Advertisement

ವೈಭವದ ಖಾಸ್ಗತ ಶ್ರೀ ರಥೋತ್ಸವ

10:50 AM Jul 15, 2019 | Naveen |

ತಾಳಿಕೋಟೆ: ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ರವಿವಾರ ಜರುಗಿದ ಖಾಸ್ಗತ ಮಹಾಶಿವಯೋಗಿಗಳ ಗಂಗಸ್ಥಳ ಹಾಗೂ ಶ್ರೀಗಳ ಭವ್ಯ ಮೆರಣಿಗೆಯ ಮಹಾ ಕಾರ್ಯಕ್ರಮ ಶ್ರೀ ಮಠದ ನೂತನ ಪೀಠಾಧಿಪತಿ ಸಿದ್ದಲಿಂಗ ದೇವರ ಅಧ್ಯಕ್ಷತೆಯಲ್ಲಿ ಭಕ್ತಿಭಾವದಿಂದ ಜರುಗಿತು.

Advertisement

ಬೆಳಗ್ಗೆ 8ಕ್ಕೆ ಖಾಸ್ಗತ ಮಠದಿಂದ ಆನೆ ಅಂಬಾರಿ ಮೇಲೆ ಖಾಸ್ಗತರ ಬೆಳ್ಳಿ ಮಹಾಮೂರ್ತಿ ಮಹಾ ಮೆರವಣಿಗೆ, ಲಿಂ| ವಿರಕ್ತ ಮಹಾಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆ ಅಲ್ಲದೇ ಅಶ್ವಮೇಧ ಬೆಳ್ಳಿ ರಥದಲ್ಲಿ ಕುಳಿತ ಶ್ರೀ ಮಠದ ನೂತನ ಪೀಠಾಧಿಪತಿ ಸಿದ್ದಲಿಂಗ ದೇವರು ಅಲ್ಲದೇ ಪಲ್ಲಕ್ಕಿ ಹಾಗೂ ರಥದ ಕಳಸದ ಮಹಾ ಮೆರವಣಿಗೆ ಪಟ್ಟಣದ ಪ್ರಮುಖ ಬಡಾವಣೆಯಲ್ಲಿ ಹಾಯ್ದು ಪುರಾತನ ಭಾವಿಯಾದ ಭೀಮನ ಬಾವಿಯಲ್ಲಿ ಗಂಗಸ್ಥಳ ಮಹಾ ಕಾರ್ಯಕ್ರಮ ಮುಗಿಸಿಕೊಂಡು ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಹಾಯ್ದು ಮಠ ತಲುಪಿತು.

ಗಂಗಸ್ಥಳ ಉತ್ಸವ ನಿಮಿತ್ತ ಜಾತಿ ಬೇಧವೆನ್ನದೇ ಮೆರವಣಿಗೆ ಚಲಿಸುವ ರಸ್ತೆಯುದ್ದಕ್ಕೂ ಸುಮಂಗಲೆಯರು ತಮ್ಮ ಮನೆ ಅಂಗಳದಲ್ಲಿ ಕಸಗೂಡಿಸಿ ನೀರುಣಿಸಿ ರಂಗೋಲಿ ವಿವಿಧ ನಮೂನೆ ಚಿತ್ರ ಬಿಡಿಸಿದ್ದಲ್ಲದೇ ಮನೆ ಮನೆಗೆ ತಳಿರು ತೋರಣ ಕಟ್ಟಿ ಈ ಮಹಾ ಮಹಾತ್ಮರ ಭವ್ಯ ಮರವಣಿಗೆಯನ್ನು ಸ್ವಾಗತಿಸಿದರು.

ಅಂಬಾರಿ ಮೆರಣಿಗೆಯುದ್ದಕ್ಕೂ ವಿವಿಧ ವಾದ್ಯ ವೈಭವಗಳು ಅಲ್ಲದೇ ಗೊಂಬೆ ಕುಣಿತ, ಕರಡಿ ಮಜಲು, ಸನಾದಿಯ ನಾದ, ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಆನೆ ಅಂಬಾರಿ ಮೆರವಣಿಗೆ ಹಾಗೂ ಅಶ್ವಮೇಧ ರಥದಲ್ಲಿ ಶ್ರೀಗಳ ಮೆರವಣಿಗೆ ಐತಿಹಾಸಿಕ ತಾಳಿಕೋಟೆ ಪಟ್ಟಣದ ರಾಜ ವೈಭವವನ್ನು ಮರುಕಳಿಸುಂತೆ ಎದ್ದು ಕಾಣುತ್ತಿತ್ತು. ಮಹಾ ವೈಭವದ ಗಂಗಸ್ಥಳ ಕಾರ್ಯಕ್ರಮದಲ್ಲಿ ನಡೆದ ಓಂ ನಮಃ ಶಿವಾಯ ಎಂಬ ಶಿವಭಜನೆ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ರಾಜವಾಡೆ ಕಿಂಗ್ಸ್‌ ಗೆಳೆಯರ ಬಳಗ, ಭಗತ್‌ಸಿಂಗ್‌ ಗೆಳೆಯರ ಬಳಗ, ರಾಮಸಿಂಗ್‌ ಗೆಳೆಯರ ಬಳಗ, ಭಾರತ ವಿಕಾಸ ಪರಿಷತ್‌, ವಿರಕ್ತೇಶ್ವರ ತರುಣ ಸಂಘ, ನಮ್ಮ ಗೆಳೆಯರ ಬಳಗ, ಮತ್ತು ಸಜ್ಜನ ಸಮಾಜ ಬಾಂಧವರು ಒಳಗೊಂಡು ಅನೇಕ ಯುವಕ ಸಂಘದವರು ದಾರಿಯುದ್ದಕ್ಕೂ ಪ್ರಸಾದದ ಸೇವೆಯನ್ನು ಏರ್ಪಡಿಸಿದರೆ ಇನ್ನೂ ಕೆಲವರು ತಂಪು ಪಾನಿಯ ವ್ಯವಸ್ಥೆ ಮಾಡಿ ಭಕ್ತಾದಿಗಳಿಗೆ ದಣಿವನ್ನು ತಣಿಸಿದರು.

Advertisement

ಬೆಳಗ್ಗೆ 8ಕ್ಕೆ ಪ್ರಾರಂಭಗೊಂಡ ಗಂಗಸ್ಥಳ ಮಹಾ ಮೆರವಣಿಗೆ ವಿವಿಧ ಪ್ರಮುಖ ಬಡಾವಣೆಗಳಲ್ಲಿ ಹಾಯ್ದು ಖಾಸ್ಗತೇಶ್ವರ ಮಠಕ್ಕೆ ಮಧ್ಯಾಹ್ನ 2:30ಕ್ಕೆ ಆಗಮಿಸಿತು.

ಮಹಾ ಕಾರ್ಯಕ್ರಮದಲ್ಲಿ ಮುಂಬೈ, ಪುಣೆ, ಹೈದ್ರಾಬಾದ್‌, ಅಲ್ಲದೇ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಕಲಬುರಗಿ ನಗರಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಂಡು ಭಕ್ತಿಭಾವ ಮೆರೆದರು.

ಮೆರವಣಿಗೆಯಲ್ಲಿ ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ, ಸಂಗಯ್ಯ ವಿರಕ್ತಮಠ, ವಿಶ್ವನಾಥ ವಿರಕ್ತಮಠ, ಶರಭಯ್ಯ ಪುರಾಣಿಕಮಠ, ಮುರಗನವರ ಶಿರೂರ, ಶ್ರೀಧರ ಕಾಗನೂರಮಠ ಪಾಲ್ಗೊಂಡಿದ್ದರು.

ಈ ಬೃಹತ್‌ ಮೆರವಣಿಗೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಡು ಬರಲು ಪೊಲೀಸ್‌ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸೈ ಗೋವಿಂದೇಗೌಡ ಪಾಟೀಲ ಬಂದೋಬಸ್ತ್ ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next