Advertisement

ಸಾವಿರ ಜೋಡಿ ಸಾಮೂಹಿಕ ಮದುವೆಗೆ ನಡಹಳ್ಳಿ ನಿರ್ಧಾರ

03:40 PM Feb 27, 2020 | Naveen |

ತಾಳಿಕೋಟೆ: ನನ್ನ ಮತಕ್ಷೇತ್ರದ ಬಡ ಬಗ್ಗರ ಅನುಕೂಲಕ್ಕಾಗಿ ಏಪ್ರೀಲ್‌ ಅಥವಾ ಮೇ ತಿಂಗಳಲ್ಲಿ ಒಂದು ಸಾವಿರ ಜೋಡಿ ಸಾಮೂಹಿಕ ವಿವಾಹ ಏರ್ಪಡಿಸಲಿದ್ದೇನೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

Advertisement

ತಾಲೂಕಿನ ವನಹಳ್ಳಿ ಗ್ರಾಮದಲ್ಲಿ 2.15 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಗ್ರಾಮದೇವತೆ ದೇವಸ್ಥಾನಕ್ಕೆ 5 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಹಾಗೂ ಮಿಣಜಗಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮತಕ್ಷೇತ್ರದಲ್ಲಿ ಸಾಕಷ್ಟು ಜನ ಬಡ ಬಗ್ಗರಿದ್ದಾರೆ. ಅಂಥವರಿಗೆ ಸಹಾಯ ಮಾಡುವುದು ನನ್ನ ಸ್ವಯಂ ಇಚ್ಛೆಯಾಗಿದೆ. ಯಲಗೂರ ಗ್ರಾಮ ಅಥವಾ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಇದರಿಂದ ಸಾವಿರಾರು ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಜನರಿಗೆ ಸಹಾಯಧನ ಕೂಡಾ ಸರ್ಕಾರದಿಂದ ದೊರಕಲಿದೆ. ಈ ಸಾಮೂಹಿಕ ವಿವಾಹದ ಸಿದ್ಧತೆ ಮತ್ತು ಪ್ರಚಾರ ಕುರಿತು ತಯಾರಿ ನಡೆಸಲಾಗುತ್ತಿದೆ ಎಂದರು.

ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಅನುದಾನ ಪಡೆದುಕೊಳ್ಳಲು ಮುಂದಾಗಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಸುಮಾರು 200 ಕೋಟಿಗೂ ಅಧಿಕ ಮೊತ್ತದ ಅನುದಾನ ಬಂದಿದೆ. ಇದರಲ್ಲಿ ಕೆಲವು ಸರ್ಕಾರದ ಹಂತದಲ್ಲಿ ಪ್ರೊಗ್ರೇಸ್‌ನಲ್ಲಿವೆ. ಅವು ಸಹ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದರು.

ವಿಶೇಷವಾಗಿ ಗ್ರಾಮೀಣ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸಿಸಿ ರಸ್ತೆ, ಕುಡಿಯುವ ನೀರು, ಬಡವರಿಗೆ ಮನೆಗಳನ್ನು ಒದಗಿಸಲು ಹೆಚ್ಚಿಗೆ ಒತ್ತು ನೀಡಿ ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ರಸ್ತೆಗಳು ಸಂಪೂರ್ಣ ಸುಧಾರಣೆಯಾಗಬೇಕೆಂಬ ಅಭಿಲಾಷೆ ನನ್ನದಾಗಿದೆ ಎಂದ ಅವರು, ಪ್ರತಿ ಹಳ್ಳಿಗಳಲ್ಲಿ ಕೆರೆ ತುಂಬಿಸಲು ಕ್ರಮ ವಹಿಸಿದ್ದೇನೆ. ಬೇಸಿಗೆಯಲ್ಲಿ ಮತ್ತೆ ಕೆರೆ ತುಂಬಿಸಲು ಕ್ರಮ ವಹಿಸುತ್ತೇನೆ. ಎಲ್ಲಿ ನೀರಿನ ಸಮಸ್ಯೆ ಇರುತ್ತದೆಯೋ ಅಲ್ಲಿ ಬೋರ್‌ವೆಲ್‌ ಕೊರೆಸಲು ಅಧಿಕಾರಿಗಳಿಗೆ  ಸೂಚಿಸಿದ್ದೇನೆ. ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದೇನೆ. ದೇವಸ್ಥಾನಗಳಿಗೆ ಭವನ ನಿರ್ಮಾಣಕ್ಕೂ ಮುಂದಾಗಿದ್ದೇನೆ. ಮುಂದಿನ 3 ವರ್ಷಗಳ ನಮ್ಮ ಸರ್ಕಾರದ ಅವಧಿಯಲ್ಲಿ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆಂದರು.

Advertisement

ಸಮಾಜ ಸೇವಕ ಶಾಂತಗೌಡ ಪಾಟೀಲ (ನಡಹಳ್ಳಿ), ಮುಖಂಡರುಗಳಾದ ಶೇಖರಯ್ಯ ಹಿರೇಮಠ, ಸಿದ್ದನಗೌಡ ತಳನೂರ, ಸಿದ್ದನಗೌಡ ಪಡೇಕನೂರ, ಹನುಮಗೌಡ ಮುದ್ನೂರ, ರಮೇಶ ಗುರಡ್ಡಿ, ರುದ್ರಗೌಡ ಬಿರಾದಾರ, ರಮೇಶ ತಿಳಗೂಳ, ರಾಜುಗೌಡ ತಿಳಗೂಳ, ಬಾಬುಗೌಡ ಹಂದ್ರಾಳ, ಎಸ್‌.ಎಸ್‌.ಯರನಾಳ, ಡಿ.ಕೆ. ಪಾಟೀಲ, ಎಸ್‌.ಎಂ. ಬೆಣ್ಣೂರ, ಬಿ.ಎಂ. ಬಿರಾದಾರ, ಕೆ.ಎ. ಪಾಟೀಲ, ಈರಣ್ಣ ಬಿರಾದಾರ, ಮಲ್ಲಯ್ಯ ವಿಭೂತಿಮಠ, ಪಿ.ಆರ್‌. ಪಾಟೀಲ, ಬಿ.ಎಸ್‌. ಬಿರಾದಾರ, ಆರ್‌.ಸಿ. ಜಂಬಗಿ, ಎಂ.ಎನ್‌. ಬಿರಾದಾರ, ಬಿ.ಜಿ. ಪಾಟೀಲ, ಶಾಂತಗೌಡ ಬಿರಾದಾರ, ಎಂ.ಎಂ. ಬಿರಾದಾರ, ನಾನಾಗೌಡ ಪಾಟೀಲ, ಎಸ್‌.ಬಿ. ಬಿರಾದಾರ, ಜಿ.ಬಿ. ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next