Advertisement

ಮಾಸ್ಕ್ ಹಾಕದವರಿಗೆ ದಂಡ

04:22 PM May 09, 2020 | Naveen |

ತಾಳಿಕೋಟೆ: ಲಾಕ್‌ಡೌನ್‌ ಸಡಿಲಿಕೆ ನಂತರ ಮಾಸ್ಕ್ ಹಾಕಿಕೊಳ್ಳದೇ ಪುರಸಭೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದರೂ ಪಟ್ಟಣದ ಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಮಾಸ್ಕ್ ಹಾಕದವರಿಗೆ, ಸಾಮಾಜಿಕ ಅಂತರ ಕಾಪಾಡದ ಅಂಗಡಿಕಾರರಿಗೆ ಪುರಸಭೆ ದಂಡ ವಿಧಿಸುವುದನ್ನು ಮುಂದುವರಿಸಿದೆ.

Advertisement

ಮೊದಲ ದಿನ ಬುಧವಾರ ಮಾಸ್ಕ್ ಹಾಕದ 64 ಜನರಿಗೆ ದಂಡ ವಿಧಿಸಿ 6,400 ರೂ. ದಂಡ ವಸೂಲಿ ಮಾಡಲಾಗಿತ್ತು. ಶುಕ್ರವಾರ ಮತ್ತೇ ಕಾರ್ಯಾಚರಣೆಗೆ ಇಳಿಸಿದ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಮಾಸ್ಕ್ ಹಾಕದೇ ಸಂಚರಿಸುತ್ತಿದ್ದ ಬೈಕ್‌ ಸವಾರರು, ಪಾದಚಾರಿಗಳಿಗೆ 38 ಜನರಿಗೆ ತಲಾ 100ರೂ. ಗಳಂತೆ 3,800 ರೂ. ಮತ್ತು ಸಾಮಾಜಿಕ ಅಂತರ ಪಾಲನೆ ಮಾಡದೇ ಗುಂಪುಗೂಡಿದ್ದ ನಾಲ್ವರಿಗೆ ತಲಾ 500 ರೂ.ದಂತೆ 2000 ರೂ. ದಂಡ ವಿಧಿಸಿದ್ದಾರೆ. ಎರಡು ದಿನದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ವ್ಯವಸ್ಥಾಪಕ ಎಚ್‌.ಎ.ಢಾಲಾಯತ್‌, ಆರ್‌.ವೈ. ನಾರಾಯಣಿ, ಬಿ.ಜಿ.ನಾರಾಯಣಕರ್‌, ಶ್ರೀಪಾದ ಜೋಶಿ, ಆರೋಗ್ಯ ಅಧಿಕಾರಿಗಳಾದ ಶಿವು ಜುಮನಾಳ, ಬಸವರಾಜ ಖಾಜಿಬೀಳಗಿ, ಎಸ್‌.ಎ.ಘತ್ತರಗಿ ಇತರರು ಇದ್ದರು,

Advertisement

Udayavani is now on Telegram. Click here to join our channel and stay updated with the latest news.

Next