Advertisement
ಅಮೆರಿಕದ ವಾಯುಪಡೆಯ ನೆರವಿನ ಮೂಲಕ ಶನಿವಾರ ಸೇನಾಪಡೆಯು ದೇಶಾದ್ಯಂತ ತಾಲಿಬಾನ್ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ನಂಗರ್ಹಾರ್, ಲಖ್‌ಮನ್, ಪಕ್ತಿಕಾ, ಪಕ್ತಿಯಾ, ಕಂದಹಾರ್, ಉರುಜಾYನ್, ಹೆರಾತ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ನಡೆದ ದಾಳಿಯಲ್ಲಿ 570 ಉಗ್ರರು ಸಾವಿಗೀಡಾಗಿ, 309 ಮಂದಿ ಗಾಯಗೊಂಡಿದ್ದಾರೆ.
Related Articles
Advertisement
ದಿನಕ್ಕೊಂದರಂತೆ ಕಳೆದ 3 ದಿನಗಳಲ್ಲಿ 4 ಪ್ರಾಂತೀಯ ರಾಜಧಾನಿಗಳು ತಾಲಿಬಾನ್ ಹಿಡಿತಕ್ಕೆ ಸಿಕ್ಕಿವೆ. ಭಾನುವಾರ ಉಗ್ರರು ಉತ್ತರ ಅಫ್ಘಾನಿಸ್ಥಾನದ ಕುಂಡುಜ್ ಹಾಗೂ ಸಾರ್-ಇ-ಪುಲ್ ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಗವರ್ನರ್‌ನ ಕಚೇರಿ, ಪೊಲೀಸ್ ಪ್ರಧಾನ ಕಚೇರಿ, ಕಾರಾಗೃಹವೂ ಈಗ ಅವರ ನಿಯಂತ್ರಣಕ್ಕೆ ಬಂದಂತಾಗಿದೆ. ತನ್ನ ವಶದಲ್ಲಿರುವ ನಗರಗಳಲ್ಲಿ ಆಸ್ತಿಪಾಸ್ತಿ ಲೂಟಿ, ಜೈಲಿನಲ್ಲಿರುವ ಕೈದಿಗಳ ಬಿಡುಗಡೆ ಮತ್ತಿತರ ಕುಕೃತ್ಯಗಳನ್ನು ತಾಲಿಬಾನ್ ಮಾಡುತ್ತಿದೆ.
ಯುಎನ್‌ಎಸ್‌ಸಿ ಸದಸ್ಯರ ಖಂಡನೆ :
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿರುವ ಭಾರತವು ಅಫ್ಘಾನಿಸ್ಥಾನದ ಪರಿಸ್ಥಿತಿ ಕುರಿತು ಕರೆದಿದ್ದ ತುರ್ತು ಸಭೆಯಿಂದಾಗಿ ಅಫ್ಘಾನ್‌ಗೆ ನೆರವಾಗಿದೆ ಎಂದು ಯುಎನ್‌ಎಸ್‌ಸಿ ಹಾಲಿ ಅಧ್ಯಕ್ಷ ಟಿ.ಎಸ್.ತಿರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಈ ಸಭೆ ನಡೆಸಿದ ಕಾರಣದಿಂದ, ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳೂ ಆಫ^ನ್‌ನಲ್ಲಿ ಹಿಂಸಾಚಾರ ಅಂತ್ಯವಾಗಬೇಕು ಎಂದು ಆಗ್ರಹಿಸಿವೆ. ಜತೆಗೆ, ಬಾಹ್ಯ ಜಗತ್ತಿಗೆ ಆಫ್ಘಾನಿಸ್ಥಾನದಲ್ಲಿನ ಸದ್ಯದ ಪರಿಸ್ಥಿತಿಯ ಅರಿವು ಮೂಡುವಂತೆ ಮಾಡಿದೆ ಎಂದು ತಿರುಮೂರ್ತಿ ಹೇಳಿದ್ದಾರೆ. ಭಾರತವು ಯುಎನ್‌ಎಸ್‌ಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಮೊದಲೇ ವಾರವೇ ಅಫ್ಘಾನ್‌ನ ಪರಿಸ್ಥಿತಿ ಕುರಿತು ಚರ್ಚೆಗೆ ಸಭೆಯನ್ನು ಮೀಸಲಿರಿಸಿತ್ತು.