಗೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ವತಿಯಿಂದ 1.8 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹರನಾಳ ಗ್ರಾಮದಿಂದ ತಾಳಿಕೋಟೆ ಸಂಪರ್ಕಿಸುವ ಡೋಣಿ ನದಿಗೆ ಅಡ್ಡಲಾದ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇನೆ. ಈಗ ಟೆಂಡರ್‌ ಪ್ರೋಗ್ರೆಸ್‌ ಮುಗಿದಿದೆ. ಇನ್ನೂ ಕೆಲ ದಿನಗಳಲ್ಲಿ ಈ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದೇನೆಂದ ಅವರು, ಹರನಾಳ ಗ್ರಾಮದಿಂದ ನಾಗೂರ ಗ್ರಾಮಕ್ಕೆ ರಸ್ತೆ ಸುಧಾರಣೆ ಆಗಬೇಕೆಂಬ ಬೇಡಿಕೆಯಿದೆ. ಆ ರಸ್ತೆ ಸುಧಾರಣೆಗೆ ಎಸ್ಟಿಮೇಟ್‌ ಕಾರ್ಯ ನಡೆದಿದೆ. ಅದನ್ನು ಕೂಡಾ ಕೆಲ ದಿನಗಳಲ್ಲಿ ಸುಧಾರಣೆ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಹರನಾಳ ಗ್ರಾಮದಲ್ಲಿಯೂ ಸಿಸಿ ರಸ್ತೆಯನ್ನು ಮಾಡಿಸುವ ಸಲುವಾಗಿ ಮುಖಂಡರಾದ ನಿಂಗಪ್ಪಗೌಡ ಬಪ್ಪರಗಿ ಅವರು ನನಗೆ ತಿಳಿಸಿದ್ದಾರೆ. ಸಿಸಿ ರಸ್ತೆ ಸುಧಾರಣೆಗೆ 1 ಕೋಟಿ ರೂ. ಸರ್ಕಾರದಿಂದ ಬಿಡುಗಡೆಗೊಳಿಸಿ ಆ ಕಾರ್ಯವನ್ನು ಯಶಸ್ವಿ ಮಾಡಿ ಕೊಡುತ್ತೇನೆಂದ ಅವರು, ಈ ಗ್ರಾಮಕ್ಕೆ ಅವಶ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

ಡೋಣಿ ನದಿ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವಂತಹ ಎಲ್ಲ ರೈತರಿಗೆ ಶೀಘ್ರ ಗತಿಯಲ್ಲಿ ಸರ್ಕಾರದಿಂದ 30 ದಿನದಲ್ಲಿ ಪರಿಹಾರ ಕೊಡಿಸುವಂತಹ ಕೆಲಸ ಮಾಡಿದ್ದು ಎಲ್ಲ ರೈತರು ಪಡೆದುಕೊಂಡಿದ್ದಾರೆ. ರೈತ ಪರ ಸರ್ಕಾರವಾಗಿರುವ ಕೇಂದ್ರ ಸರ್ಕಾರವು ರೈತರಿಗೆ ಬೀಜ ಗೊಬ್ಬರ ಕೊಂಡುಕೊಳ್ಳುವುದಕ್ಕೆ ಪ್ರತಿ ವರ್ಷ 10 ಸಾವಿರ ರೂ.ಯನ್ನು ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಜಾರಿಗೆ ತಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ರೈತರ ಅಕೌಂಟ್‌ಗಳಿಗೆ ನೇರವಾಗಿ ಒದಗಿಸಿ ಕಷ್ಟಕ್ಕೆ ನೇರವಾಗಿದ್ದಾರೆಂದರು.

ಮುಂದಿನ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಎಲ್ಲ ರೀತಿಯಿಂದಲೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು. ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಪಾಟೀಲ, ತಾಪಂ ಸದಸ್ಯ ಬಸವರಾಜ ಗುಳಬಾಳ, ಸಾಹೇಬಗೌಡ ಮಕಾಶಿ, ನಿಂಗಪ್ಪಗೌಡ ನಾಗೂರ, ಈರಣ್ಣ ಹೋಕ್ರಾಣಿ, ಮಾನಪ್ಪಗೌಡ ಬಿರಾದಾರ, ಚನ್ನಪ್ಪ ಪೂಜಾರಿ, ನಿಂಗಪ್ಪ ನಾಗೂರ, ಅಯ್ಯಪ್ಪ ತುಂಬಗಿ, ಧನರಾಜ ಯಡಹಳ್ಳಿ, ದೇವಣ್ಣ ಪೂಜಾರಿ, ಸಂಗಪ್ಪ ಚಳ್ಳಗಿ, ಬಸನಗೌಡ ಪೂಜಾರಿ, ಮಲಕಪ್ಪ ಬೊಮ್ಮನಹಳ್ಳಿ, ಲೋಕೋಪಯೋಗಿ ಇಲಾಖೆ ಅಭಿಯಂತರ ಜಿ.ಎಸ್‌. ಪಾಟೀಲ, ಕಿರಿಯ ಅಭಿಯಂತರ ಅಶೋಕ ಬಿರಾದಾರ, ಜೆಇ ಸೋಮನಾಥ ಕುಳಗೇರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next