Advertisement

ಸಂಚಾರ ನಿಯಮ ಪಾಲಿಸಿ

04:28 PM Jan 13, 2020 | Naveen |

ತಾಳಿಕೋಟೆ: ವಾಹನಗಳ ಚಲಾವಣೆ ಸಮಯದಲ್ಲಿ ರಸ್ತೆ ನಿಯಮಗಳ ಅರಿವು ಮತ್ತು ಪಾಲನೆ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಪಿಎಸೈ ವಸಂತ ಬಂಡಗಾರ ಹೇಳಿದರು.

Advertisement

ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ಸಂಗಮೇಶ್ವರ ಸಭಾಭವನದಲ್ಲಿ ಪ್ರೌಢ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸ್ತೆ ನಿಯಮ ಮತ್ತು ಪಾಲನೆ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಸ್ತೆ ನಿಯಮಗಳನ್ನು ಬಹುತೇಕರು ಪಾಲಿಸುತ್ತಿಲ್ಲ. ರಸ್ತೆ ಮೇಲೆ ಅಡ್ಡಾದಿಡ್ಡಿ ವಾಹನ ನಿಲ್ಲಿಸುವದು, ಟಪ್ಪಾ ಮೇಲೆ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವದು ಕಾಣುತ್ತಿದ್ದೇವೆ. ಅಂತವರಿಗೆ ಈಗಾಗಲೇ ಕೇಸು ಕೂಡಾ ಕೊಡಲಾಗಿದೆ. ದ್ವಿಚಕ್ರ ವಾಹನ ವಿರಲಿ, ದೊಡ್ಡ ವಾಹನವೇ ಇರಲಿ ಕಡ್ಡಾಯವಾಗಿ ಲೈಸೆನ್ಸ್‌, ಆರ್‌ಸಿ ಬುಕ್‌, ಇನ್ಸೂರೆನ್ಸ್‌ ಹೊಂದುವದು ಅಗತ್ಯವಾಗಿದೆ ಎಂದರು.

ಬೈಕ್‌ ಸವಾರರ ಪೈಕಿ ವಿದ್ಯಾರ್ಥಿಗಳು ಹೊಸ ಹುರುಪಿನಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ಚಲಾಯಿಸುವದನ್ನು ಕಾಣುತ್ತೇವೆ. ಹೆಲ್ಮೇಟ್‌, ಲೈಸೆನ್ಸ್‌ ಮತ್ತು ಇನ್ಸೂರೆನ್ಸ್‌ ಅಥವಾ ಪಾಸಿಂಗ್‌ ಇಲ್ಲದೇ ವಾಹನ ಓಡಿಸುವದು ಅಪರಾಧವಾಗಿದೆ. ಎಲ್ಲಾದರೂ ಅಪಘಾತ ಸಂಭವಿಸಿದರೆ ವಾಹನ ಮಾಲೀಕನ ನೇರ ಹೊಣೆಗಾರನಾಗುವದರ ಜೊತೆಗೆ ಆಗು ಹೋಗುವುಗಳಿಗೆ ಜವಾಬ್ದಾರನಾಗುತ್ತಾನೆ. ಅದಕ್ಕೆ ಯಾರೂ ಲೈಸೆನ್ಸ್‌ ಮತ್ತು ಸಂಬಂಧಿಸಿದ ಕಾಗದ ಪತ್ರಗಳು ಇಲ್ಲದೇ ವಾಹನಗಳನ್ನು ಓಡಿಸಬೇಡಿ. ವಾಹನವನ್ನು ರಾತ್ರಿ
ಸಮಯದಲ್ಲಿ ಮನೆ ಹೊರಗೆ ಹಚ್ಚುವಾಗ ಸರಿಯಾಗಿ ಕೀಲಿ ಹಾಕಿ ಹ್ಯಾಂಡಲ್‌ ಲಾಕ್‌ ಮಾಡಲಾಗಿದೆಯೇ ಎಂಬುದನ್ನು ಪರಿಕ್ಷೀಸಿಕೊಳ್ಳಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಸತೀಶ ತಿವಾರಿ ಮಾತನಾಡಿ, ಅವಸರದ ಪ್ರಯಾಣ ಪ್ರಾಣಕ್ಕೆ ಹಾನಿಕರವಾಗಿದೆ. ಅನೇಕ ಕಡೆ ಅವಸರ ಪ್ರಯಾಣದಿಂದ ಅಪಘಾತಕ್ಕಿಡಾಗಿ ಸಾವನಪ್ಪಿದ್ದಾರೆ. ಕೆಲವರು ಬದುಕುಳಿದರೂ ಕೈ ಕಾಲುಗಳನ್ನು ಮುರಿದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಅಂಗವಿಕಲತೆಗೊಳಗಾಗಿದ್ದಾರೆ. ಅದಕ್ಕಾಗಿ ಅವಸರ ಪಟ್ಟು ಲೈಸೆನ್ಸ್‌ ಇಲ್ಲದೇ ವಾಹನ ಚಲಾವಣೆಯಿಂದ ವಿದ್ಯಾರ್ಥಿಗಳು ಹಿಂದಕ್ಕೆ ಸರಿಯಬೇಕೆಂದು ತಿಳಿ ಹೇಳಿದರು. ಸಂಗಮೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್‌. ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿ.ಐ. ಹಿರೇಹೊಳಿ, ಆರ್‌.ಕೆ. ಹೊಟಗಾರ, ಆರೀಫ್‌ ಸಗರ, ಎಂ.ಎಸ್‌. ರಾಯಗೊಂಡ, ಆರ್‌.ಎಸ್‌. ಭಂಗಿ, ಸಂಗಮೇಶ ಚಲವಾದಿ, ಎಂ.ಎಲ್‌. ಪಟ್ಟೇದ, ರವಿ ಪವಾರ, ಶಿವನಗೌಡ ಬಿರಾದಾರ, ಶಿವಪ್ಪ ಹಾಳಗೋಡಿ, ಬಿ.ಜಿ. ಬಲಕಲ್ಲ, ರೇವಪ್ಪ ಒಡೆಯರ, ಮಹೇಶ ದೊಡಮನಿ, ಎಸ್‌.ಐ. ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next